Rakshit Shetty: ಒಂದು ಕಾಲದಲ್ಲಿ ಮದುವೆಯಾಗಲು ಹೊರಟಿದ್ದ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕ ಮಂದಣ್ಣ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ?

Rashmika Mandanna ಕಿರಿಕ್ ಪಾರ್ಟಿ(Kirik Party) ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ನಿರ್ದೇಶಕ ಹಾಗೂ ನಟರಿಗೆ ಯಾವ ಮಟ್ಟದಲ್ಲಿ ಫೇಮನ್ನು ತಂದು ಕೊಟ್ಟಿದೆ ಎನ್ನುವುದನ್ನು ವಿಶೇಷವಾಗಿ ವಿವರಿಸಿ ಹೇಳಬೇಕಾಗಿಲ್ಲ ಅದೇ ಕಾರಣದಿಂದಾಗಿ ಇಂದು ಒಬ್ಬ ನಟಿ ಇಡೀ ಭಾರತ ದೇಶದಲ್ಲಿ ತಮ್ಮ ಸಿನಿಮಾಗಳ ನಟನೆಯ ಮೂಲಕ ನ್ಯಾಷನಲ್ ಕೃಷ್ ಪಟ್ಟವನ್ನು ಕೂಡ ಪಡೆದುಕೊಂಡಿದ್ದಾರೆ.

ಹೌದು ನಾವ್ ಮಾತನಾಡಲು ಹೊರಟಿರುವುದು ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ರೂಪವನ್ನು ಪಡೆದುಕೊಂಡಂತಹ ರಕ್ಷಿತ್ ಶೆಟ್ಟಿ(Rakshit Shetty) ಹಾಗೂ ಸಿನಿಮಾ ಜೀವನವನ್ನು ಪಡೆದುಕೊಂಡಂತಹ ರಶ್ಮಿಕ ಮಂದಣ್ಣ(Rashmika Mandanna) ಅವರ ಕುರಿತಂತೆ. ಈ ಸಿನಿಮಾದ ನಟನೆಯ ಮೂಲಕವೇ ಇವರಿಬ್ಬರ ನಡುವೆ ಪ್ರೀತಿ ಚಿಗುರೊಡೆದು ಇಬ್ಬರೂ ಕೂಡ ಎಂಗೇಜ್ಮೆಂಟ್ ಕೂಡ ಮಾಡಿಕೊಂಡಿದ್ದರು ಎನ್ನುವ ಸುದ್ದಿಯನ್ನು ನೀವಿನ್ನು ಮರೆತಿಲ್ಲ ಎಂಬುದಾಗಿ ಭಾವಿಸುತ್ತೇವೆ.

ಕೇವಲ ಒಂದೇ ಸಿನಿಮಾಗೆ ಇಬ್ಬರೂ ಕೂಡ ಎಂಗೇಜ್ಮೆಂಟ್ ತನಕ ಹೋಗಿದ್ದನ್ನು ನೋಡಿ ಇದು ಯಾವ ಸ್ಪೀಡ್ ಲವ್ ಸ್ಟೋರಿ ಎಂಬುದಾಗಿ ಮಾತನಾಡಿಕೊಂಡಿದ್ದರು. ಹೇಗಿದ್ದರೂ ಕೂಡ ಇವರಿಬ್ಬರೂ ಎಂಗೇಜ್ಮೆಂಟ್ ಮಾಡಿಕೊಂಡರು ಆದರೆ ಅದಾದ ನಂತರ ನಡೆದಷ್ಟೇ ವೇಗದಲ್ಲಿ ಎಂಗೇಜ್ಮೆಂಟ್ ಮುರಿದು ಹೋಗಿದ್ದು ಕೂಡ ನೀವೆಲ್ಲರೂ ನೋಡಿದ್ದೀರಿ. ಅಷ್ಟಕ್ಕೂ ಇವರಿಬ್ಬರ ನಡುವಿನ ವಯಸ್ಸಿನ ಅಂತರ ಎಷ್ಟು ಎಂಬುದನ್ನು ತಿಳಿಯೋಣ.

ರಕ್ಷಿತ್ ಶೆಟ್ಟಿ(Rakshit Shetty) ಅವರಿಗೆ 39 ವರ್ಷ ವಯಸ್ಸಾಗಿದ್ದರೆ ಈ ಕಡೆ ರಶ್ಮಿಕ ಮಂದಣ್ಣ(Rashmika Mandanna) ಅವರಿಗೆ 27 ವರ್ಷ ವಯಸ್ಸಾಗಿದೆ ಅಂದರೆ ಇವರಿಬ್ಬರ ನಡುವೆ ಭರ್ಜರಿ 12 ವರ್ಷಗಳ ವಯಸ್ಸಿನ ಅಂತರವಿದೆ. ಸದ್ಯಕ್ಕೆ ಇಬ್ಬರು ಕೂಡ ತಮ್ಮ ಸಿನಿಮಾ ಜೀವನದಲ್ಲಿ ಸಖತ್ ಬ್ಯುಸಿ ಆಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಮಟ್ಟದ ಸಿನಿಮಾ ಸಾಧನೆಯನ್ನು ಮಾಡುವ ಹಂಬಲದಲ್ಲಿದ್ದಾರೆ.

Leave a Comment

error: Content is protected !!