Rakshak bullet: ನನಗೆ 5 ಮದುವೆಯಾಗುವ ಯೋಗ ಇದೆ ಎಂಬ ಶಾಕಿಂಗ್ ಹೇಳಿಕೆ ನೀಡಿದ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್!

Rakshak bullet In Kannada Bigg Boss: ಸ್ನೇಹಿತರೆ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 10 ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದ್ದು, ಶಾಂತಿವನದಂತೆ ಇದ್ದಂತಹ ಬಿಗ್ ಬಾಸ್ ಮನೆ ಇದೀಗ ರಣರಂಗವಾಗಿಬಿಟ್ಟಿದೆ. ಸ್ನೇಹ ಪ್ರೀತಿ ದ್ವೇಷ ಕರುಣೆ ಸೇಡು ಹೀಗೆ ಎಲ್ಲಾ ರೀತಿಯ ಭಾವನೆಗಳು ನೋಡ ಸಿಗುವಂತಹ ಏಕೈಕ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್. ಇನ್ನು ಈ ಸೀಸನ್ ಸ್ಪರ್ದಿಗಳು ಒಂದಲ್ಲ ಒಂದು ವಿಚಾರದಿಂದ ಸಾಮಾಜಿಕ ಜಾಲತಾಣದಲ್ಲಿಯೂ ಸಿಕ್ಕಾಪಟ್ಟೆ ಚರ್ಚೆಗೆ ಒಳಗಾಗುತ್ತಿದ್ದು

ಅದರಂತೆ ಬುಲೆಟ್ ಪ್ರಕಾಶ್ ಅವರ ಪುತ್ರ ರಕ್ಷಕ್ (Rakshak) ವೈರಲ್ ಹೇಳಿಕೆ ಒಂದು ನೀಡುವ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಹೌದು ಗೆಳೆಯರೇ ನನ್ನ ಜಾತಕದಲ್ಲಿ ಐದೈದು ಮದುವೆಯಾಗುವ ಯೋಗ ಇದೆ ಎಂಬ ರಕ್ಷಕ್ ಅವರ ಈ ಹೇಳಿಕೆಗೆ ಸದ್ಯ ಇತರೆ ಸ್ಪರ್ಧಿಗಳು ಹಾಗೂ ನೆಟ್ಟಿಗರು ರಕ್ಷಕ ಅವರ ಕಾಲೆಳೆಯುತ್ತಿದ್ದಾರೆ. ಹೌದು ಗೆಳೆಯರೇ ನಿನ್ನೆಯ ಎಪಿಸೋಡ್ (Yesterday’s episode) ನಲ್ಲಿ ತನಿಷಾ, ಸ್ನೇಹಿತ್ ಸಿರಿ ಮತ್ತು ರಕ್ಷಕ್ ನಾಲ್ವರು ಕುಳಿತು ಮಾತನಾಡುತ್ತಾ ತಮ್ಮ ವೈಯಕ್ತಿಕ ವಿಚಾರಗಳನ್ನು ಹೊರ ಹಾಕುತ್ತಿರುತ್ತಾರೆ.

ಆ ಸಂದರ್ಭದಲ್ಲಿ 40 ವರ್ಷದ ನಟಿ ಸಿರಿ(Siri) ಅವರು ನನಗೆ ಮದುವೆಯ ಬಗ್ಗೆ ಆಸಕ್ತಿ ಇಲ್ಲ ಆದ ಕಾರಣ ನಾನು ಇನ್ನು ಮದುವೆಯಾಗುವ ಮನಸ್ಸನ್ನೇ ಮಾಡಿಲ್ಲ ಎಂದರು. ಆ ಸಂದರ್ಭದಲ್ಲಿ ರಕ್ಷಕ್ (Rakshak) ತಮ್ಮ ಮದುವೆ ವಿಚಾರದ ಕುರಿತು ಬಾಯಿಬಿಟ್ಟಿದ್ದು, ನಮ್ಮ ತಂದೆ ಇದ್ದಾಗ ನಾನು ಒಮ್ಮೆ ಜಾತಕ ತೋರಿಸಿದ್ದೆ ಆಗ ಜ್ಯೋತಿಷಿ ರಕ್ಷಕಗೆ ಐದು ಮದುವೆಯಾಗುವ ಯೋಗ ಇದೆ ಎಂದು ಹೇಳಿದ್ದರು ಎಂಬ ಹೇಳಿಕೆ ನೀಡಿದ್ದಾರೆ.

Rakshak bullet In Kannada Bigg Boss

ಇವರ ಮಾತು ಕೇಳಿದೊಡನೆ ಸ್ಥಳದಲ್ಲಿ ಇದ್ದಂತಹ ಸ್ನೇಹಿತ್ ಹಾಗೂ ತನಿಷ ರಕ್ಷಕ್ ಅವರ ಕಾಲೆಳೆದಿದ್ದು ಅದಕ್ಕೆ ನಾ ವೈಲ್ಡ್ ಕಾರ್ಡ್ ಎಂಟ್ರಿ (Wild card entry) ಬರಲಿ ಬರಲಿ ಅಂತ ಕಾಯ್ತಾ ಇರೋದು ಎಂದಿದ್ದಾರೆ. ಹೌದು ಗೆಳೆಯರೇ ಯಾವುದೇ ಸಾಧನೆ ಮಾಡಿಲ್ಲದಂತಹ ರಕ್ಷಕ್ ಅವರು ಬಿಗ್ ಬಾಸ್ ಸ್ಪರ್ಧಿಯಾಗಿ ದೊಡ್ಮನೆ ಪ್ರವೇಶಿಸಲಿದ್ದಾರೆ ಎಂಬ ಸುದ್ದಿ ಹೊರಬಂದ ಬಳಿಕ ಹಲವರಿಂದ ವಿರೋಧ ವ್ಯಕ್ತವಾಯಿತು ಆದರೆ ತಮಗೆ ಸಿಕ್ಕಿರುವಂತಹ ಅವಕಾಶವನ್ನು

ಸದುಪಯೋಗಪಡಿಸಿಕೊಳ್ಳುತ್ತಿರುವಂತಹ ರಕ್ಷಕ್ (Rakshak) ಅವರು ತಮ್ಮ ತಂದೆಯಂತೆ ಪಂಚಿಂಗ್ ಡೈಲಾಗ್ಗಳ ಮೂಲಕ ಪ್ರೇಕ್ಷಕರನ್ನು ರಂಜಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಯಾವುದೇ ಟಾಸ್ಕ್ ಗಳಲ್ಲಿಯೂ ಉತ್ತಮ ಪ್ರದರ್ಶನ ತೋರುತ್ತ ಕನ್ನಡಿಗರ ಮನಸ್ಸನ್ನು ಸೆಳೆಯುವ ಪ್ರಯತ್ನದಲ್ಲಿದ್ದಾರೆ. ಇದನ್ನೂ ಓದಿ ಸೀಮಂತ ಶಾಸ್ತ್ರದ ವೇಳೆ ಸ್ನೇಹಿತರ ಪ್ರೀತಿ ಕಂಡು ಕಣ್ಣೀರು ಹಾಕಿದ ಕಾಮಿಡಿ ಕಿಲಾಡಿಗಳು ನಯನ! ಸೀಮಂತ ಶಾಸ್ತ್ರದ ಸುಂದರ ಫೋಟೋಗಳು ಇಲ್ಲಿವೆ

Leave a Comment

error: Content is protected !!