Salman Khan: 57ನೇ ವರ್ಷ ವಯಸ್ಸಿನಲ್ಲಿ ಸಲ್ಮಾನ್ ಖಾನ್ ಪ್ರೀತಿಯಲ್ಲಿ ಬಿದ್ರಾ? ಅದು ಕೂಡ ಯಾರ ಜೊತೆ ನೀವೇ ನೋಡಿ.

Salman Khan ನಟ ಸಲ್ಮಾನ್ ಖಾನ್(Salman Khan) ಅವರು ಕಳೆದ 35 ವರ್ಷಗಳಿಗಿಂತಲೂ ಅಧಿಕಕಾಲದಿಂದಲೂ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದಂತಹ ನಟನೆ ಹಾಗೂ ಸಿನಿಮಾಗಳ ಮೂಲಕ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡು ಬಂದಿದ್ದಾರೆ. ಬಾಲಿವುಡ್ ಚಿತ್ರರಂಗದಲ್ಲಿ ಇದಕ್ಕಾಗಿ ಅವರನ್ನು ಮೆಗಾಸ್ಟಾರ್(Megastar Of Bollywood) ಎಂಬುದಾಗಿ ಕರೆಯಲಾಗುತ್ತದೆ.

ಎಲ್ಲಕ್ಕಿಂತ ಪ್ರಮುಖವಾಗಿ ಇಷ್ಟೊಂದು ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದರೂ ಕೂಡ ಇನ್ನೂ ಕೂಡ ಮದುವೆ ಆಗದೆ ಭಾರತೀಯ ಚಿತ್ರರಂಗದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆಗಿ ಕಾಣಿಸಿಕೊಂಡಿದ್ದಾರೆ. ಹೀಗೆಂದ ಮಾತ್ರಕ್ಕೆ ಸಿಂಗಲ್ ಎಂದು ಭಾವಿಸಬೇಡಿ ಯಾಕೆಂದರೆ ಸಾಕಷ್ಟು ಬಾಲಿವುಡ್ ನಟಿಯರ ಜೊತೆಗೆ ಸಲ್ಮಾನ್ ಖಾನ್ ಅವರ ಹೆಸರು ತಳುಕು ಹಾಕಿಕೊಂಡಿತ್ತು. ಹೀಗಿದ್ದರೂ ಕೂಡ ಯಾರೊಬ್ಬರ ಜೊತೆಗೂ ಕೂಡ ಸಲ್ಮಾನ್ ಖಾನ್(Salman Khan) ಅವರ ಮದುವೆ ಆಗಿರಲಿಲ್ಲ.

ಆದರೆ ಈಗ ಕರಾವಳಿ ಬ್ಯೂಟಿ ಆಗಿರುವಂತಹ ಬಹುಭಾಷಾ ತಾರೆ ಪೂಜಾ ಹೆಗ್ಡೆ(Pooja Hegde) ಅವರ ಜೊತೆಗೆ ಸಲ್ಮಾನ್ ಖಾನ್ ರವರ ಹೆಸರು ಬಲವಾಗಿ ಕೇಳಿಬರುತ್ತದೆ ಇದಕ್ಕೆ ಒಂದು ಕಾರಣ ಕೂಡ ಇದೆ. ಹೌದು ಇತ್ತೀಚಿಗಷ್ಟೇ, ನೀವು ಇಡೀ ಭಾರತೀಯ ಚಿತ್ರರಂಗದ ಎಲ್ಲರ ಅಣ್ಣ ಎಂಬುದಾಗಿ ಪತ್ರಕರ್ತರು ಹೇಳಿದ ಪ್ರಶ್ನೆಗೆ ಸಲ್ಮಾನ್ ಖಾನ್ ಅವರು ಎಲ್ಲರಿಗೂ ಅಣ್ಣ ಅಲ್ಲ ಕೆಲವರಿಗೆ ನಾನು ಪ್ರೀತಿ ಕೂಡ ಆಗಿದ್ದೇನೆ ಎಂಬುದಾಗಿ ಹೇಳಿದ್ದಾರೆ.

ಇತ್ತೀಚಿಗ ಪೂಜಾ ಹೆಗ್ಡೆ ಅವರ ಜೊತೆಗೆ ಸಲ್ಮಾನ್ ಖಾನ್ ಕಿಸಿಕ ಬಾಯಿ ಕಿಸಿಕ ಜಾನ್(Kisi Ka Bhai Kisi Ka Jaan) ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದಾರೆ. ಈ ಸಿನಿಮಾದ ನಂತರ ಇವರಿಬ್ಬರ ನಡುವೆ ಗುಸು-ಗುಸು ಲವ್ ಸ್ಟೋರಿಗಳು ಹೆಚ್ಚಾಗಿ ಕೇಳಿ ಬರುತ್ತಿದ್ದು ಇದೇ ಕಾರಣಕ್ಕಾಗಿ ಇದೇ ಡೈಲಾಗನ್ನು ಸಲ್ಮಾನ್ ಖಾನ್ ಅವರು ಪತ್ರಕರ್ತರ ಎದುರು ಕೂಡ ಹೇಳಿರಬಹುದು ಎಂಬುದಾಗಿ ಎಲ್ಲರೂ ಕೂಡ ಅಂದಾಜಿಸುತ್ತಿದ್ದಾರೆ.

Leave a Comment

error: Content is protected !!