Radhika Kumaraswamy: ಕನ್ನಡ ಚಿತ್ರರಂಗದಲ್ಲಿ ರಾಧಿಕಾ ಕುಮಾರಸ್ವಾಮಿ ಅವರ ನೆಚ್ಚಿನ ನಟಿ ಯಾರು? ಇವ್ರೇ ನೋಡಿ.

Radhika Kumaraswamy ನಟಿ ರಾಧಿಕಾ ಕುಮಾರಸ್ವಾಮಿ(Actress Radhika Kumaraswamy) ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದಂತಹ ದೊಡ್ಡ ಮಟ್ಟದ ಅಭಿಮಾನಿ ಬಳಗದ ಮೂಲಕ ಚಿತ್ರರಂಗವನ್ನು ನಾಯಕ ನಟಿಯಾಗಿ ಆಳಿದಂತವರು. ಇಂದಿಗೂ ಕೂಡ ಯಾವುದೇ ಸ್ಟಾರ್ ನಾಯಕ ನಟನ ಸಿನಿಮಾದಲ್ಲಿ ಕೂಡ ನಟಿಸುವ ಮೂಲಕ ಮತ್ತೆ ಚಿತ್ರರಂಗದ ಬಹು ಬೇಡಿಕೆಯ ನಾಯಕನಟಿಯ ರೂಪದಲ್ಲಿ ಕಂಬ್ಯಾಕ್ ಮಾಡಬಹುದಾಗಿದೆ.

ಸದ್ಯದ ಮಟ್ಟಿಗೆ ನಿರ್ಮಾಪಕ ಹಾಗೂ ಮಹಿಳಾ ಪ್ರಾಧಾನ್ಯತೆ ಹೊಂದಿರುವಂತಹ ಸಿನಿಮಾಗಳಲ್ಲಿ ನಾಯಕ ನಟಿಯಾಗಿ ನಟಿಸುವ ಮೂಲಕ ರಾಧಿಕಾ ಕುಮಾರಸ್ವಾಮಿ(Radhika Kumaraswamy) ಅವರು ಚಿತ್ರರಂಗದಲ್ಲಿ ಇನ್ನೂ ಕೂಡ ಪ್ರೇಕ್ಷಕರ ನೆಚ್ಚಿನ ನಟಿಯಾಗಿದ್ದೇನೆ ಎಂಬುದನ್ನು ಸಾಬೀತು ಪಡಿಸುತ್ತಿದ್ದಾರೆ. ಏನು ಇದರ ನಡುವೆ ಸಾಕಷ್ಟು ಸಂದರ್ಶನಗಳಲ್ಲಿ ಕೂಡ ಸತತವಾಗಿ ರಾಧಿಕಾ ಕುಮಾರಸ್ವಾಮಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.

ಅದೇ ಸಂದರ್ಶನಗಳ ಒಂದು ತುಣುಕಿನ ಕುರಿತಂತೆ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿದ್ದೇವೆ. ಹೌದು ಮಿತ್ರರೇ ನಟಿ ರಾಧಿಕಾ ಕುಮಾರಸ್ವಾಮಿ(Actress Radhika Kumaraswamy) ಅವರ ಬಳಿ ನಿಮ್ಮ ನೆಚ್ಚಿನ ಕನ್ನಡದ ನಟಿ ಯಾರು ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು ಅದಕ್ಕೆ ಅವರು ನೀಡಿರುವಂತಹ ಉತ್ತರ ಏನೆಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ನಟಿ ರಾಧಿಕಾ ಕುಮಾರಸ್ವಾಮಿ ಅವರಂತೆ ಸ್ವಲ್ಪ ಸಮಯಗಳ ಕಾಲ ಚಿತ್ರರಂಗವನ್ನು ತೊರೆದು ನಂತರ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡು ಈಗ ಮತ್ತೆ ಚಿತ್ರರಂಗಕ್ಕೆ ಕಾಲಿಡುತ್ತಿರುವಂತಹ ನಟಿ ರಮ್ಯಾ(Actress Ramya) ಅವರೇ ರಾಧಿಕಾ ಕುಮಾರಸ್ವಾಮಿ ಅವರ ನೆಚ್ಚಿನ ನಟಿ ಎಂಬುದಾಗಿ ಸಂದರ್ಶನದಲ್ಲಿ ಉತ್ತರ ನೀಡಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!