Pubilc TV Ranganath: ಹಾಲಿವುಡ್ ಗೆ ಎಂಟ್ರಿ ನೀಡಿದ ಪಬ್ಲಿಕ್ ಟಿವಿ ರಂಗಣ್ಣ. ಸಂತೋಷದಲ್ಲಿ ಕನ್ನಡಿಗರು.

Public TV Ranganath ನ್ಯೂಸ್ ಚಾನೆಲ್ ಗಳಲ್ಲಿ ಪಬ್ಲಿಕ್ ಟಿವಿ(Public Tv) ನ್ಯೂಸ್ ನೋಡುವಂತಹ ಪ್ರೇಕ್ಷಕರಲ್ಲಿ ಸದಾ ಕಾಲ ಚರ್ಚೆಯಲ್ಲಿರುತ್ತದೆ. ಯಾಕೆಂದರೆ ಪಬ್ಲಿಕ್ ಟಿವಿಯ ಮುಖ್ಯಸ್ಥ ಆಗಿರುವಂತಹ ರಂಗಣ್ಣ(Ranganna) ವಾರ್ತೆಯನ್ನು ಓದುವಂತಹ ಶೈಲಿ ಹಾಗೂ ಅದನ್ನು ಜನರಿಗೆ ತಲುಪಿಸುವಂತಹ ವಿಧಾನ ಪ್ರತಿಯೊಬ್ಬರಿಗೂ ಕೂಡ ಮೆಚ್ಚುಗೆಯಾಗುತ್ತದೆ. ಇದಕ್ಕಾಗಿಯೇ ಪಬ್ಲಿಕ್ ಟಿವಿ ಕನ್ನಡ ನ್ಯೂಸ್ ಚಾನೆಲ್ ಗಳಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ.

ಸಿನಿಮಾದಲ್ಲಿ ಹೇಗೆ ಹೀರೋಗಳಿಗೆ ದೊಡ್ಡ ಮಟ್ಟದ ಅಭಿಮಾನಿ ಬಳಗ ಇರುತ್ತದೆಯೋ ಅದೇ ರೀತಿ ಜರ್ನಲಿಸಂ ನಲ್ಲಿ ಪಬ್ಲಿಕ್ ಟಿವಿ ರಂಗಣ್ಣನಿಗೂ ಕೂಡ ಸಾಕಷ್ಟು ದೊಡ್ಡ ಮಟ್ಟದ ಅಭಿಮಾನಿ ಬಳಗ ಇದೆ‌. ಕನ್ನಡ ಜರ್ನಲಿಸಂ ನಲ್ಲಿ ರಂಗಣ್ಣ ಅವರದೇ ಒಂದು ಇತಿಹಾಸ ಎಂದರು ಕೂಡ ತಪ್ಪಾಗಲಾರದು.

ಅವರು ಪಬ್ಲಿಕ್ ಟಿವಿ(Public TV) ಅನ್ನು ಯಾರ ಸಹಾಯವೂ ಇಲ್ಲದೆ ದೊಡ್ಡ ಮಟ್ಟದಲ್ಲಿ ಕಟ್ಟಿ ಬೆಳೆಸಿರುವ ರೀತಿ ನಿಜಕ್ಕೂ ಕೂಡ ಪ್ರತಿಯೊಬ್ಬ ಯುವ ಜರ್ನಲ್ ಲಿಸ್ಟ್ ಗೆ ಸ್ಪೂರ್ತಿಯಾಗಿದೆ. ಇನ್ನು ಮೊದಲ ಬಾರಿಗೆ ಹಾಲಿವುಡ್(Hollywood) ನಲ್ಲಿ ಕೂಡ ರಂಗಣ್ಣ ಕಾಣಿಸಿಕೊಂಡಿದ್ದಾರೆ.

ಹೌದು ಇದೇ ಮೇ 19ರಂದು ವಿಶ್ವದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆ ಕಂಡಿರುವಂತಹ ಜನಪ್ರಿಯ ಹಾಲಿವುಡ್ ಸಿನಿಮಾ ಆಗಿರುವಂತಹ Fast And Furious X ಸಿನಿಮಾದಲ್ಲಿ ಒಂದು ಕ್ಷಣಕ್ಕೆ ರಂಗಣ್ಣ ಅವರ ತುಣುಕು ಹಾಗೆ ಬಂದು ಹೀಗೆ ಹೋಗುತ್ತದೆ. ಅಷ್ಟಾದರೂ ಕೂಡ ಅಂತಹ ದೊಡ್ಡ ಸಿನಿಮಾದಲ್ಲಿ ನಮ್ಮ ಕನ್ನಡಿಗ ಒಬ್ಬರು ಕಾಣಿಸಿಕೊಂಡಿರುವುದು ನಿಜಕ್ಕೂ ಕೂಡ ನಮ್ಮೆಲ್ಲರಿಗೆ ಹೆಮ್ಮೆ ತರುವಂತಹ ಕ್ಷಣವಾಗಿದೆ.

Leave a Comment

error: Content is protected !!