Dr Bro: ಡಾಕ್ಟರ್ ಬ್ರೋ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬರ್ತಾರಾ? ರಮೇಶ್ ಅರವಿಂದ್ ಹೇಳಿದ್ದೆ ಬೇರೆ!

Ramesh Aravind ಇತ್ತೀಚಿಗಷ್ಟೇ ನಿಮಗೆಲ್ಲರಿಗೂ ತಿಳಿದಿರಬಹುದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಸಾಧಕರ ಸೀಟಿನಲ್ಲಿ ಕನ್ನಡದ ಖ್ಯಾತ ಯುಟ್ಯೂಬರ್ ಆಗಿರುವ ಡಾ ಬ್ರೋ(Dr Bro) ಬಂದು ಕೂರುತ್ತಾರೆ ಎನ್ನುವ ಪ್ರಶ್ನೆಗೆ ಜೀ ಕನ್ನಡ ವಾಹಿನಿಯ ಮುಖ್ಯಸ್ಥ ಆಗಿರುವಂತಹ ರಾಘವೇಂದ್ರ ಹುಣಸೂರು(Raghavendra Hunsur) ಅವರು ಉಡಾಫೆಯ ಉತ್ತರಗಳನ್ನು ನೀಡಿದ್ದು ನಿಜಕ್ಕೂ ಕೂಡ ಪ್ರತಿಯೊಬ್ಬರಿಗೂ ಬೇಸರವಾಗಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ಕೂಡ ರಮ್ಯಾ(Ramya) ಅವರ ಎಪಿಸೋಡ್ ಆದ ನಂತರ ಇದಕ್ಕಿಂತ ಚೆನ್ನಾಗಿ ಕನ್ನಡವನ್ನು ಮಾತನಾಡುವ ಹಾಗೂ ಪ್ರಪಂಚದ ಮೂಲೆ ಮೂಲೆಯನ್ನು ಕೂಡ ಕನ್ನಡಿಗರಿಗೆ ತೋರಿಸುವಂತಹ ಡಾ. ಬ್ರೋ(Dr Bro) ಅವರನ್ನು ತಂದು ಕೂರಿಸಿದರೆ ನಿಮ್ಮ ಗಂಟು ಏನು ಹೋಗುತ್ತಿತ್ತು ಎಂಬುದಾಗಿ ಕೂಡ ಕೇಳಿದವರಿದ್ದಾರೆ. ಈಗ ಇದಕ್ಕೆ ರಮೇಶ್ ಅರವಿಂದ್ ಅವರು ಕೂಡ ಉತ್ತರ ನೀಡಿದ್ದಾರೆ.

ಹೌದು ಮಿತ್ರರೇ ಮಾಧ್ಯಮದವರಿಗೆ ಕೈಗೆ ಸಿಕ್ಕಿರುವ ರಮೇಶ್ ಅರವಿಂದ್(Ramesh Aravind) ರವರಿಗೆ ಡಾ. ಬ್ರೋ ಅವರನ್ನು ಕಾರ್ಯಕ್ರಮದಲ್ಲಿ ತಂದು ಕೋರಿಸುವ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬುದಾಗಿ ಹೇಳಿದ್ದಾರೆ. ಇದಕ್ಕೆ ರಮೇಶ್ ಅರವಿಂದ್ ರವರು ನೀಡಿರುವಂತಹ ಉತ್ತರ ಕೂಡ ಮಜವಾಗಿತ್ತು. ಅಷ್ಟಕ್ಕೂ ರಮೇಶ್ ಅರವಿಂದ್ ಏನು ಹೇಳಿದ್ದಾರೆ ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಮಿತ್ರರೇ ಈ ಕುರಿತಂತೆ ಮಾತನಾಡುತ್ತಾ ನಾನು ಕೇವಲ ಕಾರ್ಯಕ್ರಮದ ನಿರೂಪಕ ಅಷ್ಟೇ, ಕಾರ್ಯಕ್ರಮದಲ್ಲಿ ಯಾರನ್ನು ಕರೆ ತರಬೇಕು ಎನ್ನುವುದನ್ನು ಕಾರ್ಯಕ್ರಮದ ತಂಡವೇ ನಿರ್ಧರಿಸುತ್ತೆ. ವೈಯಕ್ತಿಕವಾಗಿ ನನ್ನನ್ನು ಕೇಳುವುದಾದರೆ ಇಂತಹ ಯುವ ಸದಕರನ್ನು ಆ ಸಾಧಕರ ಸೇಟಿನ ಮೇಲೆ ನೋಡಲು ನನಗೂ ಕೂಡ ಆಸೆ ಇದೆ ಆದರೆ ಅದಕ್ಕೆ ಸರಿಯಾದ ಸಮಯ ಬರಬೇಕು ಅಷ್ಟೇ ಎಂಬುದಾಗಿ ಡಾ. ಬ್ರೋ ಅವರ ಹೆಸರನ್ನು ಹೇಳದೆ ರಮೇಶ್ ಅರವಿಂದ್(Ramesh Aravind) ಅವರ ಬಗ್ಗೆ ಹೇಳಿದ್ದಾರೆ.

Leave a Comment

error: Content is protected !!