Puneeth Rajkumar: ಭಕ್ತ ಪ್ರಹ್ಲಾದ ಪಾತ್ರದಲ್ಲಿ ನಟಿಸಲು ಪುನೀತ್ ರಾಜಕುಮಾರ್ ಚಿಕ್ಕ ವಯಸ್ಸಿನಲ್ಲಿ ಪಡೆದ ಸಂಭಾವನೆ ಎಷ್ಟು ಗೊತ್ತಾ?

Puneeth Rajkumar ಕನ್ನಡ ಚಿತ್ರರಂಗದಲ್ಲಿ ರಾಜಕುಮಾರ್(Rajkumar) ಅವರಷ್ಟೇ ಅವರ ಮಗ ಆಗಿರುವಂತಹ ಪುನೀತ್ ರಾಜಕುಮಾರ್ ರವರು ಕೂಡ ಜನಪ್ರಿಯರು. ತಮ್ಮ ತಂದೆಯ ಲೆಗಸಿಯನ್ನು ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನೆಯ ಮೂಲಕ ಮುಂದುವರಿಸಿಕೊಂಡು ಬಂದವರು ನಮ್ಮೆಲ್ಲರ ನೆಚ್ಚಿನ ಅಪ್ಪು(Appu).

ನಾಯಕ ನಟನಾಗಿ ಎನ್ನುವುದಕ್ಕಿಂತ ಹೆಚ್ಚಾಗಿ ಬಾಲ ನಟನಾಗಿ ಪುನೀತ್ ರಾಜಕುಮಾರ್(Puneeth Rajkumar) ರವರು ನಿಮಗೆಲ್ಲರಿಗೂ ತಿಳಿದಿರಬಹುದು ಈಗಾಗಲೇ ಸಾಕಷ್ಟು ಸಿನಿಮಾಗಳ ಮೂಲಕ ಅಂದಿನ ಕಾಲದಿಂದಲೇ ಕನ್ನಡ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿದ್ದರು. 10ನೇ ವಯಸ್ಸಿನಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಬಾಲ ನಟನಾಗಿ ರೂಪುಗೊಂಡಿದ್ದರು ಎಂದರೆ ಅಪ್ಪು ಅವರ ಬಳಿ ಯಾವ ಮಟ್ಟಿಗೆ ಪ್ರತಿಭೆ ಇತ್ತು ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬಹುದಾಗಿದೆ.

ಪುನೀತ್(Puneeth) ರಾಜಕುಮಾರ್ ಅವರ ಬಾಲ ನಟನೆಯ ಸಂದರ್ಭದಲ್ಲಿ ಕೆಲವೊಂದು ಪಾತ್ರಗಳು ವಿಶೇಷವಾಗಿದ್ದು ಅದರಲ್ಲೂ ವಿಶೇಷವಾಗಿ ಭಕ್ತ ಪ್ರಹ್ಲಾದ(Bhaktha Prahlada) ಪಾತ್ರ ನಿಜಕ್ಕೂ ಕೂಡ ಬೇರೆ ಎಲ್ಲಾ ಪಾತ್ರ ಗಳಿಗಿಂತ ಅತ್ಯಂತ ವಿಶೇಷವಾಗಿದೆ ಎಂದು ಹೇಳಬಹುದಾಗಿದ್ದು ಆ ಪಾತ್ರಕ್ಕಾಗಿ ಅವರು ಪಡೆದಿರುವ ಸಂಭಾವನೆ ಎಷ್ಟು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಮಿತ್ರರೇ ಆ ಕಾಲದಲ್ಲಿ ಈ ಪಾತ್ರವನ್ನು ಮಾಡುವುದಕ್ಕಾಗಿ ಸಾವಿರ ರೂಪಾಯಿ ಸಂಭಾವನೆಯನ್ನು ಪುನೀತ್ ರಾಜಕುಮಾರ್(Puneeth Rajkumar) ರವರು ಪಡೆದಿದ್ದರು ಎಂಬುದಾಗಿ ತಿಳಿದು ಬಂದಿದ್ದು ಅಂದಿನ ಕಾಲದಲ್ಲಿ ಬಾಲ ಕಲಾವಿದರಿಗೆ ಈ ಮಟ್ಟದ ಸಂಭಾವನೆ ಅತ್ಯಂತ ದುಬಾರಿ ಎಂದು ಹೇಳಬಹುದಾಗಿದೆ. ಭಕ್ತ ಪ್ರಹ್ಲಾದ ಸಿನಿಮಾದಲ್ಲಿ ಅಪ್ಪು ಅವರ ಪಾತ್ರದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!