Actress Prema: ಅದೊಂದು ಆರೋಪದ ವಿರುದ್ಧ ಕೆಂಡಮಂಡಲವಾದ ನಟಿ ಪ್ರೇಮ! ಅವರ ಬದುಕನ್ನೇ ಹಿಂಡಿತ್ತಂತೆ ಆ ಆರೋಪ!

Prema ಕನ್ನಡ ಚಿತ್ರರಂಗದ ಖ್ಯಾತ ನಟಿಯರಲ್ಲಿ ಒಬ್ಬರಾಗಿ ನಟಿ ಪ್ರೇಮ(Actress Prema) ಅವರು ಕೂಡ ಕಾಣಿಸಿಕೊಳ್ಳುತ್ತಾರೆ. ಪ್ರೇಮ ಅವರು ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ಟಾಪ್ ನಾಯಕ ನಟರುಗಳ ಜೊತೆಗೆ ನಾಯಕಿಯಾಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅಷ್ಟರಮಟ್ಟಿಗೆ ಚಿತ್ರರಂಗದಲ್ಲಿ ಅವರ ಹವಾ ಇತ್ತು.

ಎಲ್ಲಕ್ಕಿಂತ ಪ್ರಮುಖವಾಗಿ ಆಪ್ತಮಿತ್ರ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅವರ ನಟನೆ ಎನ್ನುವುದು ನಿಜಕ್ಕೂ ಕೂಡ ಪ್ರತಿಯೊಬ್ಬ ಸಿನಿಮಾ ಪಂಡಿತರನ್ನು ಕೂಡ ಮೆಚ್ಚಿಸುವಂತಹ ಪರ್ಫಾರ್ಮೆನ್ಸ್ ಅದಾಗಿತ್ತು. ಪ್ರತಿಯೊಬ್ಬರೂ ಕೂಡ ನಟಿ ಪ್ರೇಮ(Prema) ಅವರ ಪ್ರತಿಯೊಂದು ಸಿನಿಮಾಗಳ ನಟನೆಯನ್ನು ಮೆಚ್ಚಿ ಕನ್ನಡ ಚಿತ್ರರಂಗದ ಅತ್ಯಂತ ಅಮೂಲ್ಯ ಹಾಗೂ ಅಪರೂಪದ ನಟಿ ಎಂಬುದಾಗಿ ಅವರಿಗೆ ಬಿರುದನ್ನು ನೀಡಿದ್ದರು.

ನಟಿ ಪ್ರೇಮ(Prema) ಅವರ ವಿವಾಹದ ನಂತರ ಹಾಗೂ ವಿವಾಹ ವಿಚ್ಛೇದನದ ಸಂದರ್ಭದಲ್ಲಿ ಕನ್ನಡ ಚಿತ್ರರಂಗದಲ್ಲಿ ಅವರು ಯಾವುದೇ ಸಿನಿಮಾಗಳಲ್ಲಿ ನಟಿಸಿರಲಿಲ್ಲ ಮತ್ತು ಅವರ ವಿರುದ್ಧ ಎನಿಸುವಂತಹ ಕೆಲವೊಂದು ಅಸಹಜ ಹೇಳಿಕೆಗಳು ಕೂಡ ಕನ್ನಡ ಚಿತ್ರರಂಗದಲ್ಲಿ ಗಾಳಿ ಸುದ್ದಿಯಾಗಿ ಕೇಳಿ ಬಂದವು. ಅದರಲ್ಲೂ ಆ ಹೇಳಿಕೆ ಮಾತ್ರ ಪ್ರೇಮ ಅವರ ಮನಸ್ಸನ್ನು ಹಿಂಡಿತ್ತು ಎನ್ನಬಹುದಾಗಿದೆ. ಹಾಗಿದ್ದರೆ ಬನ್ನಿ ಅಷ್ಟಕ್ಕೂ ಆ ಹೇಳಿಕೆಗಳೇನೆಂಬುದನ್ನು ತಿಳಿದುಕೊಳ್ಳೋಣ.

ಹೌದು ಮಿತ್ರರೇ ನಟಿ ಪ್ರೇಮ(Prema) ಅವರು ವಿವಾಹ ವಿಚ್ಛೇದನದ ದುಃಖವನ್ನು ಕಳೆದುಕೊಳ್ಳಲು ನ್ಯೂಜಿಲ್ಯಾಂಡ್ ಹಾಗೂ ಆಸ್ಟ್ರೇಲಿಯಾದಲ್ಲಿ ಇದ್ದಂತಹ ತಮ್ಮ ಗೆಳತಿಯರ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಅವರಿಗೆ ಕ್ಯಾ’ ನ್ಸರ್ ಕಾಯಿಲೆ ಇದೆ ಅದಕ್ಕಾಗಿ ವಿದೇಶದಲ್ಲಿ ಚಿಕಿತ್ಸೆ ಪಡೆಯಲು ಹೋಗಿದ್ದಾರೆ ಎನ್ನುವುದಾಗಿ ಗಾಳಿ ಸುದ್ದಿ ಹಬ್ಬಿಸಲಾಗಿತ್ತು. ನಿಜವಾಗಿ ಆ ಸಂದರ್ಭದಲ್ಲಿ ಪ್ರೇಮ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ ಹೀಗಿದ್ದರೂ ಕೂಡ ಅವರ ವಿರುದ್ಧ ಸುಳ್ಳು ಹೇಳಿಕೆ ನೀಡಿದ್ದು ಅವರ ಬೇಸರಕ್ಕೆ ಕಾರಣವಾಗಿತ್ತು.

Leave a Comment

error: Content is protected !!