Pavithra Naresh: ಹೊಸದಾಗಿ ಮದುವೆಯಾಗಿರುವ ಪವಿತ್ರ ಲೋಕೇಶ್ ಹಾಗೂ ನರೇಶ್ ಹನಿಮೂನ್ ನಲ್ಲಿ ಕಷ್ಟ ಪಡ್ತಿದ್ದಾರೆ ನೋಡಿ.

Pavithra Lokesh ಸಾಕಷ್ಟು ಸಮಯಗಳಿಂದ ತೆಲುಗು ಚಿತ್ರನಟ ನರೇಶ್(Naresh) ಹಾಗೂ ಕನ್ನಡ ಚಿತ್ರರಂಗದ ಖ್ಯಾತ ಪೋಷಕ ನಟಿಯಾಗಿದ್ದ ಪವಿತ್ರ ಲೋಕೇಶ್ ರವರ ನಡುವೆ ಸಂಬಂಧ ಇದೆ ಎನ್ನುವ ಗಾಳಿ ಸುದ್ದಿಗಳು ಹಾಗೂ ಊಹಾಪೋಹಗಳು ಓಡಾಡುತ್ತಿದ್ದವು. ಆದರೆ ನಿನ್ನೆಯಷ್ಟೇ ಮದುವೆ ಆಗುವ ಮೂಲಕ ಎಲ್ಲಾ ಗಾಳಿ ಸುದ್ದಿಗಳು ಈಗ ನಿಜವಾಗಿವೆ. ಇವರಿಬ್ಬರ ಮದುವೆ ವಿಡಿಯೋ ಯಾವುದೇ ಸಿನಿಮಾಗೂ ಕೂಡ ಕಡಿಮೆ ಇಲ್ಲ ಎನ್ನುವಂತಿದೆ.

ಇನ್ನು ನಟ ನರೇಶ್ ರವರಿಗೆ ಇದು ನಾಲ್ಕನೇ ಮದುವೆಯಾಗಿದ್ದು ನಟಿ ಪವಿತ್ರ ಲೋಕೇಶ್(Pavithra Lokesh) ರವರಿಗೆ ಇದು ಎರಡನೇ ಮದುವೆಯಾಗಿದೆ. ಕನ್ನಡ ಚಿತ್ರರಂಗದ ಖ್ಯಾತ ಪೋಷಕ ನಟ ಆಗಿದ್ದ ಸುಚೇಂದ್ರ ಪ್ರಸಾದ್ ರವರನ್ನು ಮದುವೆಯಾಗಿದ್ದ ಪವಿತ್ರ ಲೋಕೇಶ್ ರವರು ಸಡನ್ ಆಗಿ ಈಗ ಸಾವಿರಾರು ಕೋಟಿ ರೂಪಾಯಿ ಆಸ್ತಿಗಳ ಒಡೆಯ ಆಗಿರುವ ನರೇಶ್(Naresh Vijaya Krishna) ರವರನ್ನು ಮದುವೆಯಾಗಿದ್ದಾರೆ.

ಇನ್ನು ಇವರಿಬ್ಬರ ನಡುವಿನ 19 ವರ್ಷ ವಯಸ್ಸಿನ ಅಂತರವಿದ್ದರೂ ಕೂಡ ಇವರಿಬ್ಬರು ಮದುವೆ ಆಗಿರುವುದು ಸಾಕಷ್ಟು ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿದೆ. ಇನ್ನು ಈಗ ಇವರಿಬ್ಬರು ಹನಿಮೂನ್(Honeymoon) ನಲ್ಲಿ ಕಷ್ಟ ಪಡುತ್ತಿರುವ ವೀಡಿಯೋ ಎಲ್ಲಾ ಕಡೆ ವೈರಲ್ ಆಗುತ್ತಿದೆ.

ಹೌದು ಗೆಳೆಯರೇ ನಟ ನರೇಶ್ ಹಾಗೂ ಪವಿತ್ರ ಲೋಕೇಶ್(Pavitra Lokesh Marriage) ದಂಪತಿಗಳು ಇಬ್ಬರೂ ಕೂಡ ಹನಿಮೂನ್ ಗಾಗಿ ದುಬೈ ಮರುಭೂಮಿಗೆ ಹೋಗಿದ್ದು ಅಲ್ಲಿ ನಡೆಯುವಾಗ ಇವರಿಬ್ಬರು ಕಷ್ಟ ಪಡುತ್ತಿರುವ ವಿಡಿಯೋ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ. ಇದನ್ನು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಶೇರ್ ಮಾಡಿಕೊಂಡು ಟ್ರೋಲ್ ಮಾಡುವುದಕ್ಕೆ ಆರಂಭಿಸಿದ್ದಾರೆ.

Leave a Comment

error: Content is protected !!