Chikkanna: ಚೆನ್ನಾಗಿ ಬೇಡಿಕೆಯಲ್ಲಿರುವ ಚಿಕ್ಕಣ್ಣ ತಮ್ಮ ಕರಿಯರ್ ಬಗ್ಗೆ ಎಡವಟ್ಟು ಮಾಡೋದಕ್ಕೆ ಹೋಗ್ತಿದ್ದಾರಾ? ಯಾಕೆ ಗೊತ್ತಾ ಇಲ್ಲಿದೆ ನೋಡಿ ಕಾರಣ.

Chikkanna ಸದ್ಯದ ಮಟ್ಟಿಗೆ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಕಾಮಿಡಿ ನಟ ಯಾರು ಎಂದು ಕೇಳಿದರೆ ಸಿಗುವಂತಹ ಒಂದೇ ಒಂದು ಉತ್ತರ ಎಂದರೆ ಅದು ಚಿಕ್ಕಣ್ಣ(Chikkanna). ಒಂದು ಕಾಲದಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಅವರು ಇಂದು ದಿನಕ್ಕೆ ಲಕ್ಷಾಂತರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎಂದರೆ ಅದು ನಿಜವಾದ ಸಾಧನೆಯೇ ಸರಿ.

ಆದರೆ ತಮ್ಮ ಸಿನಿಮಾ ಜೀವನದ ಉತ್ತುಂಗದಲ್ಲಿರುವಾಗಲೇ ಚಿಕ್ಕಣ್ಣ ಮತ್ತೊಂದು ತಪ್ಪು ಮಾಡುತ್ತಾರಾ ಎನ್ನುವ ಭಾವನೆ ಕೆಲವೊಂದು ಸಿನಿಮಾ ಪಂಡಿತರಲ್ಲಿ ಬಂದಿದೆ ಅದಕ್ಕೆ ಕಾರಣ ಕೂಡ ಇದೆ. ಈ ರೀತಿಯ ಅನುಮಾನ ಮೂಡೋಕೆ ಕಾರಣ ಮತ್ತೊಬ್ಬ ಕಾಮಿಡಿ ಕಲಾವಿದ ಎಂದು ಹೇಳಬಹುದಾಗಿದೆ. ಎಲ್ಲರಿಗೂ ತಿಳಿದಿರುವ ಹಾಗೆ ಉಪಾಧ್ಯಕ್ಷ ಸಿನಿಮಾದ(Upadhyaksha Film) ಮೂಲಕ ಚಿಕ್ಕಣ್ಣ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಇದೇ ರೀತಿ ಟಾಪ್ ಕಾಮಿಡಿ ಕಲಾವಿದ ಆಗಿದ್ದ ಕೋಮಲ್(Komal ಅವರು ಕೂಡ ನಾಯಕನಟನಾಗಿ ಕಾಲಿಡುತ್ತಾರೆ. ಆದರೆ ಒಮ್ಮೆ ನಾಯಕ ನಟನಾಗಿ ಕಾಣಿಸಿಕೊಂಡ ನಂತರ ಮತ್ತೆ ಅವರ ಬೇಡಿಕೆ ಕನ್ನಡ ಚಿತ್ರರಂಗದಲ್ಲಿ ಒಂದು ಲೆಕ್ಕದಲ್ಲಿ ಹೇಳುವುದಾದರೆ ಸಂಪೂರ್ಣವಾಗಿ ಬಿದ್ದು ಬಿಡುತ್ತದೆ. ಈಗ ಕಾಮಿಡಿ ಕಲಾವಿದನಾಗಿ ಟಾಪ್ ಸ್ಥಾನದಲ್ಲಿ ಇದ್ದರೂ ಕೂಡ ಚಿಕ್ಕಣ್ಣ ನಾಯಕ ನಟನಾಗಿ ಕಾಣಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ.

ಒಮ್ಮೆ ನಾಯಕ ನಟನಾಗಿ ಸಿನಿಮಾದಲ್ಲಿ ಕಾಣಿಸಿಕೊಂಡ ನಂತರ ಮತ್ತೆ ಕಾಮಿಡಿ ಕಲಾವಿದನಾಗಿ(Comedian) ಕಾಣಿಸಿಕೊಳ್ಳಲು ಸ್ವಲ್ಪ ಇರಿಸು ಮುರಿಸಾಗಬಹುದು. ಸಿನಿಮಾ ಗೆದ್ದರೆ ಪರವಾಗಿಲ್ಲ ಆದರೆ ಒಂದು ವೇಳೆ ಸೋತರೆ, ಕಾಮಿಡಿ ಕಲಾವಿದನಾಗಿ ಕೂಡ ಅವಕಾಶವನ್ನು ಕಳೆದುಕೊಳ್ಳಬಹುದಾದ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕೂಡ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.

Leave a Comment

error: Content is protected !!