Vishnuvardhan: ವಿಷ್ಣುವರ್ಧನ್ ನಟನೆಯ ಸಿನಿಮಾಗಳಲ್ಲಿ ಅಪ್ಪುರವರಿಗೆ ಫೇವರಿಟ್ ಸಿನಿಮಾ ಯಾವುದು ಇಲ್ಲಿದೆ ನೋಡಿ.

Puneeth Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕೇವಲ ಸ್ಟಾರ್ ನಟನಾಗಿ ಮಾತ್ರವಲ್ಲದೆ ಕನ್ನಡ ಚಿತ್ರರಂಗದಲ್ಲಿ ತಮ್ಮ ಪಿ ಆರ್ ಕೆ ಪ್ರೊಡಕ್ಷನ್(PRK Production) ಸಂಸ್ಥೆಯ ಮೂಲಕ ಹಲವಾರು ಯುವ ಪ್ರತಿಭೆಗಳಿಗೆ ತಮ್ಮ ನಿರ್ಮಾಣದ ಸಿನಿಮಾದಲ್ಲಿ ಅವಕಾಶವನ್ನು ಕೂಡ ನೀಡಿದ್ದಾರೆ. ಹೀಗಾಗಿ ಒಂದು ಸಿನಿಮಾವನ್ನು ಅವರು ಒಪ್ಪಿಕೊಳ್ಳಬೇಕು ಎಂದರೆ ಅದರಲ್ಲಿ ಸಾಕಷ್ಟು ಅಂಶಗಳನ್ನು ಅವರು ಗುರುತಿಸುತ್ತಿದ್ದರು. ಇನ್ನು ಅವರ ನೆಚ್ಚಿನ ನಟರಲ್ಲಿ ವಿಷ್ಣುವರ್ಧನ್(Vishnuvardhan) ಕೂಡ ಒಬ್ಬರಾಗಿದ್ದರು.

ಹೊರಗಡೆ ಅವರಿಬ್ಬರ ಕುಟುಂಬದ ಕುರಿತಂತೆ ಏನೇ ಗಾಳಿ ಸುದ್ದಿಗಳು ಹರಡಿದರು ಕೂಡ ಎರಡು ಕುಟುಂಬಗಳು ಸಾಕಷ್ಟು ಆತ್ಮೀಯ ಸ್ನೇಹ ಸಂಬಂಧವನ್ನು ಹೊಂದಿದವು ಎನ್ನುವುದು ಸಾಕಷ್ಟು ಬಾರಿ ಸಾಬೀತಾಗಿದೆ. ಅದರಲ್ಲೂ ವಿಶೇಷವಾಗಿ ವಿಷ್ಣುವರ್ಧನ್ ಅವರನ್ನು ಪುನೀತ್ ರಾಜಕುಮಾರ್(Puneeth Rajkumar) ಅವರ ಸಾಕಷ್ಟು ಪೂಜ್ಯ ಭಾವದಿಂದ ಕಾಣುತ್ತಿದ್ದರು.

ಇನ್ನು ಅಂದಿನ ಕಾಲದಲ್ಲಿ ವಿಷ್ಣುವರ್ಧನ್(Vishnuvardhan) ರವರ ನಟನೆಯಲ್ಲಿ ಮೂಡಿ ಬಂದಂತಹ ಒಂದು ಸಿನಿಮಾ ಅವರ ನೆಚ್ಚಿನ ಸಿನಿಮಾ ವಾಗಿತ್ತು ಎನ್ನುವುದನ್ನು ಸ್ವತಹ ಪುನೀತ್ ರಾಜಕುಮಾರ್(Puneeth Rajkumar) ರವರೆ ಹೇಳಿಕೊಂಡಿದ್ದರು. ಅದಿನ್ಯಾವುದೂ ಅಲ್ಲ ಗೆಳೆಯರೇ, 1993ರಲ್ಲಿ ಬಿಡುಗಡೆಯಾದ ನಿಷ್ಕರ್ಷ ಸಿನಿಮಾ(Nishkarsha Film). ಈ ಸಿನಿಮಾ ವಿಷ್ಣುವರ್ಧನ್ ರವರ ನಾಯಕತ್ವದಲ್ಲಿ ಹಾಗೂ ಸುನಿಲ್ ಕುಮಾರ್ ದೇಸಾಯಿ ಅವರ ನಿರ್ದೇಶನದಲ್ಲಿ ಮೂಡಿಬಂದಿತ್ತು.

ಇಂದಿನ ಕಾಲಕ್ಕೆ ಕೂಡ ಪ್ರಸ್ತುತ ಎನಿಸುವಂತಹ ಹಲವಾರು ವಿಚಾರಗಳು ಆ ಸಿನಿಮಾದಲ್ಲಿ ಇದ್ದವು. ಇದಕ್ಕಾಗಿಯೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ರವರಿಗೆ ವಿಷ್ಣುವರ್ಧನ್ ರವರ ನಟನೆಯ ನಿಷ್ಕರ್ಷ ಸಿನಿಮಾ ಎಂದರೆ ಎಲ್ಲಿಲ್ಲದ ಪ್ರೀತಿ ಎನ್ನುವುದಾಗಿ ಹೇಳಿಕೊಂಡಿದ್ದಾರೆ. ನಿಷ್ಕರ್ಷ ಸಿನಿಮಾದ ಬಗ್ಗೆ ನಿಮಗಿರುವ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಬಹುದಾಗಿದೆ.

Leave a Comment

error: Content is protected !!