Dboss: ದರ್ಶನ್ 5,000 ಗಾಗಿ ಕೆಲಸ ಮಾಡಿದ ಆ ಸಿನಿಮಾ ಯಾವುದು ಗೊತ್ತಾ? ಸೂಪರ್ ಹಿಟ್ ಸಿನಿಮಾ!

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕನ್ನಡ ಚಿತ್ರರಂಗ ಕಂಡಂತಹ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಮೊದಲನೆಯದಾಗಿ ಕಾಣಿಸಿಕೊಳ್ಳುತ್ತಾರೆ ಅದರಲ್ಲೂ ವಿಶೇಷವಾಗಿ ಮಾಸ್ ಅಭಿಮಾನಿಗಳಿಗೆ ದರ್ಶನ್(Darshan) ರವರ ಸಿನಿಮಾಗಳು ಎಂದರೆ ಹಬ್ಬದಂತೆ. ತಮ್ಮ ಕುಟುಂಬಕ್ಕೆ ಹೆಚ್ಚಾಗಿ ತಮ್ಮ ಅಭಿಮಾನಿಗಳನ್ನು ಪ್ರೀತಿಸುವ ದರ್ಶನ್ ರವರು ತಮ್ಮ ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ.

ಖ್ಯಾತ ಖಳನಾಯಕನ ಮಗನಾಗಿದ್ದರೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರ ಕನ್ನಡ ಚಿತ್ರರಂಗದ ಹಾದಿ ಅಷ್ಟೊಂದು ಸುಲಭ ವಾಗಿರಲಿಲ್ಲ. ಪ್ರತಿಯೊಂದು ಅವಮಾನ ಹಾಗೂ ಕಷ್ಟದ ಹಾದಿಗಳನ್ನು ತುಳಿದುಕೊಂಡೆ ಅತ್ಯಂತ ಪರಿಶ್ರಮದಿಂದ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಇಂದು ಪ್ರತಿಯೊಂದು ಸಿನಿಮಾಗಳಿಗೂ ಕೂಡ ಕೋಟಿ ಕೋಟಿ ಎಣಿಸುತ್ತಿದ್ದಾರೆ. ಅದಕ್ಕಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಸಾಕಷ್ಟು ಯುವ ಪ್ರತಿಭೆಗಳಿಗೆ ಸ್ಪೂರ್ತಿಯಾಗಿ ಕಾಣಿಸಿಕೊಳ್ಳುತ್ತಾರೆ.

ಇನ್ನು ಇಂದು ಕೋಟಿ ಕೋಟಿ ಸಂಪಾದನೆಯನ್ನು ಮಾಡುತ್ತಿರಬಹುದು ಆದರೆ ಚಾಲಂಜಿಂಗ್ ಸ್ಟಾರ್ ದರ್ಶನ್ ರವರು ಒಂದು ಕಾಲದಲ್ಲಿ ಒಂದು ಸಿನಿಮಾಗೆ 5000 ಸಂಭಾವನೆಯನ್ನು ಪಡೆದುಕೊಂಡಿದ್ದರು ಎಂದರೆ ಖಂಡಿತವಾಗಿ ನೀವು ಕೂಡ ನಂಬುವುದಿಲ್ಲ. ಅಷ್ಟಕ್ಕೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು 5,000 ಸಂಭಾವನೆ ಪಡೆದ ಸಿನಿಮಾ ಯಾವುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು ಮಿತ್ರರೇ, ಮೆಜೆಸ್ಟಿಕ್ ಸಿನಿಮಾದ ಯಶಸ್ಸಿನ ನಂತರ ಕರಿಯ ಸಿನಿಮಾದಲ್ಲಿ ನಟಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕರಿಯ(Kariya) ಸಿನಿಮಾ ಗಾಗಿ 5000 ರೂಪಾಯಿ ಸಂಭಾವನೆಯನ್ನು ಪಡೆದುಕೊಂಡಿದ್ದರು ಎಂಬುದಾಗಿ ತಿಳಿದು ಬಂದಿದೆ. ಆದರೆ ಇಂದು ಪ್ರತಿಯೊಂದು ಸಿನಿಮಾಗಳಿಗೂ ಕೂಡ ಇಡೀ ಸ್ಯಾಂಡಲ್ವುಡ್ ನಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುವ ಹಾಗೆ ಸಂಭಾವನೆಯನ್ನು ಪಡೆಯುತ್ತಿದ್ದಾರೆ ನಮ್ಮೆಲ್ಲರ ನೆಚ್ಚಿನ ಡಿ ಬಾಸ್.

Leave a Comment

error: Content is protected !!