Allu Arjun: ನನ್ನ ಪ್ರೀತಿಯ ಪುಷ್ಪರಾಜ್..! ವಿಶೇಷವಾಗಿ ಅಲ್ಲು ಅರ್ಜುನ್ ಗೆ ರಶ್ಮಿಕಾ ಮಂದಣ್ಣ ಬರ್ತಡೇ ವಿಶ್! ಇಷ್ಟೊಂದು ಸಲಿಗೆ ಬೇಡ ಎಂದ ನೆಟ್ಟಿಗರು!

Rashmika Mandanna ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇಂದು ಅಂದರೆ ಏಪ್ರಿಲ್ 8ರಂದು ಅಲ್ಲು ಅರ್ಜುನ್(Allu Arjun) ರವರ ತಮ್ಮ ಜನ್ಮದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ. ಕೇವಲ ಅಭಿಮಾನಿಗಳು ಮಾತ್ರವಲ್ಲದೆ ಸಾಕಷ್ಟು ಸೆಲೆಬ್ರಿಟಿಗಳು ಕೂಡ ಅಲ್ಲು ಅರ್ಜುನ್ ಅವರ ಬರ್ತಡೆ ಆಚರಣೆಯಲ್ಲಿ ಭಾಗವಹಿಸುತ್ತಿದ್ದಾರೆ. ನೇರವಾಗಿ ಭೇಟಿ ಆಗದೇ ಇದ್ದವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಶುಭಾಶಯಗಳನ್ನು ಕೋರುತ್ತಿದ್ದಾರೆ.

ಇನ್ನು ನಿಮಗೆಲ್ಲರಿಗೂ ಗೊತ್ತೇ ಇರುವ ಹಾಗೆ ಅವರ ಮುಂದಿನ ಸಿನಿಮಾ ಆಗಿರುವಂತಹ ಪುಷ್ಪ 2(Pushpa 2) ಬಗ್ಗೆ ಪ್ರತಿಯೊಬ್ಬರು ಕೂಡ ಕಾತರರಾಗಿದ್ದು ನಿನ್ನೆಯಷ್ಟೇ ಪುಷ್ಪ 2 ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಇದು ಸಖತ್ ಸೆನ್ಸೇಷನ್ ಸುದ್ದಿಯಾಗಿದೆ. ಪುಷ್ಪ ಸಿನಿಮಾದ ಎರಡನೇ ಭಾಗದಲ್ಲಿ ಪುಷ್ಪರಾಜ್ ವಿಭಿನ್ನ ರೂಪದಲ್ಲಿ ಕಾಣಿಸಿಕೊಳ್ಳುತ್ತಿರುವುದು ಮತ್ತೊಂದು ವಿಶೇಷತೆಗೆ ಕಾರಣವಾಗಿದೆ.

ಅಲ್ಲು ಅರ್ಜುನ್ ರವರ ಪುಷ್ಪ 2 ಸಿನಿಮಾದ ನಾಯಕಿಯಾಗಿರುವಂತಹ ರಶ್ಮಿಕಾ ಮಂದಣ್ಣ(Rashmika Mandanna) ಕೂಡ ತಮ್ಮ ನೆಚ್ಚಿನ ನಟ ಆಗಿರುವಂತಹ ಅಲ್ಲು ಅರ್ಜುನ್ ಅವರಿಗೆ ವಿಶೇಷವಾದ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬರ್ತಡೆ ವಿಶ್ ಮಾಡಿದ್ದು ಇದು ನೆಟ್ಟಿಗರಿಗೆ ಕಾಲು ಎಳೆಯಲು ಮತ್ತೊಂದು ಅವಕಾಶವನ್ನು ಮಾಡಿಕೊಟ್ಟಿದೆ. ಅಷ್ಟಕ್ಕೂ ರಶ್ಮಿಕ ಮಂದಣ್ಣ ಯಾವ ರೀತಿ ವಿಶ್ ಮಾಡಿದ್ದಾರೆ ಎಂಬುದನ್ನು ನೋಡೋಣ ಬನ್ನಿ.

” ನನ್ನ ಪುಷ್ಪರಾಜನಿಗೆ ಬರ್ತಡೆಯ ಶುಭಾಶಯಗಳು. ಪುಷ್ಪನ ಪಾತ್ರದಲ್ಲಿ ನಿಮ್ಮನ್ನು ನೋಡಲು ಇಡೀ ಜಗತ್ತೇ ಕಾಯುತ್ತಿದೆ. ನಿಮ್ಮನ್ನು ಎಲ್ಲರೂ ಕೂಡ ಇನ್ನಷ್ಟು ಹೆಚ್ಚಾಗಿ ಪ್ರೀತಿಸಲಿ” ಎಂಬುದಾಗಿ ಆಶಿಸುತ್ತೇನೆ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ರಶ್ಮಿಕಾ ಮಂದಣ್ಣ(Rashmika Mandanna) ಅಲ್ಲು ಅರ್ಜುನ್ ಅವರಿಗೆ ಬರ್ತಡೆ ವಿಶ್ ಮಾಡಿದ್ದು ಕೆಲವು ನೆಟ್ಟಿಗರು ಇದಕ್ಕೆ ಪ್ರತಿಯಾಗಿ ಇಷ್ಟೊಂದು ಸಲಿಗೆ ಬೇಡ ಎಂಬುದಾಗಿ ಕಾಮೆಂಟ್ ಮಾಡುವ ಮೂಲಕ ಕಾಲ ನಡೆಯುತ್ತಿದ್ದಾರೆ.

Leave a Comment

error: Content is protected !!