Ramya: ರಮ್ಯಾ ಎಲ್ಲೇ ಇದ್ರೂ ಆ ಕನ್ನಡದ ಖ್ಯಾತ ನಟ ನಂಬರ್ ಹುಡುಕಿ ಫೋನ್ ಮಾಡ್ತಿದ್ರಂತೆ! ರಮ್ಯಾ ಅವರ ಬಿಚ್ಚಿಟ್ಟ ರಹಸ್ಯವಿದು.

Ramya ನಟಿ ರಮ್ಯಾ ಕನ್ನಡ ಚಿತ್ರರಂಗದ ಅನಬಿಷಕ್ತ ರಾಣಿ ಎನ್ನುವಂತಹ ಹೆಸರಿನಲ್ಲಿ ಕರೆಯಲ್ಪಡುತ್ತಾರೆ. ಸಾಕಷ್ಟು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಾಯಕ ನಟಿಯಾಗಿ ಕಾಣಿಸಿಕೊಳ್ಳುತ್ತಿರುವ ರಮ್ಯಾ(Ramya) ಮಧ್ಯದಲ್ಲಿ ಚಿತ್ರರಂಗವನ್ನು ತೊರೆದು ಸಂಪೂರ್ಣವಾಗಿ ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಈಗ ಮತ್ತೆ ಚಿತ್ರರಂಗಕ್ಕೆ ವಾಪಸ್ ಆಗಿದ್ದಾರೆ.

ಹೇಗಿದ್ದರೂ ಕೂಡ ಮೊದಲು ತೋರಿಸುತ್ತಿದ್ದಷ್ಟೇ ಪ್ರೀತಿ ಹಾಗೂ ಗೌರವವನ್ನು ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯ ಮೇಲೆ ತೋರಿಸುತ್ತಿದ್ದಾರೆ. ನಿಜಕ್ಕೂ ಕೂಡ ಇದು ನಟಿ ರಮ್ಯಾ(Actress Ramya) ಅವರ ಜನಪ್ರಿಯತೆ ಹಾಗೂ ಬೇಡಿಕೆ ಕನ್ನಡ ಚಿತ್ರರಂಗದಲ್ಲಿ ಯಾವ ಮಟ್ಟದಲ್ಲಿ ಇದೆ ಎನ್ನುವುದನ್ನು ಸಾಬೀತುಪಡಿಸುತ್ತದೆ.

ಇನ್ನು ಕನ್ನಡ ಚಿತ್ರರಂಗದಲ್ಲಿ ರಮ್ಯ(Ramya) ಅವರಿಗೆ ಪರ್ಫೆಕ್ಟ್ ಜೋಡಿ ಆಗಿರುವಂತಹ ಮತ್ತೊಬ್ಬ ಸ್ಟಾರ್ ನಟ ಎಂದರೆ ಅವರಲ್ಲಿ ಮುಂಚುಣಿ ಸ್ಥಾನದಲ್ಲಿ ಕಾಣಿಸಿಕೊಳ್ಳುವುದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ರವರ ಎಂದು ಹೇಳಬಹುದಾಗಿದೆ. ಕಿಚ್ಚ ಹಾಗೂ ರಮ್ಯಾ ಅವರ ಜೋಡಿ ಸಾಕಷ್ಟು ಸಿನಿಮಾಗಳಲ್ಲಿ ಸೂಪರ್ ಹಿಟ್ ಆಗಿದ್ದು ಪ್ರೇಕ್ಷಕರು ಕೂಡ ಇದನ್ನು ಒಪ್ಪಿಕೊಳ್ಳುತ್ತಾರೆ.

ಇನ್ನು ಕಿಚ್ಚ ಸುದೀಪ್(Kiccha Sudeep) ರವರು ಎಷ್ಟು ಕೇರಿಂಗ್ ಎಂದರೆ ನಾನು ಎಲ್ಲೇ ಹೋದರು ಕೂಡ ನನ್ನ ಫೋನ್ ನಂಬರನ್ನು ಹೇಗೋ ಹುಡುಕಿ ಹೇಗಿದ್ದೀರಾ ಚೆನ್ನಾಗಿದ್ದೀರಾ ಲೈಫ್ ನಲ್ಲಿ ಏನೆಲ್ಲಾ ನಡೆಯುತ್ತಿದೆ ಎನ್ನುವುದಾಗಿ ವಿಚಾರಿಸುತ್ತಿರುತ್ತಿದ್ದರಂತೆ ಎಂಬುದಾಗಿ ನಟಿ ರಮ್ಯಾ ಅವರೇ ನಡೆದಿರುವಂತಹ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

Leave a Comment

error: Content is protected !!