ಫೆಬ್ರವರಿಯಲ್ಲಿ ರಶ್ಮಿಕಾ-ವಿಜಯ್ ದೇವರಕೊಂಡ ಎಂಗೇಜ್ಮೆಂಟ್ ಆಗೋದು ಪಕ್ಕಾ!

Rashmika Mandanna: ಸ್ನೇಹಿತರೆ, ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ತಮ್ಮ ನಟನಾ ಬದುಕಿನ ಪಯಣವನ್ನು ಪ್ರಾರಂಭ ಮಾಡಿರುವಂತಹ ರಶ್ಮಿಕ ಮಂದಣ್ಣ (Rashmika Mandanna) ಇಂದು ಬಾಲಿವುಡ್ ಅಂಗಳದ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಈ ಹಿಂದೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshith Shetty) ಅವರೊಂದಿಗೆ ಎಂಗೇಜ್ಮೆಂಟ್ ಮಾಡಿಕೊಂಡು ವೈಯಕ್ತಿಕ ಕಾರಣಗಳಿಂದ ನಿಶ್ಚಿತಾರ್ಥವನ್ನು ಮುರಿದುಕೊಂಡು ಟಾಲಿವುಡ್ ಸಿನಿಮಾ ರಂಗಕ್ಕೆ ಹಾರಿದ್ದ ರಶ್ಮಿಕಾ ಮಂದಣ್ಣ ಅವರಿಗೆ ವಿಜಯ್ ದೇವರಕೊಂಡ ಅವರ ಪರಿಚಯವಾಗುತ್ತದೆ.

ಈ ಜೋಡಿಗಳ ಗೀತ ಗೋವಿಂದಂ ಸಿನಿಮಾ ಬಹು ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಗಂಡ ನಂತರ ಇಬ್ಬರು ಮತ್ತೆ ಡಿಯರ್ ಕಾಮ್ರೆಡ್(Dear Comrade) ಸಿನಿಮಾದಲ್ಲಿ ಕಾಣಿಸಿಕೊಂಡು ಮೋಡಿ ಮಾಡಿದರು. ಟಾಲಿವುಡ್ ನ ಕ್ಯೂಟ್ ಜೋಡಿಗಳು ಎಂದೇ ಕರೆಸಿಕೊಳ್ಳುವ ರಶ್ಮಿಕ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇಬ್ಬರು ಹಲವು ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದಾರೆ ಪ್ರೀತಿಯ ಅಮಲಿನಲ್ಲಿ ತೇಲಾಡುತ್ತಿದ್ದಾರೆ ಎಂಬ ಸಾಕಷ್ಟು ವಿಚಾರಗಳು ಹರಿದಾಡಿದವು.

ಹಾಗೂ ಅದಕ್ಕೆ ಸಾಕ್ಷಿ ಎಂಬಂತೆ ರಶ್ಮಿಕ ಮತ್ತು ವಿಜಯ್ ದೇವರಕೊಂಡ(Rashmika Mandanna and Vijay Devarakonda) ಅವರ ಪೋಸ್ಟ್ಗಳು ವೈರಲ್ ಆದವು. ಹೀಗಿರುವಾಗ ಕಳೆದ ಕೆಲವು ದಿನಗಳಿಂದ ರಶ್ಮಿಕ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇಬ್ಬರು ಉಂಗುರ ಬದಲಿಸಿ ಕೊಂಡು ಫೆಬ್ರವರಿ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ ಎಂಬ ಸುದ್ದಿ ಬಹು ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದು ನಿಜಾನಾ ಅಥವಾ ಗಾಳಿ ಸುದ್ದಿನ? ಎಂಬ ಎಲ್ಲಾ ಸಂಕ್ಷಿಪ್ತ ವಿವರವನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

ಹೌದು ಗೆಳೆಯರೆ ರಶ್ಮಿಕ ಮಂದಣ್ಣ ಅವರೊಂದಿಗೆ ಗೀತ ಗೋವಿಂದಂ ಸಿನಿಮಾದಲ್ಲಿ ಲಿಪ್+ಲಾಕ್ ಮಾಡಿದ ಸೀನ್ಗಳು ಬಿಡುಗಡೆಯಾದ ದಿನದಿಂದ ವಿಜಯ್-ರಶ್ ಇಬ್ಬರೂ ರಿಲೇಷನ್ಶಿಪ್ ನಲ್ಲಿ ಇದ್ದಾರೆ. ಹಲವು ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಬಾರಿ ಸುದ್ದಿಗೋಳಗಾಗಿದ್ದು ಆದರೆ ಇದಕ್ಕೆ ರಶ್ಮಿಕ ಅವರಾಗಲಿ ಅಥವಾ ವಿಜಯ್ ಅವರಾಗಲಿ ಅಧಿಕೃತ ವಿವರಣೆಯನ್ನು ನೀಡಿರಲಿಲ್ಲ.

ಅದರೀಗ ಇವರಿಬ್ಬರ ಎಂಗೇಜ್ಮೆಂಟ್ ಸುದ್ದಿ ಹರಿದಾಡುತ್ತಿದ್ದು, ಸದ್ಯ ರಶ್ಮಿಕ ಮಂದಣ್ಣ ಅವರು ನಟ ವಿಜಯ್ ಅವರ ಫ್ಯಾಮಿಲಿ ಸ್ಟಾರ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಇದೇ ವರ್ಷ ಆಗಸ್ಟ್ ತಿಂಗಳಿನಲ್ಲಿ ನಟ ಅಲ್ಲು ಅರ್ಜುನ್(Allu Arjuna) ಅವರ ಪುಷ್ಪ ೨ ಸಿನಿಮಾ ಕೂಡ ಬಿಡುಗಡೆಯಾಗುತ್ತದೆ. ಇದರ ಜೊತೆಗೆ ಚಾವಾ ಮತ್ತು ರೈನ್ಬೋ ಸಿನಿಮಾಗಳು ಕೂಡ ರಶ್ಮಿಕ ಮಂದಣ್ಣ ಅವರ ಕೈಯಲ್ಲಿ ಇದ್ದು ಸಿನಿಮಾ ಕೆಲಸಗಳ ಒತ್ತಡದ ನಡುವೆ ರಶ್ಮಿಕಾ ಮತ್ತು ವಿಜಯ್ ಈ ವರ್ಷ ಮದುವೆಯಾಗುವುದು ಅನುಮಾನ.

ಎಲ್ಲೆಡೆ ನಾವಿಬ್ಬರು ಜಸ್ಟ್ ಫ್ರೆಂಡ್ಸ್ ಎಂದು ಹೇಳಿಕೊಂಡು ಓಡಾಡುವ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ(Rashmika Mandanna and Vijay Devarakonda) ನೇರವಾಗಿ ಎಂಗೇಜ್ಮೆಂಟ್ ಮಾಡಿಕೊಳ್ಳುವ ಮೂಲಕ ತಮ್ಮಿಬ್ಬರ ರಿಲೇಶನ್ಶಿಪನ್ನು ಅಧಿಕೃತಗೊಳಿಸಬಹುದಾ ಎಂಬ ಅನುಮಾನವೂ ಇದೆ.

Leave a Comment

error: Content is protected !!