Weekend With Ramesh: ಎಲ್ಲರ ನೆಚ್ಚಿನ ಪ್ರಭುದೇವ ಅವರ ನೆಚ್ಚಿನ ಕನ್ನಡದ ನಟ ಯಾರು ಗೊತ್ತಾ?

Prabhudeva ಮೈಸೂರಿನ ಕೊಳ್ಳೇಗಾಲದ ಮೂಲದವರಾಗಿರುವಂತಹ ಪ್ರಭುದೇವ(Prabhudeva) ಅವರು ತಮ್ಮ ಅದ್ಭುತ ಡ್ಯಾನ್ಸ್ ಮೂಲಕ ಕರ್ನಾಟಕ ರಾಜ್ಯದಿಂದ ಪ್ರಾರಂಭಿಸಿ ಇಂದು ಇಡೀ ಇಂಡಿಯಾದಲ್ಲಿ ತಮ್ಮ ಹೆಸರಿನ ಗುರುತನ್ನು ದೊಡ್ಡ ಮಟ್ಟದಲ್ಲಿ ಸ್ಥಾಪಿಸಿದ್ದಾರೆ. ತಮ್ಮ ಜೀವನದ ಕುರಿತಂತೆ ಕನ್ನಡದ ಅತ್ಯಂತ ಜನಪ್ರಿಯ ಕಾರ್ಯಕ್ರಮ ಆಗಿರುವಂತಹ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಸಾಧಕರ ಸೀಟಿನಲ್ಲಿ ತಮ್ಮ ಜೀವನದ ಕುರಿತಂತೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಪ್ರತಿಯೊಬ್ಬರಿಗೂ ಕೂಡ ಸ್ಪೂರ್ತಿಯಾಗುವಂತಹ ಜೀವನ ಚರಿತ್ರೆಯನ್ನು ಹೊಂದಿದೆ ಪ್ರಭುದೇವ(Prabhudeva) ಅವರ ಜೀವನಗಾಥೆ.

ದಕ್ಷಿಣ ಭಾರತ ಸೇರಿದಂತೆ ಬಾಲಿವುಡ್ ನಲ್ಲಿ ಕೂಡ ತಮ್ಮ ಜಲ್ವಾವನ್ನು ತೋರಿಸಿರುವ ಪ್ರಭುದೇವ(Prabhudeva) ಅವರು ಇಡೀ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಬಹು ಬೇಡಿಕೆಯ ಆರ್ಟಿಸ್ಟ್ ಆಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಡೀ ಭಾರತೀಯ ಚಿತ್ರರಂಗದಲ್ಲಿ ಹಲವಾರು ಭಾಷೆಗಳಲ್ಲಿ ನಿರ್ದೇಶಕನಾಗಿ ಕೂಡ ತಮ್ಮ ಪ್ರತಿಭೆಯನ್ನು ಪ್ರೇಕ್ಷಕರಿಗೆ ತೋರ್ಪಡಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಟಿಸಿದ್ದು ಕಡಿಮೆ ಆದರೂ ಕೂಡ ನಟಿಸಿದ್ದಷ್ಟು ದಿನ ಪ್ರೇಕ್ಷಕರಿಗೆ ಮನೋರಂಜನೆಯನ್ನು ಮಾತ್ರ ಮಿಸ್ ಮಾಡಿರಲಿಲ್ಲ.

ಇನ್ನು ವೀಕೆಂಡ್ ವಿತ್ ರಮೇಶ್(Weekend With Ramesh) ಕಾರ್ಯಕ್ರಮದಲ್ಲಿ ಬಂದಿದ್ದಂತಹ ಪ್ರಭುದೇವ ಅವರಿಗೆ ಅವರ ಜೀವನದ ಕುರಿತಂತೆ ಸಾಕಷ್ಟು ಪ್ರಶ್ನೆಗಳನ್ನು ಕೇಳಲಾಗಿತ್ತು ಅದಕ್ಕೆ ಅವರು ಸಮರ್ಪಕವಾದ ಉತ್ತರವನ್ನು ಕೂಡ ನೀಡಿ ಪ್ರೇಕ್ಷಕರಿಗೆ ಅವರ ಜೀವನದ ಕುರಿತಂತೆ ಗೊತ್ತಿಲ್ಲದ ಕಹಾನಿಗಳನ್ನು ಕೂಡ ಬಿಚ್ಚಿಟ್ಟಿದ್ದಾರೆ. ಅದರಲ್ಲೂ ವಿಶೇಷವಾಗಿ ಪ್ರೇಕ್ಷಕರಲ್ಲಿ ನಿಮ್ಮ ನೆಚ್ಚಿನ ಕನ್ನಡ ನಟ ಯಾರು ಎಂದು ಕೇಳಿದಾಗ ಅವರು ನೀಡಿದ ಉತ್ತರ ವಿಶೇಷವಾಗಿತ್ತು.

ಈ ಪ್ರಶ್ನೆ ಬರುತ್ತಿದ್ದಂತೆ ಪ್ರಭುದೇವ ಅವರು ಒಂದು ನಿಮಿಷವು ಕೂಡ ಯೋಚನೆ ಮಾಡದೆ ನೇರವಾಗಿ ಶಂಕರ್ ನಾಗ್ ಅವರ ಹೆಸರನ್ನು ಹೇಳಿ ಶಂಕರ್ ನಾಗ್(Shankar Nag) ನನ್ನ ನೆಚ್ಚಿನ ನಟ ಎಂಬುದಾಗಿ ಹೇಳುತ್ತಾರೆ. ಅತ್ಯಂತ ಕಡಿಮೆ ವಯಸ್ಸಿನಲ್ಲಿ ನಮ್ಮನ್ನೆಲ್ಲ ಅಗಲಿದ್ದರೂ ಕೂಡ ಇಂದಿಗೂ ಕೇವಲ ಪ್ರೇಕ್ಷಕರೇ ಮಾತ್ರವಲ್ಲದೆ ಸೆಲೆಬ್ರಿಟಿಗಳಿಗೂ ಕೂಡ ಅವರು ನೆಚ್ಚಿನ ನಟ ಎನ್ನುವುದನ್ನು ಪ್ರತಿಯೊಬ್ಬರು ಕೂಡ ಒಪ್ಪಿಕೊಳ್ಳಲೇ ಬೇಕಾಗಿದೆ.

Leave a Comment

error: Content is protected !!