Salman Khan: ಸಲ್ಮಾನ್ ಖಾನ್ ಜೊತೆ ಮದುವೆ ವಿಚಾರದ ಬಗ್ಗೆ ನಟಿ ಪೂಜಾ ಹೆಗಡೆ ಓಪನ್ ಆಗಿಯೇ ಏನು ಹೇಳಿದ್ದಾರೆ ಗೊತ್ತಾ? ಲೇಟೆಸ್ಟ್ ನ್ಯೂಸ್.

Pooja Hegde ಕರಾವಳಿ ಬೆಡಗಿ ಆಗಿರುವಂತಹ ಪೂಜಾ ಹೆಗ್ಡೆ(Pooja Hegde) ಮೊಹೆಂಜೋದಾರೋ ಸಿನಿಮಾದ ಮೂಲಕ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಕಾಲಿಟ್ಟು ನಂತರ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಕೂಡ ಈಗಾಗಲೇ ದೊಡ್ಡ ಮಟ್ಟದಲ್ಲಿ ಬಹು ಬೇಡಿಕೆಯ ನಾಯಕ ನಟಿಯಾಗಿ ಕಾಣಿಸಿಕೊಂಡಿರುವುದು ನಿಮಗೆಲ್ಲರಿಗೂ ಗೊತ್ತಿರುವಂತಹ ವಿಚಾರವಾಗಿದೆ. ಸದ್ಯಕ್ಕೆ ಅವರು ಸಲ್ಮಾನ್ ಖಾನ್(Salman Khan) ನಾಯಕನಟನಾಗಿ ಕಾಣಿಸಿಕೊಂಡಿರುವಂತಹ ಕಿಸಿಕಾ ಬಾಯ್ ಕಿಸಿಕ ಜಾನ್(Kisi Ka Bhai Kisi Ka Jaan) ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಸಿನಿಮಾ ಬಿಡುಗಡೆಯಾಗುವ ಮುನ್ನವೇ ಪೂಜಾ ಹೆಗ್ಡೆ ಹಾಗೂ ಸಲ್ಮಾನ್ ಖಾನ್(Salman Khan) ಅವರ ನಡುವೆ ಲವ್ವಿ ಡವ್ವಿ ನಡೆಯುತ್ತಿದೆ ಎಂಬುದಾಗಿ ಎಲ್ಲಾ ಕಡೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸುದ್ದಿ ಆಗುತ್ತಿದೆ. ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿಯೇ ಇದು ಪ್ರಾರಂಭವಾಗಿದೆ ಎಂಬುದಾಗಿ ಸುದ್ದಿ ಇದೆ.

ಇವರಿಬ್ಬರ ನಡುವಿನ ವಯಸ್ಸಿನ ಅಂತರ ಸಾಕಷ್ಟಿದ್ದರೂ ಕೂಡ ಈ ಸುದ್ದಿ ಬರಲು ಕಾರಣ ಏನೆಂದರೆ ಪೂಜಾ ಹೆಗ್ಡೆ(Pooja Hegde) ಅವರ ಸಹೋದರನ ಮದುವೆ ಇತ್ತೀಚಿಗಷ್ಟೇ ಮಂಗಳೂರಿನಲ್ಲಿ ನಡೆದಿತ್ತು. ಈ ಸಂದರ್ಭದಲ್ಲಿ ಸಲ್ಮಾನ್ ಖಾನ್ ಕೂಡ ಮದುವೆಗೆ ಆಗಮಿಸಿ ಕಾರ್ಯಕ್ರಮದ ಮೆರುಗನ್ನು ಇನ್ನಷ್ಟು ಹೆಚ್ಚಿಸಿದ್ದರು. ಇಲ್ಲಿಂದಲೇ ಅನುಮಾನ ಹೆಚ್ಚಾಗಿದ್ದು ಕೂಡ ಹೌದು. ಈಗ ಪೂಜಾ ಹೆಗ್ಡೆ ಇದರ ಬಗ್ಗೆ ಏನು ಹೇಳುತ್ತಿದ್ದಾರೆ ಎಂಬುದನ್ನು ತಿಳಿಯೋಣ.

ಸಲ್ಮಾನ್ ಖಾನ್(Salman Khan) ಅವರ ಜೊತೆಗಿನ ಲವ್ ಹಾಗೂ ಮ್ಯಾರೇಜ್ ವಿಚಾರದ ಕುರಿತಂತೆ ಮಾಧ್ಯಮದವರು ಪ್ರಶ್ನೆ ಕೇಳಿದಾಗ ಇದೆಲ್ಲ ಗಾಳಿಮಾತು ಸತ್ಯಕ್ಕೆ ದೂರ ವಾದಂತಹ ಮಾತುಗಳ ಕುರಿತಂತೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂಬುದಾಗಿ ಹೇಳುವ ಮೂಲಕ ಈ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ.

Leave a Comment

error: Content is protected !!