Aswhini Puneethrajkumar: ಅಪ್ಪು ಅವರ ಕೊನೆಯ ಆಸೆಯನ್ನು ತೀರಿಸಲು ಹೊರಟ ಪತ್ನಿ ಅಶ್ವಿನಿ. ಆ ಆಸೆ ಏನಾಗಿತ್ತು ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Puneeth Rajkumar ಪವರ್ ಸ್ಟಾರ್(Power Star) ಪುನೀತ್ ರಾಜಕುಮಾರ್ ರವರು ಕೇವಲ 46 ವರ್ಷ ವಯಸ್ಸಿಗೆ ನಮ್ಮನ್ನೆಲ್ಲ ಆಗಲಿ ಬಾರದ ಲೋಕಕ್ಕೆ ಹೋಗಿದ್ದಾರೆ. ನಿಜಕ್ಕೂ ಕೂಡ ಅವರನ್ನು ಕಳೆದುಕೊಂಡಿರುವ ದುಃಖ ಎನ್ನುವುದು ಪ್ರತಿಯೊಬ್ಬ ಕನ್ನಡಿಗನಲ್ಲಿ ಕೂಡ ತಮ್ಮ ಸ್ವಂತ ಕುಟುಂಬದವರನ್ನೇ ಕಳೆದುಕೊಂಡಿದ್ದೇವೆ ಎನ್ನುವಷ್ಟರ ಮಟ್ಟಿಗೆ ಬಾಧಿಸುತ್ತಿದೆ. ಅವರನ್ನು ನೋಡಲು ಅವರ ಕೊನೆಯ ದರ್ಶನವನ್ನು ಪಡೆಯಲು ದಾಖಲೆಯ 25 ಲಕ್ಷಕ್ಕೂ ಅಧಿಕ ಜನರು ಬಂದಿದ್ದಾರೆ ಎಂದರೆ ಅದರಲ್ಲೇ ನೀವು ಅಂದಾಜಿಸಬಹುದಾಗಿದೆ ಅವರ ಅಗಲಿಕೆ ಎಷ್ಟು ದುಃಖವನ್ನು ನೀಡಿದೆ ಎಂಬುದನ್ನು.

ಇನ್ನು ತಾವು ಬದುಕಿದಷ್ಟು ಕಾಲ ಜನಸೇವೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದ ಅಪ್ಪು(Appu) ಬದುಕಿರುವವರೆಗೂ ಕೂಡ ಇದರ ಕುರಿತಂತೆ ಯಾವುದೇ ಪ್ರಚಾರವನ್ನು ಪಡೆದುಕೊಳ್ಳಲು ಹೋಗಿರಲಿಲ್ಲ. ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೂ ಕೂಡ ತಿಳಿಯಬಾರದು ಎನ್ನುವಷ್ಟರ ಮಟ್ಟಿಗೆ ತಮ್ಮ ಸಮಾಜ ಸೇವೆಯ ಕುರಿತಂತೆ ಗೌಪ್ಯತೆಯನ್ನು ಕಾಪಾಡಿಕೊಂಡು ಬಂದಿದ್ದರು.

ಇದಕ್ಕಾಗಿಯೇ ರಾಜ್ಯ ಸರ್ಕಾರ ಅವರ ಸಿನಿಮಾ ಹಾಗೂ ಸಮಾಜ ಸೇವೆಗಳ ಸಾಧನೆಯನ್ನು ಗುರುತಿಸಿ ಕರ್ನಾಟಕ ರಾಜ್ಯದ ಅತ್ಯಂತ ಉನ್ನತ ಗೌರವ ಪ್ರಶಸ್ತಿ ಯಾಗಿರುವ ಕರ್ನಾಟಕ ರತ್ನ ಪ್ರಶಸ್ತಿಯನ್ನು(Karnataka Ratna Award) ನೀಡಿ ಮರಣೋತ್ತರವಾಗಿ ಸನ್ಮಾನಿಸಿದೆ. ಆದರೆ ಅದೊಂದು ಅಪ್ಪು ಅವರ ಕೊನೆಯ ಆಸೆ ಕೊನೆಗೂ ಕೂಡ ಈಡೇರಲೇ ಇಲ್ಲ. ಅದನ್ನು ಸ್ವತಹ ಅವರು ತಮ್ಮ ಡೈರಿಯಲ್ಲಿ ಬರೆದುಕೊಂಡಿದ್ದರಂತೆ.

ಅದಿನ್ನ್ಯಾವುದು ಅಲ್ಲ ಅಣ್ಣಾವ್ರ(Annavru) ಗಾಜನೂರಿನ ಮನೆಯನ್ನು ಮತ್ತೆ ದುರಸ್ತಿಗೊಳಿಸಿ ಅದನ್ನು ಮ್ಯೂಸಿಯಂನ್ನಾಗಿ ಮಾಡಬೇಕು ಎನ್ನುವುದಾಗಿ ಅಪ್ಪು ಅವರು ಕನಸು. ಇದನ್ನು ಸ್ವತಹ ಅವರೇ ತಮ್ಮ ಡೈರಿಯಲ್ಲಿ ಬರೆದುಕೊಂಡಿದ್ದು ಇದನ್ನು ಈಡೇರಿಸುವತ್ತ ಅವರ ಪತ್ನಿಯಾಗಿರುವ ಅಶ್ವಿನಿ ಪುನೀತ್ ರಾಜಕುಮಾರ್(Ashwini Puneeth Rajkumar) ಅವರು ಈಗಾಗಲೇ ಕಾರ್ಯ ಪ್ರವೃತ್ತರಾಗಿದ್ದಾರಂತೆ. ಈ ಬಾರಿ ಅಪ್ಪು ಅವರ ಬರ್ತಡೆ ದಿನಾಚರಣೆಯಂದು ಈ ಕೆಲಸ ಲೋಕಾರ್ಪಣೆ ಆದರೂ ಕೂಡ ಆಶ್ಚರ್ಯ ಪಡಬೇಕಾಗಿಲ್ಲ.

Leave a Comment

error: Content is protected !!