Dr Rajkumar: ಕೋಟ್ಯಾಂತರ ಅಭಿಮಾನಿಗಳ ಆರಾಧ್ಯ ದೈವ ಅಣ್ಣಾವ್ರ ಕೊನೆ ಆಸೆ ಏನಾಗಿತ್ತು? ಇಲ್ಲಿದೆ ನೋಡಿ ಪ್ರತಿಯೊಬ್ಬ ಅಭಿಮಾನಿ ಓದಬೇಕಾಗಿರುವ ವಿಷಯ.

Rajkumar ರಾಜಕುಮಾರ್ ಎನ್ನುವುದು ಒಬ್ಬ ವ್ಯಕ್ತಿಯಲ್ಲ ಕನ್ನಡದ ಶಕ್ತಿ ಎಂಬುದಾಗಿ ಪ್ರತಿಯೊಬ್ಬ ಕನ್ನಡಿಗನು ಕೂಡ ಹೆಮ್ಮೆಯಿಂದ ಎದೆ ತಟ್ಟಿ ಹೇಳುತ್ತಾನೆ. ಡಾ ರಾಜಕುಮಾರ್(Dr Rajkumar) ನಟಸಾರ್ವಭೌಮ ಕನ್ನಡ ಕಂಠೀರವ ಹೀಗೆ ಹತ್ತು ಹಲವಾರು ಬಿರುದುಗಳಿಂದ ಕರೆಯಲ್ಪಡುತ್ತಾರೆ. ಅಭಿಮಾನಿಗಳ ಪಾಲಿನ ನೆಚ್ಚಿನ ಆರಾಧ್ಯ ದೈವ ವಾಗಿದ್ದು ಅವರು ಆರಂಭಿಕ ಜೀವನದಲ್ಲಿ ಬಡತನದಿಂದ ಪ್ರಾರಂಭಿಸಿದ್ದರು ಕೂಡ ತಮ್ಮ ಮರಣ ಪ್ರತಿಯೊಬ್ಬರೂ ಕೂಡ ಬೇಸರ ಪಡುವಂತಹ ಮಹಾನ್ ಜೀವನವನ್ನು ಎಲ್ಲರೂ ಪಠ್ಯಪುಸ್ತಕದಲ್ಲಿ ಬರೆಯುವಂತೆ ಮಾಡಿಟ್ಟು ಹೋಗಿದ್ದರು.

ಬದುಕಿದರೆ ರಾಜಕುಮಾರ್(Rajkumar) ಅವರಂತೆ ಬದುಕಬೇಕು ಎನ್ನುವಂತೆ ಬಾಳಿ ಬದುಕಿದ್ದರು ನಮ್ಮೆಲ್ಲರ ನೆಚ್ಚಿನ ಮುತ್ತುರಾಜ್. 1954 ರಲ್ಲಿ ಬೇಡರ ಕಣ್ಣಪ್ಪ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರಮುಖ ಪಾತ್ರಧಾರಿಯಾಗಿ ಎಂಟ್ರಿ ನೀಡುವ ಅಣ್ಣಾವ್ರು ಮತ್ತೆ ಚಿತ್ರರಂಗದಲ್ಲಿ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಯಾವುದೇ ಪಾತ್ರವನ್ನು ನೀಡಿದರೂ ಕೂಡ ಅಣ್ಣಾವ್ರು ಸುಲಲಿತವಾಗಿ ಅಭಿಮಾನಿಗಳು ಮೆಚ್ಚುವಂತೆ ನಟಿಸುತ್ತಿದ್ದರು.

ಅಣ್ಣಾವ್ರು ನಟಿಸಿರುವಂತಹ ಹಲವಾರು ಸಿನಿಮಾಗಳು ಬೇರೆ ಬೇರೆ ಭಾಷೆಗಳಲ್ಲಿ ಹತ್ತು ಹಲವರು ಬಾರಿ ರಿಮೇಕ್ ಕೂಡ ಆಗಿದ್ದವು. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಏಕೈಕ ಕನ್ನಡಿಗ ಅಣ್ಣಾವ್ರು ಆಗಿದ್ದಾರೆ. ನಮ್ಮ ಜೀವನದಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿದ್ದ ಅಣ್ಣಾವ್ರಿಗೆ(Annavru ) ಅದೊಂದು ಆಸೆ ಕೊನೆವರೆಗೂ ಕೂಡ ಪೂರೈಸದೆ ಉಳಿದುಕೊಂಡಿತ್ತು.

ಅದು ಬೇರೆ ಇನ್ನೇನು ಅಲ್ಲ ಗೆಳೆಯರೇ ಅಣ್ಣಾವ್ರಿಗೆ ಹಲವಾರು ಸಿನಿಮಾಗಳಲ್ಲಿ ರೈತನ ಪಾತ್ರಧಾರಿಯಾಗಿ ನಟಿಸಿದ ಅನುಭವವಿತ್ತು ಆದರೆ ನಿಜ ಜೀವನದಲ್ಲಿ ಕೂಡ ನಿಜವಾದ ರೈತನಾಗಿ ಭೂಮಿ ತಾಯಿಯ ಸೇವೆಯನ್ನು ಮಾಡಬೇಕೆಂದು ಆಸೆಯನ್ನು ಹೊಂದಿದ್ದರು. ಆದರೆ ಅದನ್ನು ಕೊನೆಯವರೆಗೂ ಕೂಡ ಅವರಿಂದ ನೆರವೇರಿಸಲು ಸಾಧ್ಯವಾಗಲಿಲ್ಲ ಇದನ್ನು ಕೊರಗಂತು ಇತ್ತು. ಅದೇನೇ ಇರಲಿ ಗೆಳೆಯರೇ ತಮ್ಮ ಸಿನಿಮಾಗಳ ಮೂಲಕ ರೈತನ ಜೀವನದಲ್ಲಿ ಕೂಡ ಸ್ಪೂರ್ತಿಯನ್ನು ಹುಟ್ಟು ಹಾಕುವಂತಹ ಸಿನಿಮಾಗಳನ್ನು ಅಣ್ಣಾವ್ರು( Annavru) ಮಾಡಿದ್ದಾರೆ ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

Leave a Comment

error: Content is protected !!