Niveditha Gowda: ಚಂದನ್ ಶೆಟ್ಟಿಯನ್ನು ನಿವೇದಿತಾ ಗೌಡ ಮದುವೆ ಆಗಿದ್ದು ಯಾಕಂತೆ ಗೊತ್ತಾ? ಕೇಳಿದ್ರೆ ಅಯ್ಯೋ ಪಾಪ ಅನ್ಸುತ್ತೆ!

Niveditha Gowda ಮೈಸೂರಿನ ದಸರಾ ಕಾರ್ಯಕ್ರಮದಲ್ಲಿ ಪರಸ್ಪರ ಪ್ರಪೋಸ್ ಮಾಡಿಕೊಂಡು ಮನೆಯವರ ಒಪ್ಪಿಗೆ ಮೇಲೆ ಎಲ್ಲರ ಸಮ್ಮುಖದಲ್ಲಿ ಸಂಗೀತ ನಿರ್ದೇಶಕ ಹಾಗೂ ನಟ ಚಂದನ್ ಶೆಟ್ಟಿ(Chandan Shetty) ಹಾಗೂ ಬಿಗ್ ಬಾಸ್ ಖ್ಯಾತಿಯ ನಿವೇದಿತ ಗೌಡ ಇಬ್ಬರು ಕೂಡ ಮದುವೆ ಆಗಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಇವರಿಬ್ಬರೂ ಈಗಾಗಲೇ ಮದುವೆಯಾಗಿ ಮೂರು ವರ್ಷ ಕೂಡ ಕಳೆದಿದೆ.

ಇನ್ನು ಇತ್ತೀಚಿಗಷ್ಟೇ ನಡೆದಿರುವ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಕಲರ್ಸ್ ಕನ್ನಡ(Colors kannada) ವಾಹಿನಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ನಿವೇದಿತ ಗೌಡ(Niveditha Gowda) ತಮ್ಮ ತಾಯಿ ಹೇಮಾ ಜೊತೆಗೆ ಈ ಕಾರ್ಯಕ್ರಮಕ್ಕೆ ಹೋಗಿ ಹೆಜ್ಜೆ ಹಾಕಿದ್ದು ಕೂಡ ಕಂಡು ಬಂದಿತ್ತು. ಇನ್ನು ಈ ಸಂದರ್ಭದಲ್ಲಿ ತಮ್ಮ ಮದುವೆ ಹಿಂದಿನ ಕಹಾನಿ ಹಾಗೂ ತಾಯಿಯ ಜೊತೆಯಲ್ಲಿನ ಒಡನಾಟವನ್ನು ಕೂಡ ಬಿಚ್ಚಿಟ್ಟಿದ್ದಾರೆ.

ಹೌದು ಗೆಳೆಯರೇ ಮೊದಲಿಗೆ ಮದುವೆ ಆಗುವ ಮುನ್ನ ಮನೆಯಲ್ಲಿದ್ದಾಗ ಮನೆಯಿಂದ ಗೆಳೆಯರ ಜೊತೆಗೆ ಹೊರಗೆ ಹೋಗಲು ಅಥವಾ ಟ್ರಿಪ್ ಗಾಗಿ ಹೋಗಲು ತಂದೆ ತಾಯಿ ಬಿಡುತ್ತಿರಲಿಲ್ಲ. ಮದುವೆಯಾದ ಮೇಲೆ ಬೇಕಾದರೆ ನೀನು ನಿನ್ನ ಗಂಡನ ಜೊತೆಗೆ ಹೋಗು ಎಂಬುದಾಗಿ ಹೇಳುತ್ತಿದ್ದರು ಹೀಗಾಗಿ ನಾನು ಮನೆಯಲ್ಲಿಯೇ ಇರಬೇಕಾಗಿತ್ತು. ಇದಕ್ಕಾಗಿ ನಾನು ಫ್ರೀಡಂ ಗಾಗಿ ಮದುವೆಯಾದೆ ಎಂಬುದಾಗಿ ತಮಾಷೆಯಾಗಿ ನಿವೇದಿತ ಗೌಡ(Niveditha Gowda) ಹೇಳಿಕೊಂಡಿದ್ದಾರೆ.

ಆದರೆ ಈಗ ಗಂಡನ ಮನೆಯಲ್ಲಿರುವಾಗ ಮಾತ್ರ ಯಾವಾಗ ತಾಯಿಯನ್ನು ನೋಡುತ್ತೆನೋ ಎನ್ನುವ ತವಕ ನನ್ನಲ್ಲಿ ಇರುತ್ತದೆ ಎಂಬುದಾಗಿ ಕಣ್ಣೀರು ಹಾಕಿದ್ದಾರೆ. ಅಷ್ಟರಮಟ್ಟಿಗೆ ತಾಯಿಯ ಮಹತ್ವ ನನ್ನ ಜೀವನದಲ್ಲಿ ಈಗ ಅರ್ಥವಾಗುತ್ತಿದೆ ಎಂಬುದಾಗಿ ನಿವೇದಿತ ಗೌಡ ಅವರು ಹೇಳಿದ್ದಾರೆ. ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ(Chandan Shetty) ದಂಪತಿಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಬಹುದಾಗಿದೆ.

Leave a Comment

error: Content is protected !!