Rajkumar: ಅಂದು ಅಣ್ಣಾವ್ರು ಇಂದು ರಿಷಬ್ ಶೆಟ್ಟಿ! ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಚಿತ್ರರಂಗ!

Rishab Shetty ಕನ್ನಡ ಚಿತ್ರರಂಗ ಎಂದಾಕ್ಷಣ ಪ್ರತಿಯೊಬ್ಬರು ಹೇಳುವಂತಹ ಹೆಸರು ಡಾ ರಾಜಕುಮಾರ್(Dr Rajkumar) ಎಂದು. ಅಷ್ಟರಮಟ್ಟಿಗೆ ಕನ್ನಡ ಎಂದರೆ ರಾಜಕುಮಾರ್ ಎಂದರೆ ಕನ್ನಡ ಎಂದು ಹೇಳುವಷ್ಟರ ಮಟ್ಟಿಗೆ ಈಗಾಗಲೇ ಅವರು ಸಾಧನೆಯನ್ನು ಮಾಡಿ ತೋರಿಸಿದ್ದಾರೆ. ಅವರ ಸಾಧನೆ ಕೇವಲ ಕನ್ನಡ ಚಿತ್ರರಂಗಕ್ಕೆ ಸೀಮಿತವಾಗಿರದೆ ಇಡೀ ಚಿತ್ರ ಜಗತ್ತಿನಲ್ಲಿಯೇ ಕೊಂಡಾಡುವಂತಹ ಹಲವಾರು ಸಾಧನೆಗಳನ್ನು ಅಂದಿನ ಕಾಲದಲ್ಲಿಯೇ ಅವರು ಮಾಡಿದ್ದಾರೆ.

ನಿಮಗೆಲ್ಲರಿಗೂ ನೆನಪಿರಬಹುದು ಅಮೆರಿಕಾದಲ್ಲಿ ಕೊಡಮಾಡುವಂತಹ ಕೆಂಟಕಿ ಕರ್ನಲ್ ಪ್ರಶಸ್ತಿಯನ್ನು ಆ ಕಾಲದಲ್ಲಿಯೇ ಅಣ್ಣಾವ್ರು(Annavru) ಪಡೆದುಕೊಂಡು ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿರುವಂತಹ ಸಾಧನೆಯನ್ನು ನಿರ್ಮಿಸಿದ್ದರು. ಇನ್ನು ತಮ್ಮ ಸಿನಿಮಾಗಳ ಮೂಲಕ ಇತ್ತೀಚಿನ ದಿನಗಳಲ್ಲಿ ರಿಷಬ್ ಶೆಟ್ಟಿ(Rishab Shetty) ಕೂಡ ಅದೇ ರೀತಿಯ ಸಾಧನೆಯನ್ನು ಪುನರಾವರ್ತಿಸುವ ಸಿದ್ಧತೆಯಲ್ಲಿದ್ದಾರೆ. ಕಾಂತಾರ ಸಿನಿಮಾ ಜಗದ್ವಿಕ್ಯಾತ ಆಗಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ.

ಕೇವಲ 19 ಕೋಟಿ ಬಜೆಟ್ ನಲ್ಲಿ ಮೂಡಿ ಬಂದಂತಹ ಸಿನಿಮಾ 450 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಕನ್ನಡ ಸಿನಿಮಾಗಳು(Kannada Cinema) ಕೂಡ ಇಂತಹ ಸಾಧನೆಯನ್ನು ಮಾಡಬಲ್ಲವೋ ಎನ್ನುವುದನ್ನು ಅಧಿಕೃತ ಮುದ್ರೆ ಒತ್ತುವ ಮೂಲಕ ಸಾಬೀತುಪಡಿಸಿದ್ದಾರೆ ನಮ್ಮ ಶೆಟ್ರು. ಇದು ಕೇವಲ ನಮ್ಮ ಭಾರತ ದೇಶಕ್ಕೆ ಸೀಮಿತವಾಗಿರದೆ ಈಗ ವಿದೇಶಿ ನೆಲದಲ್ಲಿ ಕೂಡ ದೊಡ್ಡ ಮಟ್ಟದ ಸಾಧನೆಯನ್ನು ಮಾಡಲು ಹೊರಟಿದ್ದಾರೆ ರಿಷಬ್ ಶೆಟ್ಟಿ.

ಹೌದು ಗೆಳೆಯರೇ ರಿಷಬ್ ಶೆಟ್ಟಿ(Rishab Shetty) ಅವರ ನಾಯಕತ್ವ ಹಾಗೂ ನಿರ್ದೇಶನದಲ್ಲಿ ಮೂಡಿ ಬಂದಿರುವಂತಹ ಕಾಂತಾರ(Kantara) ಸಿನಿಮಾ ಜಿನೇವಾದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಸಭೆಯಲ್ಲಿ ಇಂದು ಪ್ರಸಾರ ಕಂಡಿದ್ದು ನಿಜಕ್ಕೂ ಕೂಡ ಕನ್ನಡ ಚಿತ್ರರಂಗವೇ ಹೆಮ್ಮೆಪಡುವಂತಹ ವಿಚಾರವಾಗಿದೆ. ನಮ್ಮ ಸಂಸ್ಕೃತಿಗಳ ಪ್ರತೀಕ ಆಗಿರುವ ಕಾಂತಾರ ಸಿನಿಮಾ ವಿಶ್ವಸಂಸ್ಥೆಯಲ್ಲಿ ಪ್ರಸಾರ ಆಗಿರುವುದು ನಿಜಕ್ಕೂ ಕೂಡ ಕನ್ನಡ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುವಂತೆ ಮಾಡಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!