Ravichandran: ಮದುವೆ ದಿನ ಕ್ರೇಜಿಸ್ಟಾರ್ ರವಿಚಂದ್ರನ್ ತಮ್ಮ ಹೆಂಡತಿ ಜೊತೆಗೆ ಹೇಗೆ ಕಾಣಿಸಿಕೊಂಡಿದ್ದರು ಗೊತ್ತಾ? ಫೋಟೋ ನೋಡಿ ವೈರಲ್.

Ravichandran ಕ್ರೇಜಿಸ್ಟಾರ್ ರವಿಚಂದ್ರನ್(Crazy Star Ravichandran) ಈ ಹೆಸರು ಕೇಳಿದಾಗ ಪ್ರತಿಯೊಬ್ಬರ ಕಿವಿ ಕೂಡ ನೆಟ್ಟಗಾಗುತ್ತದೆ. ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದಂತಹ ವಿಭಿನ್ನ ಸಿನಿಮಾ ಶೈಲಿಯ ಮೂಲಕ ಎಲ್ಲರ ಮನವನ್ನು ಗೆದ್ದಿರುವಂತಹ ನಾಯಕ ನಟ ನಿರ್ದೇಶಕ ಹಾಗೂ ನಿರ್ಮಾಪಕ. ಒಂದು ಕಾಲದಲ್ಲಿ ರವಿಚಂದ್ರನ್ ಅವರ ಸಿನಿಮಾಗಳು ಎಂದರೆ ಪ್ರತಿಯೊಬ್ಬರೂ ಕೂಡ ಫಸ್ಟ್ ಡೇ ಫಸ್ಟ್ ಶೋ ನೋಡಬೇಕೆಂದು ಕಾಯುತ್ತಿದ್ದರು.

ಕನ್ನಡ ಚಿತ್ರರಂಗದ ಯಾವುದೇ ಮೆಗಾಸ್ಟಾರ್ ಗಳ ಕ್ರೇಜಿಗೆ ಕಡಿಮೆ ಇಲ್ಲದಂತೆ ರವಿಚಂದ್ರನ್(Ravichandran) ಅವರ ಅಭಿಮಾನಿಗಳ ಬಳಗವೇ ಇತ್ತು. ಕನ್ನಡ ಚಿತ್ರರಂಗದಲ್ಲಿ ಹೈ ಬಜೆಟ್ ಸಿನಿಮಾಗಳನ್ನು ಮಾಡಲು ತೋರಿಸಿಕೊಟ್ಟಿದ್ದೇ ಕನಸುಗಾರ ರವಿಚಂದ್ರನ್. ಬೇರೆ ಬೇರೆ ಸ್ಟಾರ್ ನಟ ಹಾಗೂ ನಟಿಯರನ್ನು ಕನ್ನಡ ಚಿತ್ರರಂಗಕ್ಕೆ ಕರೆಸಿ ಎಲ್ಲರೂ ಮೆಚ್ಚುವಂತಹ ಸಿನಿಮಾ ಮಾಡಿದ ಹಠವಾದಿ. ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ವೀರ ಸ್ವಾಮಿಯವರ ಪುತ್ರ ರವಿಚಂದ್ರನ್ ರವರು.

ತಂದೆ ನಿರ್ಮಾಪಕರಾಗಿದ್ದರೂ ಕೂಡ ತಮ್ಮ ಸ್ವಂತ ಕನಸಿನ ಯೋಜನೆಗಳನ್ನು ಸಾಕಾರಗೊಳಿಸಲು ತಮ್ಮ ಸ್ವಂತ ಪರಿಶ್ರಮದ ಮೂಲಕವೇ ರವಿಚಂದ್ರನ್ ಅವರು ತಮ್ಮ ಸಿನಿಮಾದ ಮೂಲಕ ಜನರ ಮನಸ್ಸನ್ನು ಗೆಲ್ಲುತ್ತಾರೆ. ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಆಗೊಮ್ಮೆ ಈಗೊಮ್ಮೆ ನಾಯಕ ನಟನಾಗಿ ನಟಿಸುತ್ತಾ ಸ್ಟಾರ್ ನಟರ ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ರವಿಚಂದ್ರನ್. ಇನ್ನು ಅವರ ಮದುವೆಗೆ ಸಂಬಂಧಿಸಿದ ಒಂದು ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಹೌದು ಮಿತ್ರರೇ ಕ್ರೇಜಿಸ್ಟಾರ್ ರವಿಚಂದ್ರನ್ ರವರು ಸುಮತಿ ಎನ್ನುವವರನ್ನು 1986 ರಲ್ಲಿ ಮದುವೆಯಾಗುತ್ತಾರೆ. ಈ ಮದುವೆಯಲ್ಲಿ ಸುಮತಿ ಹಾಗೂ ರವಿಚಂದ್ರನ್ ಇಬ್ಬರೂ ಕೂಡ ಕಾಣಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಸಾಕಷ್ಟು ಹೆಂಗಳೆಯರ ಮನ ಗೆದ್ದ ರವಿಚಂದ್ರನ್ ಮದುವೆ ಆಗುತ್ತಿರುವ ಸಂಭ್ರಮದ ಕ್ಷಣ ಕ್ಯಾಮರಾದಲ್ಲಿ ಕ್ಯಾಪ್ಚರ್ ಆಗಿತ್ತು. ಈ ಫೋಟೋವನ್ನು ನೀವು ನೋಡಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡುವುದನ್ನು ಮಾತ್ರ ಮರೆಯಬೇಡಿ.

Leave a Comment

error: Content is protected !!