Yash: ಯಶ್ ಅತ್ಯಂತ ಇಷ್ಟಪಡುತ್ತಿದ್ದ ಕನ್ನಡದ ಸ್ಟಾರ್ ನಟ ಇವರೇ ನೋಡಿ. ಇವರೆಂದರೆ ಯಶ್ ಗೆ ಪಂಚಪ್ರಾಣ!

Rocking Star Yash ಒಂದು ಕಾಲದಲ್ಲಿ ಸಿನಿಮಾಗಳ ಅವಕಾಶಕ್ಕಾಗಿ ಕಷ್ಟಪಡುತ್ತಿದ್ದ ಹುಡುಗ ನಂತರ ಗಾಂಧಿನಗರದಲ್ಲಿ ತನ್ನ ಕಟೌಟ್ ಬೀಳಬೇಕು ಎನ್ನುವ ಕನಸನ್ನು ಕಂಡಿದ್ದ. ಆದರೆ ಆಶ್ಚರ್ಯ ಎನ್ನುವಂತೆ ಇಂದು ಇಡೀ ದೇಶದಲ್ಲಿ ಆತನ ಅಭಿಮಾನಿ ಎಂದು ಹೇಳುವುದಕ್ಕೆ ಕೋಟ್ಯಾಂತರ ಜನರು ಕಾಯುತ್ತಿದ್ದಾರೆ. ಹೌದು ನಾವ್ ಮಾತನಾಡುತ್ತಿರುವುದು ರಾಕಿಂಗ್ ಸ್ಟಾರ್ ಯಶ್(Rocking Star Yash) ಅವರ ಬಗ್ಗೆ.

ಕೇವಲ ತನ್ನ ಹೆತ್ತವರ ಹೆಸರನ್ನು ಮಾತ್ರವಲ್ಲದೆ ಇಡೀ ಕರ್ನಾಟಕದ ಹೆಸರನ್ನೇ ಇಡೀ ಭಾರತೀಯ ಚಿತ್ರರಂಗದ ಭೂಪಟದಲ್ಲಿ ಆಕಾಶದೆತ್ತರಕ್ಕೆ ಹಾರಾಡುವಂತೆ ಮಾಡಿದಂತಹ ಧೀಮಂತ ವ್ಯಕ್ತಿ. ತನ್ನ ಬದುಕು ಬೇರೆಯವರಿಗೆ ಸ್ಪೂರ್ತಿ ಆಗಬೇಕು ಎನ್ನುವ ರೀತಿಯಲ್ಲಿ ಸಿನಿಮಾ ರಂಗದಲ್ಲಿ ಬದುಕಿದಂತಹ ಯೂತ್ ಐಕಾನ್ ಎಂದರು ಕೂಡ ತಪ್ಪಾಗಲಾರದು.

ಇನ್ನು ಇವರ ಜೀವನದಲ್ಲಿ ಇವರನ್ನು ಇಷ್ಟಪಟ್ಟಂತಹ ಜನಸಾಮಾನ್ಯ ಅಭಿಮಾನಿ ಅಭಿಮಾನಿಗಳು ಹಾಗೂ ಸೆಲೆಬ್ರಿಟಿ ಅಭಿಮಾನಿಗಳು ಕೂಡ ಸಾಕಷ್ಟು ಜನ ಸಿಗಬಹುದು. ಆದರೆ ಇವರು ತಮ್ಮ ಚಿಕ್ಕವಯಸ್ಸಿನಿಂದ ಹಿಡಿದು ಇಲ್ಲಿಯವರೆಗೂ ಕೂಡ ಇಷ್ಟ ಪಟ್ಟಂತಹ ಒಬ್ಬ ಸೆಲೆಬ್ರಿಟಿಯ ಬಗ್ಗೆ ಇಂದಿನ ಲೇಖನಿಯಲ್ಲಿ ನಾವು ಹೇಳಲು ಹೊರಟಿದ್ದೇವೆ. ಅಷ್ಟಕ್ಕೂ ಆ ಸೆಲೆಬ್ರಿಟಿ ಯಾರು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಚಿಕ್ಕವಯಸ್ಸಿನಿಂದ ಹಿಡಿದು ಇಲ್ಲಿಯವರೆಗೆ ರಾಕಿಂಗ್ ಸ್ಟಾರ್ ಯಶ್(Yash) ರವರು ಅತ್ಯಂತ ಹೆಚ್ಚಾಗಿ ಇಷ್ಟ ಪಡುತ್ತಿದ್ದ ಕನ್ನಡದ ಸ್ಟಾರ್ ನಟ ಎಂದರೆ ಅದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್(Puneeth Rajkumar). ಇದನ್ನು ಯಶ್ ರವರು ಹಲವಾರು ವೇದಿಕೆಯ ಮೇಲೆ ಖುದ್ದಾಗಿ ಅವರೇ ಹೇಳಿದ್ದಾರೆ. ಅದೇ ರೀತಿ ಪರಸ್ಪರ ಇಬ್ಬರೂ ಕೂಡ ಹಲವಾರು ವೇದಿಕೆಯಲ್ಲಿ ಸಹೋದರತ್ವದ ಬಾಂಧವ್ಯವನ್ನು ಹೊಂದಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.

Leave a Comment

error: Content is protected !!