Vijay Prakash: ನೂರಾರು ಹಾಡುಗಳನ್ನು ಹಾಡಿರುವ ಸ್ಟಾರ್ ಗಾಯಕ ವಿಜಯ ಪ್ರಕಾಶ್ ಒಂದು ಹಾಡಿಗೆ ಪಡೆದುಕೊಳ್ಳುವ ಸಂಭಾವನೆ ಎಷ್ಟು?

Vijay Prakash ಸ್ಟಾರ್ ನಟರಿಗೆ ಮಾತ್ರ ದೊಡ್ಡ ಮಟ್ಟದ ಅಭಿಮಾನಿ ಬಳಗ ಇರುತ್ತದೆ ಎಂಬುದಾಗಿ ಕೆಲವರು ಭಾವಿಸುತ್ತಾರೆ ಆದರೆ ಸಿನಿಮಾ ರಂಗದಲ್ಲಿರುವ ಬೇರೆ ವಿಭಾಗದ ಸೆಲೆಬ್ರಿಟಿಗಳು ಕೂಡ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಹೊಂದಿರುತ್ತಾರೆ ಅವರಲ್ಲಿ ಗಾಯಕರು(Singers) ಕೂಡ ಸೇರಿರುತ್ತಾರೆ. ಅವರಲ್ಲಿ ಇಂದು ನಾವು ಮಾತನಾಡಲು ಹೊರಟಿರುವುದು ಕನ್ನಡದ ನಂಬರ್ ಒನ್ ಗಾಯಕರ ಬಗ್ಗೆ.

ಹೌದು ನಾವ್ ಮಾತನಾಡುತ್ತಿರುವುದು ಕನ್ನಡ ಸೇರಿದಂತೆ ಪರಭಾಷೆಗಳಲ್ಲಿ ಕೂಡ ತಮ್ಮ ಕಂಠಸಿರಿಯ ಮೂಲಕ ಜನರ ಮನಸ್ಸನ್ನು ಗೆದ್ದಿರುವ ಗಾಯಕ ವಿಜಯ್ ಪ್ರಕಾಶ್(Vijay prakash) ಅವರ ಕುರಿತಂತೆ. ಜೈ ಹೋ ಸಾಂಗ್ ಮೂಲಕ ಎಲ್ಲರಿಗೂ ಪರಿಚಿತರಾದ ಇವರು ಕನ್ನಡದಲ್ಲಿ ದೊಡ್ಡಮಟ್ಟಿಗೆ ಜನಪ್ರಿಯತೆಯನ್ನು ಪಡೆದಿದ್ದು ಗಾಳಿಪಟ ಸಿನಿಮಾದ(Gaalipata Film) ಕವಿತೆ ಕವಿತೆ ಹಾಡಿನ ಮೂಲಕ. ಈಗಾಗಲೇ ಕನ್ನಡ ತೆಲುಗು ಸೇರಿದಂತೆ ಹಲವಾರು ಭಾಷೆಗಳಲ್ಲಿ ನೂರಾರು ಹಾಡುಗಳನ್ನು ಹಾಡಿರುವಂತಹ ಸೂಪರ್ ಹಿಟ್ ಗಾಯಕ ವಿಜಯ್ ಪ್ರಕಾಶ್.

ಜೀ ಕನ್ನಡ ವಾಹಿನಿಯಲ್ಲಿ(Zee Kannada) ಪ್ರಸಾರ ಕಾಣುವಂತಹ ಸರಿಗಮಪ ಕಾರ್ಯಕ್ರಮದಲ್ಲಿ ಕೂಡ ತೀರ್ಪುಗಾರರಾಗಿ ಹಲವಾರು ಸೀಸನ್ ಗಳಿಂದ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಇವರು ಒಂದು ಹಾಡಿಗಾಗಿ ಪಡೆದುಕೊಳ್ಳುವಂತಹ ಸಂಭಾವನೆ ಎಷ್ಟಿರಬಹುದು ಎನ್ನುವುದಾಗಿ ಹಲವಾರು ಜನರಲ್ಲಿ ಕುತೂಹಲವಿದೆ ಬನ್ನಿ ಅದರ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿಯೋಣ.

ಸಿನಿಮಾ ನಟರಷ್ಟೇ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದಿರುವ ನಟ ವಿಜಯ್ ಪ್ರಕಾಶ್(Vijay Prakash) ರವರು ಒಂದು ಹಾಡಿಗಾಗಿ ನಾಲ್ಕರಿಂದ ಐದು ಲಕ್ಷ ಸಂಭಾವನೆಯನ್ನು ಪಡೆಯುತ್ತಾರೆ ಎಂಬುದಾಗಿ ತಿಳಿದು ಬಂದಿದೆ. ಇನ್ನು ಇವರು ಲೈವ್ ಕಾನ್ಸರ್ಟ್ಗಳಲ್ಲಿ ಕೂಡ ಭಾಗವಹಿಸಲಿದ್ದು ಇದಕ್ಕಾಗಿ ಕೂಡ ದೊಡ್ಡ ಮಟ್ಟದ ಹಣವನ್ನು ಸಂಭಾವನೆ ರೂಪದಲ್ಲಿ ಪಡೆದುಕೊಳ್ಳುತ್ತಾರೆ. ವಿಜಯ್ ಪ್ರಕಾಶ್ ಅವರ ಹಾಡುಗಳಲ್ಲಿ ನಿಮ್ಮ ನೆಚ್ಚಿನ ಹಾಡು ಯಾವುದು ಎಂಬುದನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.

Leave a Comment

error: Content is protected !!