Radhana Ram: ಕಾಟೇರನ ಜೀವನದಲ್ಲಿ ಪ್ರಭಾವತಿ ಎಂಟ್ರಿ! ರಿವೀಲ್ ಆಯ್ತು ರಾಧನಾ ರಾಮ್ ಫಸ್ಟ್ ಲುಕ್!

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ(Challenging Star Darshan) ಸಿನಿಮಾ ಜೀವನದ 56ನೇ ಸಿನಿಮಾ ಆಗಿರುವ ಕಾಟೇರ ಸಿನಿಮಾದ ಅಧಿಕೃತ ಘೋಷಣೆ ಈಗಾಗಲೇ ನಡೆದಿದ್ದು ಯುಗಾದಿ ಹಬ್ಬದ ದಿನದಂದು ವಿಶೇಷವಾದ ಸರ್ಪ್ರೈಸ್ ಅನ್ನು ಕೂಡ ತರುಣ್ ಸುಧೀರ್(Tharun Sudhir) ನೇತೃತ್ವದ ಚಿತ್ರ ತಂಡ ನೀಡಿದೆ. ಡಿ ಬಾಸ್(Dboss) ಸಿನಿಮಾ ಕರಿಯರ್ ನಲ್ಲಿ ಇದೊಂದು ವಿಶೇಷ ಸಿನಿಮವಾಗಿ ಎದ್ದು ನಿಲ್ಲಲಿದೆ ಎನ್ನುವುದಾಗಿ ಪ್ರತಿಯೊಬ್ಬರೂ ಕೂಡ ಹೊಂದಿರುವಂತಹ ಭರವಸೆ.

ಈ ಭರವಸೆಯನ್ನು ನಿಜ ಮಾಡುವ ನಿಟ್ಟಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಫಸ್ಟ್ ಲುಕ್ ಪೋಸ್ಟರ್ ಕೂಡ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿತ್ತು. ಇದರ ಬೆನ್ನಲ್ಲೇ ಸಿನಿಮಾದ ನಾಯಕಿಯ ಪಾತ್ರವನ್ನು ರಿವೀಲ್ ಮಾಡುವ ಅಧಿಕೃತ ಘೋಷಣೆಯನ್ನು ಕೂಡ ಇತ್ತೀಚಿಗಷ್ಟೇ ಚಿತ್ರತಂಡ ಮಾಡಿದ್ದು ಯುಗಾದಿ ಹಬ್ಬದ ದಿನದಂದು ಅದು ಕೂಡ ನಡೆದಿದೆ. ಹೌದು ಡಿ ಬಾಸ್(Dboss) ರವರ ಎದುರಿಗೆ ನಾಯಕಿಯಾಗಿ ರಾಧನ ರಾಮ್(Radhana Ram) ರವರು ಆಯ್ಕೆಯಾಗಿದ್ದು ಈ ಪಾತ್ರವನ್ನು ಅವರೇ ಮಾಡಲಿದ್ದಾರೆ.

ಹೌದು ಗೆಳೆಯರೇ, ಮಾಲಾಶ್ರೀ(Malshree) ಅವರ ಮಗಳಾಗಿರುವ ರಾಧನ ರಾಮ್ ದರ್ಶನ್ ರವರ ಕಾಟೇರ(Kaatera) ಸಿನಿಮಾದ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಅಧಿಕೃತವಾಗಿ ಎಂಟ್ರಿ ನೀಡಲು ಸಿದ್ದರಾಗಿ ನಿಂತಿದ್ದಾರೆ. ಇನ್ನು ಅವರ ಸಿನಿಮಾದ ಪ್ರಭಾವತಿ ಪಾತ್ರದ ಫಸ್ಟ್ ಲುಕ್ ಪೋಸ್ಟರ್ ಕೂಡ ಬಿಡುಗಡೆಯಾಗಿದೆ.

ದರ್ಶನ್ ಅವರಂತೆ ರಾಧನ ರಾಮ್(Radhana Ram) ಕೂಡ ರಗಡ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಖಂಡಿತವಾಗಿ ಕೇವಲ ದರ್ಶನ್(Darshan) ರವರ ಸಿನಿಮಾ ಜೀವನದಲ್ಲಿ ಮಾತ್ರವಲ್ಲದೆ ರಾಧನಾ ರಾಮ್ ಅವರ ಸಿನಿಮಾ ಜೀವನಕ್ಕೂ ಕೂಡ ಇದೊಂದು ಒಳ್ಳೆಯ ಸ್ಟಾರ್ಟನ್ನು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ. ರಾಧನ ರಾಮ್ ಅವರ ಪಾತ್ರದ ಪೋಸ್ಟರ್ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Comment

error: Content is protected !!