Ravichandran: ರವಿಚಂದ್ರನ್ ಮಿಸ್ ಮಾಡಿದ ಸಿನಿಮಾವನ್ನು ಮಾಡಿ ದಾಖಲೆ ಬರೆದ ವಿಷ್ಣುವರ್ಧನ್. ಯಾವ ಸಿನಿಮಾ ಇಲ್ಲಿದೆ ನೋಡಿ ವಿವರ.

Vishnuvardhan ನಮ್ಮ ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸಾಕಷ್ಟು ಸಿನಿಮಾಗಳು ಬೇರೆಯವರು ಮಾಡಬೇಕಾಗಿರುವುದು ಇನ್ಯಾರೋ ಮಾಡಿರುವುದು ಕೂಡ ಹಲವಾರು ಬಾರಿ ನಡೆದಿದೆ. ಇನ್ನು ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಕ್ರೇಜಿಸ್ಟಾರ್ ರವಿಚಂದ್ರನ್ ಮಾಡಬೇಕಾಗಿರುವ ಸಿನಿಮಾವನ್ನು ವಿಷ್ಣುವರ್ಧನ್(Vishnuvardhan) ರವರು ಮಾಡಿ ದೊಡ್ಡ ಮಟ್ಟದ ಯಶಸ್ಸನ್ನು ಪಡೆದುಕೊಂಡಿದ್ದರು.

ಅಷ್ಟಕ್ಕೂ ಆ ಸಿನಿಮಾ ಯಾವುದು ಇರಬಹುದು ಎನ್ನುವುದಾಗಿ ನಿಮ್ಮಲ್ಲಿ ಸಾಕಷ್ಟು ಗೊಂದಲ ಇರಬಹುದು. ಬನ್ನಿ ಆ ಸಿನಿಮಾ ಯಾವುದು ಇರಬಹುದು ಎಂಬುದನ್ನು ತಿಳಿಯೋಣ. ಹೌದು ದ್ವಾರಕೀಶ್(Dwarkish) ರವರು ಈ ಸಿನಿಮಾವನ್ನು ನಿರ್ಮಾಣ ಮಾಡಬೇಕೆಂಬುದಾಗಿ ರವಿಚಂದ್ರನ್(Ravichandran) ರವರ ಬಳಿ ಬಂದಾಗ ಅವರು ಈ ಸಿನಿಮಾವನ್ನು ಒಪ್ಪಿಕೊಂಡಿರುವುದಿಲ್ಲ. ನಂತರ ಈ ಸಿನಿಮಾ ವಿಷ್ಣುವರ್ಧನ್ ಅವರ ಬಳಿ ಹೋಗಿ ಸಿನಿಮಾ ರೆಡಿಯಾಗಿ ಬಿಡುಗಡೆಯಾದ ಮೇಲೆ ದಾಖಲೆಯನ್ನು ನಿರ್ಮಿಸಿತ್ತು.

ಇಷ್ಟೆಲ್ಲ ಹೇಳಿದ್ಮೇಲೆ ಖಂಡಿತವಾಗಿ ನೀವು ಆ ಸಿನಿಮಾ ಯಾವುದಿರಬಹುದು ಎಂಬುದಾಗಿ ಅಂದಾಜಿಸಿರುತ್ತೀರಿ. ಹೌದು ನಾವ್ ಮಾತನಾಡುತ್ತಿರುವುದು ಪಿ ವಾಸು ನಿರ್ದೇಶನದಲ್ಲಿ ಮೂಡಿ ಬಂದಿರುವ ವಿಷ್ಣುವರ್ಧನ್ ರಮೇಶ್ ಅರವಿಂದ್(Ramesh Aravind) ಹಾಗೂ ಸೌಂದರ್ಯ(Actress Soundarya) ಕಾಂಬಿನೇಷನ್ ನಲ್ಲಿ ನೋಡಿ ಬಂದಿರುವಂತಹ ಆಲ್ ಟೈಮ್ ಸೂಪರ್ ಹಿಟ್ ಸಿನಿಮಾ ಆಪ್ತಮಿತ್ರ(Apthamitra). ಈ ಸಿನಿಮಾ ಮಲಯಾಳಂ ಚಿತ್ರದ ರಿಮೇಕ್ ಆಗಿದ್ದರೂ ಕೂಡ ಕನ್ನಡದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.

ಇದಕ್ಕೂ ಮುಂಚೆ ಇದೇ ಸಂದರ್ಭದಲ್ಲಿ ರವಿಚಂದ್ರನ್ ಹಾಗೂ ವಿಷ್ಣುವರ್ಧನ್(Vishnuvardhan) ಕಾಂಬಿನೇಷನ್ ನಲ್ಲಿ ಮೂಡಿ ಬಂದಿದ್ದ ಸಾಹುಕಾರ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದ ಹಿನ್ನೆಲೆಯಲ್ಲಿ ಈ ಸಿನಿಮಾವನ್ನು ರವಿಚಂದ್ರನ್(Ravichandran) ರವರು ಒಪ್ಪಿಕೊಂಡಿಲ್ಲ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತದೆ. ಅದೇನೆ ಇರಲಿ ಈ ಸಿನಿಮಾದಿಂದ ವಿಷ್ಣುವರ್ಧನ್ ರವರು ಮನೋಶಾಸ್ತ್ರಜ್ಞನಾಗಿ ನಟನೆ ಮಾಡಿ ಎಲ್ಲರ ಮನಸ್ಸನ್ನು ಗೆಲ್ಲಲು ಯಶಸ್ವಿಯಾಗಿದ್ದರು.

Leave a Comment

error: Content is protected !!