Weekend With Ramesh: ವೀಕೆಂಡ್ ವಿತ್ ರಮೇಶ್ ನಲ್ಲಿ ಈಗಾಗಲೇ ತನ್ನ ಎಪಿಸೋಡ್ ಶೂಟಿ’ಂ ಗ್ ಅನ್ನು ಮುಗಿಸಿಕೊಂಡು ಹೋಗಿರುವ ಕನ್ನಡ ಮೂಲದ ಭಾರತದ ಖ್ಯಾತ ನಟ ಯಾರು? ಇಲ್ಲಿದೆ ನೋಡಿ.

Ramesh Aravind ಕಿರುತೆರೆಯ ಪ್ರೇಕ್ಷಕರು ಅತ್ಯಂತ ಕಾತರದಿಂದ ಕಾಯುತ್ತಿರುವ ಕಿರುತೆರೆಯ ಸ್ಪೆಷಲ್ ಪ್ರೋಗ್ರಾಮ್ ಎಂದರೆ ಅದು ನಟ ರಮೇಶ್ ಅರವಿಂದ್ ರವರು ನಡೆಸಿಕೊಡುವ ವೀಕೆಂಡ್ ವಿತ್ ರಮೇಶ್(Weekend With Ramesh) ಕಾರ್ಯಕ್ರಮದ 5ನೇ ಸೀಸನ್ ಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಇದೇ ಮಾರ್ಚ್ ಕೊನೆಯ ವಾರದಲ್ಲಿ ಈ ಕಾರ್ಯಕ್ರಮ ಜೀ ಕನ್ನಡ ವಾಹಿನಿಯಲ್ಲಿ(Zee Kannada) ಪ್ರಾರಂಭವಾಗುತ್ತಿದೆ ಎನ್ನುವ ಸುದ್ದಿಗಳು ಕೂಡ ಬಲವಾಗಿ ಓಡಾಡುತ್ತಿವೆ.

ಇನ್ನು ಈ ಕಾರ್ಯಕ್ರಮಕ್ಕೆ ಈ ಬಾರಿ ಹಲವಾರು ಸೆಲೆಬ್ರಿಟಿಗಳ ಹೆಸರು ಕೇಳಿ ಬಂದಿದ್ದು ಅವರಲ್ಲಿ ಡಾಲಿ ಧನಂಜಯ್ ರಿಷಬ್ ಶೆಟ್ಟಿ ರಮ್ಯಾ ಅಶ್ವಿನಿ ಪುನೀತ್ ರಾಜಕುಮಾರ್(Ashwini Puneeth Rajkumar) ಅವರ ಹೆಸರು ಕೂಡ ಕೇಳಿ ಬರುತ್ತಿದೆ. ನಮ್ಮ ಕರ್ನಾಟಕ ಚಿತ್ರರಂಗದ ಕ್ರೀಡಾ ಕ್ಷೇತ್ರದ ಹಾಗೂ ಇನ್ನಿತರ ಕ್ಷೇತ್ರಗಳ ಖ್ಯಾತನಾಮ ಸೆಲೆಬ್ರಿಟಿಗಳ ಸಾಧನೆಯನ್ನು ಈ ಕಾರ್ಯಕ್ರಮದಲ್ಲಿ ನೋಡುವ ತವಕದಲ್ಲಿ ಪ್ರತಿಯೊಬ್ಬರೂ ಕೂಡ ಇದ್ದಾರೆ.

ನಮ್ಮ ಸಾಧಕರ ಸಾಧನೆಯನ್ನು ರಮೇಶ್ ಅರವಿಂದ್(Ramesh Aravind) ರವರು ತಮ್ಮ ವಿಶೇಷ ನಿರೂಪಣಾ ಶೈಲಿಯಲ್ಲಿ ತೆರೆದಿಡುವಂತಹ ಪ್ರಯತ್ನ ಈ ಬಾರಿ ಮಾಡಲಿದ್ದಾರೆ ಎನ್ನುವುದಾಗಿ ತಿಳಿದು ಬಂದಿದ್ದು ಈಗಾಗಲೇ ಒಬ್ಬ ಸೆಲೆಬ್ರಿಟಿ ತಮ್ಮ ಭಾಗದ ಎಪಿಸೋಡ್ ಅನ್ನು ಚಿತ್ರೀಕರಿಸಿ ಹೋಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಅಷ್ಟಕ್ಕೂ ಆ ಭಾರತ ಮೆಚ್ಚಿದ ಕನ್ನಡಿಗ ಯಾರು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಮಿತ್ರರೇ ನಾವು ಮಾತನಾಡಲು ಹೊರಟಿರುವುದು ನಟ ಪ್ರಭುದೇವ್(Prabhudeva) ಅವರ ಕುರಿತಂತೆ. ನಟ ನಿರ್ದೇಶಕ ಕೋರಿಯೋಗ್ರಾಫರ್ ಆಗಿ ಈಗಾಗಲೇ ಪ್ರಭುದೇವ್ ರವರು ಕನ್ನಡ ತಮಿಳು ಹಿಂದಿ ತೆಲುಗು ಸಿನಿಮಾ ರಂಗಗಳಲ್ಲಿ ಕೂಡ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅವರು ಬೇರೆ ಭಾಷೆಗಳಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದರು ಕೂಡ ನಮ್ಮ ಕನ್ನಡದ ಮಣ್ಣಿನ ಹುಡುಗ ತಾನೆ. ವೀಕೆಂಡ್ ವಿತ್ ರಮೇಶ್(Weekend With Ramesh) ಕಾರ್ಯಕ್ರಮದಲ್ಲಿ ಪ್ರಭುದೇವ ಅವರ ಎಪಿಸೋಡ್ ಅನ್ನು ನೋಡಲು ಎಲ್ಲರೂ ಕಾತರರಾಗಿದ್ದಾರೆ ಎಂದು ಹೇಳಬಹುದಾಗಿದೆ.

Leave a Comment

error: Content is protected !!