Puneeth Rajkumar: ಬೆಟ್ಟದಷ್ಟು ಪ್ರೀತಿ ತೋರುವ ಸೋದರ ಅತ್ತೆಯೊಂದಿಗೆ ಪುನೀತ್ ರಾಜಕುಮಾರ್ ಅವರ ಅಪರೂಪದ ಫೋಟೋ!

Puneeth Rajkumar with sodara atthe: ಸ್ನೇಹಿತರೆ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಮ್ಮೆಲ್ಲರಿಂದ ಅಗಲಿ ಹಲವು ತಿಂಗಳುಗಳು ಮಾಸಿಹೋಗಿವೆ. ಆದರೂ ಕೂಡ ಅಪ್ಪು ನಮ್ಮೊಂದಿಗೆ ಇಲ್ಲ ಎಂಬ ಕಹಿ ಸತ್ಯವನ್ನು ಸ್ವೀಕರಿಸಲು ಯಾರಿಂದಲೂ ಆಗುತ್ತಿಲ್ಲ. ಇನ್ನು ಕೆಲ ಅಭಿಮಾನಿಗಳು ಅಪ್ಪು ಶೂಟಿಂಗ್ ನಿಮಿತ್ತ ಹೊರ ದೇಶಕ್ಕೆ ಹೋಗಿದ್ದಾರೆ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಬಂದುಬಿಡುತ್ತಾರೆ ಎಂಬ ನಂಬಿಕೆಯಲ್ಲಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಂತು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕುರಿತದ ಒಂದಲ್ಲ ಒಂದು ಮಾಹಿತಿ ಬಾರಿ ವೈರಲ್ ಆಗುತ್ತಲೇ ಇರುತ್ತದೆ. ಅಪ್ಪು ಭೌತಿಕವಾಗಿ ಇಂದು ನಮ್ಮೊಂದಿಗಿಲ್ಲವಾದರೂ ಕೂಡ ಅವರ ದಾರಿಯನ್ನೇ ಅನುಸರಿಸುತ್ತಾ ನಡೆಯುತ್ತಿರುವ ಸಾಕಷ್ಟು ಅಭಿಮಾನಿಗಳು ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ಹಲವಾರು ಫ್ಯಾನ್ ಪೇಜ್ಗಳನ್ನು ಕ್ರಿಯೇಟ್ ಮಾಡಿದ್ದು, ಅಲ್ಲಿ ಅಪ್ಪು ಹಾಗೂ ಅವರ ಕುಟುಂಬಸ್ಥರ ಅಪರೂಪದ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಸದ್ಯ ಪುನೀತ್ ರಾಜಕುಮಾರ್ ಮತ್ತು ಅವರ ಅತ್ತೆಯ ಫೋಟೋ ಬಾರಿ ವೈರಲ್ ಆಗುತ್ತಿದ್ದು, ನಗುವಿನ ರಾಜಕುಮಾರನನ್ನು ಕಂಡ ನೆಟ್ಟಿಗರು ಲೈಕ್ಸ್ ಹಾಗೂ ಕಮೆಂಟ್ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಹೌದು ಸ್ನೇಹಿತರೆ ಡಾಕ್ಟರ್ ರಾಜಕುಮಾರ್ ಅವರ ಸಹೋದರಿ ನಾಗಮ್ಮ ಅವರು ಪುನೀತ್ ರಾಜಕುಮಾರ್ ಅವರ ಮೇಲೆ ಬೆಟ್ಟದಷ್ಟು ಪ್ರೀತಿಯನ್ನು ಇಟ್ಟುಕೊಂಡಿದ್ದರು.

Puneeth Rajkumar with sodara atthe

ಸಂಬಂಧದಲ್ಲಿ ಸೋದರ ಅತ್ತೆಯಾಗುವ ನಾಗಮ್ಮ ಅವರನ್ನು ಕಂಡರೆ ಪುನೀತ್ ರಾಜಕುಮಾರ್ ಅವರಿಗೆ ಎಲ್ಲಿಲ್ಲದ ಪ್ರೀತಿ.‌ ಬಿಡುವು ಸಿಕ್ಕಾಗಲಿಲ್ಲ ಅವರ ಮನೆಗೆ ಹೋಗಿ ಭೇಟಿ ಮಾಡಿ ಅವರೊಂದಿಗೆ ಅಪರೂಪದ ಕ್ಷಣವನ್ನು ಪುನೀತ್ ರಾಜಕುಮಾರ್ ಕಳೆಯುತ್ತಿದ್ದರು. ಇನ್ನು ಅಪ್ಪು ಅಗಲಿಕೆ ಇಡೀ ಜಗತ್ತಿಗೆ ತಿಳಿದಿದ್ದರು ಅವರ ಸೋದರ ಅತ್ತೆಯಾದ ನಾಗಮ್ಮನವರಿಗೆ ಗೊತ್ತಿರಲಿಲ್ಲವಂತೆ. ಹೌದು ಗೆಳೆಯರೇ ನಾಗಮ್ಮನವರು ವಾಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಅಲ್ಲದೆ ಅನಾರೋಗ್ಯದ ನಿಮಿತ್ತ ಅವತ್ತೇ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಬಂದಿದ್ದರು.

ಇಂತಹ ಸಮಯದಲ್ಲಿ ಅಪ್ಪು ಇನ್ನಿಲ್ಲ ಎಂಬ ಸುದ್ದಿಯನ್ನು ತಿಳಿಸುವುದು ಸೂಕ್ತವಲ್ಲ ಎಂದು ಕುಟುಂಬದವರು ನಿರ್ಧರಿಸಿ ಹೇಳಿರಲಿಲ್ಲವಂತೆ. ಅಲ್ಲದೆ ಈ ಹಿಂದೆ ರಾಘಣ್ಣನಿಗೆ ಲಘು ಹೃದಯಘಾ’ತ ಸಮಸ್ಯೆ ಕಾಡಿದಾಗ ಆ ಮಾಹಿತಿಯನ್ನು ನಾಗಮ್ಮನವರಿಗೆ ತಿಳಿಸಿದೊಡನೆ ದೊಡ್ಡ ಆಘಾತವೆ ಆಗಿತ್ತಂತೆ. ಹೀಗಾಗಿ ಪುನೀತ್ ರಾಜಕುಮಾರ್ ಅವರ ಸಾ’ವಿನ ಸಂಗತಿಯನ್ನು ನಾಗಮ್ಮನವರಿಂದ ಮುಚ್ಚಿಡಲಾಗಿತ್ತು.ಇದನ್ನೂ ಓದಿ Dinakar Thoogudeepa: ದರ್ಶನ್ ಅವರ ತಮ್ಮ ದಿನಕರ್ ತೂಗುದೀಪ್ ಅವರ ಸುಂದರ ಕುಟುಂಬ ಹೇಗಿದೆ ನೋಡಿ

Leave a Comment

error: Content is protected !!