Rakshit Shetty: ಅಮೆರಿಕಾಗೆ ಹಾರಿದ ರಕ್ಷಿತ್ ಶೆಟ್ಟಿ. ಅತೀ ಶೀಘ್ರದಲ್ಲೇ ಸಿಗಲಿದೆ ನಿಮಗೆಲ್ಲಾ ದೊಡ್ಡ ಗುಡ್ ನ್ಯೂಸ್.

Rakshit Shetty ಕನ್ನಡ ಚಿತ್ರರಂಗದ ಭರವಸೆಯ ನಿರ್ದೇಶಕ ಹಾಗೂ ನಟ ಮತ್ತು ನಿರ್ಮಾಪಕ ಆಗಿರುವಂತಹ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ(Simple Star Rakshit Shetty) ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸದ್ಯಕ್ಕೆ ಸಪ್ತಸಾಗರದಾಚೆ ಎಲ್ಲೋ ಎನ್ನುವ ಸಿನಿಮಾದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಇದಕ್ಕಾಗಿ ಅವರು ಎರಡು ಶೇಡ್ ಗಳಲ್ಲಿ ಕೂಡ ಕಾಣಿಸಿಕೊಂಡಿರುವುದು ನೀವು ಕೆಲವೊಂದು ತುಣುಕುಗಳ ಮೂಲಕ ನೋಡಿರಬಹುದು.

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಸತತವಾಗಿ ಸೋಲನ್ನು ಕಂಡಿದ್ದ ರಕ್ಷಿತ್ ಶೆಟ್ಟಿ, ಇಂದು ಯುವಕರ ಪಾಲಿನ ನೆಚ್ಚಿನ ನಾಯಕ ನಟ ಆಗಿದ್ದಾರೆ ಎಂದರು ತಪ್ಪಾಗಲಾರದು. ಅದರಲ್ಲೂ ವಿಶೇಷವಾಗಿ ಕಿರಿಕ್ ಪಾರ್ಟಿ(Kirik Party Film) ಎನ್ನುವ ಸಿನಿಮಾ ಅವರ ಸಿನಿಮಾ ಜೀವನವನ್ನು ಬದಲಾಯಿಸಿತು ಎಂದು ಹೇಳಬಹುದಾಗಿದೆ. ಅಷ್ಟರ ಮಟ್ಟಿಗೆ ಅವರ ಸಿನಿಮಾ ಹಾಗೂ ಅವರ ಬಗ್ಗೆ ಜನರು ಇಟ್ಟುಕೊಂಡಂತಹ ದೃಷ್ಟಿಕೋನ ಆ ಸಿನಿಮಾದಿಂದ ಬದಲಾಯಿತು ಎಂದು ಹೇಳಬಹುದಾಗಿದೆ.

ಇನ್ನು ನೆನ್ನೆಯಷ್ಟೇ ನಿಮಗೆಲ್ಲರಿಗೂ ತಿಳಿದಿರಬಹುದು ರಕ್ಷಿತ್ ಶೆಟ್ಟಿ(Rakshit Shetty) ಅವರು ಮತದಾನ ಮಾಡುವ ಸಂದರ್ಭದಲ್ಲಿ ನಾನು ಅಮೆರಿಕಾಗೆ ಹೋಗುತ್ತಿದ್ದೇನೆ ಎಂಬುದಾಗಿ ಹೇಳಿದ್ದಾರೆ. ಇದರ ಹಿಂದೆ ಒಂದು ಗುಡ್ ನ್ಯೂಸ್ ನೀಡುವ ವಿಚಾರವನ್ನು ಕೂಡ ಅವರು ಬಹಿರಂಗಪಡಿಸಿದ್ದಾರೆ. ಅದೇನೆಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಹೌದು ಅವರ ಬಹುನಿರೀಕ್ಷಿತ ಸಿನಿಮಾ ಆಗಿರುವಂತಹ ರಿಚರ್ಡ್ ಅಂಟೆನಿ(Richard Antony) ಸಿನಿಮಾದ ಫೈನಲ್ ಡ್ರಾಫ್ಟ್ ಬರೆಯುವುದಕ್ಕಾಗಿ ಅಮೇರಿಕಾಗೆ ರಕ್ಷಿತ್ ಶೆಟ್ಟಿ ಹೋಗುತ್ತಿದ್ದು ಅಲ್ಲಿ ಕೆಲಸ ಮುಗಿಸಿಕೊಂಡೆ ಬರುತ್ತೇನೆ ಹಾಗೂ ಬಂದ ತಕ್ಷಣವೇ ಚಿತ್ರೀಕರಣವನ್ನು ಪ್ರಾರಂಭಿಸುತ್ತೇನೆ ಎನ್ನುವಂತಹ ಸಂತೋಷದ ಸುದ್ದಿಯನ್ನು ನೀಡಿದ್ದಾರೆ.

Leave a Comment

error: Content is protected !!