Rebel Star Prabhas: ಎಲ್ಲಾ ಶೂಟಿಂಗ್ ಕ್ಯಾನ್ಸಲ್ ಗೊಳಿಸಿ ವಿದೇಶಕ್ಕೆ ಹಾರಿದ ರೆಬಲ್ ಸ್ಟಾರ್ ಪ್ರಭಾಸ್! ಆರೋಗ್ಯದಲ್ಲಿ ಭಾರಿ ಏರುಪೇರು!

Prabhas ನಟ ಪ್ರಭಾಸ್ ರವರು ಬಾಹುಬಲಿ(Bahubali) ಸಿನಿಮಾಗಳ ಯಶಸ್ಸಿನ ನಂತರ ಕೇವಲ ಭಾರತ ಮಾತ್ರವಲ್ಲದೆ ವಿದೇಶಿ ಚಿತ್ರರಂಗದ ಖ್ಯಾತನಾಮರಿಂದಲೂ ಕೂಡ ಮೆಚ್ಚುಗೆಗೆ ಒಳಗಾದಂತಹ ನಟ. ಯಾಕೆಂದರೆ ಒಂದು ಸಿನಿಮಾಗೆ ಅಷ್ಟೊಂದು ವರ್ಷಗಳನ್ನು ನೀಡಿ ಆ ಪಾತ್ರಕ್ಕೆ ಸರಿಯಾಗಿ ಹೊಂದಿಕೊಳ್ಳುವಂತಹ ರೀತಿಯಲ್ಲಿ ಜೀವನ ಶೈಲಿಯನ್ನು ಕೂಡ ಹದ್ದು ಬಸ್ತಿನಲ್ಲಿ ಇಟ್ಟುಕೊಳ್ಳುವುದು ಅಷ್ಟೊಂದು ಸುಲಭದ ಮಾತಲ್ಲ ಆದರೆ ಪ್ರಭಾಸ್ ರವರು ಅದರಲ್ಲಿ ಯಶಸ್ವಿಯಾಗಿದ್ದಾರೆ.

ಆದರೆ ಅದಾದ ನಂತರ ನಟಿಸಿದ ಸಿನಿಮಾಗಳು ಯಾವುವು ಕೂಡ ಪ್ರಭಾಸ್(Prabhas) ರವರ ಕೈ ಹಿಡಿದಿರಲಿಲ್ಲ. ಇನ್ನು ಸಲಾರ್(Salaar) ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಕೂಡ ಮೇಲಿನಿಂದ ಕೆಳಕ್ಕೆ ಬಿದ್ದು ಮೊಣಕಾಲು ಇಂಜುರಿಯನ್ನು ಪ್ರಭಾಸ್ ರವರು ಮಾಡಿಕೊಂಡಿದ್ದರು. ಕೂಡಲೇ ಶಸ್ತ್ರಚಿಕಿತ್ಸೆಯನ್ನು ಮಾಡಿಕೊಂಡಿದ್ದರು ಕೂಡ ಇದಾದ ನಂತರ ಅವರ ಆರೋಗ್ಯದ ಪರಿಸ್ಥಿತಿ ಕೂಡ ಏರುಪೇರು ಆಗಲು ಆರಂಭವಾಗಿತ್ತು.

ಇತ್ತೀಚಿಗೆ ಸಾಹೋ ರಾಧೇ ಶ್ಯಾಮ್ ಹಾಗೂ ಮುಂದೆ ಬಿಡುಗಡೆ ಆಗಲಿರುವ ಆದಿಪುರುಷ್(Adipurush) ಸಿನಿಮಾಗಳು ಕೂಡ ಸಾಕಷ್ಟು ಟೀಕೆಗೆ ಒಳಗಾಗುತ್ತಿದ್ದು ಒಂದು ಕಾಲದಲ್ಲಿ ಬಾಹುಬಲಿ ಸಂದರ್ಭದಲ್ಲಿ ಪ್ರಭಾಸ್ ರವರು ಪಡೆಯುತ್ತಿದ್ದ ವಿಮರ್ಶಗಳಿಗೂ ಈಗ ಇರುವಂತಹ ವಿಮರ್ಶೆಗು ಸಾಕಷ್ಟು ವ್ಯತ್ಯಾಸವಿದೆ ಎಂದು ಹೇಳಬಹುದಾಗಿದೆ. ಇದರ ನಡುವಲ್ಲಿ ಅವರ ಆರೋಗ್ಯ ಪರಿಸ್ಥಿತಿ ಕೂಡ ಹದಗೆಟ್ಟಿದೆ ಎಂಬುದಾಗಿ ತಿಳಿದು ಬಂದಿದ್ದು ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗುವಂತ ಪರಿಸ್ಥಿತಿ ಬಂದಿದೆ.

ಸದ್ಯಕ್ಕೆ ಪ್ರಭಾಸ್(Prabhas) ರವರು ಇರುವಂತಹ ಎಲ್ಲಾ ಸಿನಿಮಾದ ಚಿತ್ರೀಕರಣವನ್ನು ಕೂಡ ನಿಲ್ಲಿಸಿ ನೇರವಾಗಿ ವಿದೇಶಕ್ಕೆ ಹೋಗಿ ಟ್ರೀಟ್ಮೆಂಟ್ ತೆಗೆದುಕೊಳ್ಳುತ್ತಿದ್ದಾರೆ. ಚಿಕಿತ್ಸೆ ಪಡೆದುಕೊಂಡು ಕ್ಷೇಮವಾಗಿ ಪುನಹ ಬಂದು ಬಾಹುಬಲಿ ರೀತಿಯಲ್ಲಿ ದೊಡ್ಡಮಟ್ಟದ ಸೂಪರ್ ಹಿಟ್ ಸಿನಿಮಾ ವನ್ನು ಅವರ ಅಭಿಮಾನಿಗಳಿಗೆ ನೀಡಲಿ ಎಂಬುದಾಗಿ ಹಾರೈಸೋಣ ಸ್ನೇಹಿತರೇ.

Leave a Comment

error: Content is protected !!