Rishab Shetty: ರಾಜಕೀಯ ಸೇರುವ ಬಗ್ಗೆ ದೊಡ್ಡ ನಿರ್ಧಾರವನ್ನು ಪ್ರಕಟಿಸಿದ ರಿಷಬ್ ಶೆಟ್ಟಿ ಬೇಸರದಿಂದ ಹೇಳಿದ್ದೇನು?

Rishab Shetty ರಿಷಭ್ ಶೆಟ್ಟಿ ಅವರ ಕಾಂತಾರ(Kantara) ಸಿನಿಮಾ ಅವರಿಗೆ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿ ಒಬ್ಬ ದೊಡ್ಡ ಮಟ್ಟದ ಸೆಲೆಬ್ರಿಟಿ ಎನ್ನುವಂತಹ ಸ್ಟಾರ್ ಸ್ಟೇಟಸ್ ಅನ್ನು ತಂದು ಕೊಟ್ಟಿದೆ. ಆದರೆ ಅವರು ರಾಜಕೀಯಕ್ಕೆ ಸೇರುತ್ತಿದ್ದಾರೆ ಎನ್ನುವ ಕುರಿತಂತೆ ಕೆಲವೊಂದು ವಿಚಾರಗಳು ಹರಿದಾಡುತ್ತಿದ್ದು ಅದರ ಕುರಿತಂತೆ ಅವರು ಬೇಸರವನ್ನು ಕೂಡ ವ್ಯಕ್ತಪಡಿಸಿದ್ದಾರೆ. ಇನ್ನು ಇತ್ತೀಚಿಗಷ್ಟೇ ಅವರು ವಿಶ್ವಸಂಸ್ಥೆಗೆ ಹೋಗಿ ಬಂದಿರುವುದು ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿತ್ತು.

ಅದರ ಜೊತೆಗೆ ಈ ವಿಚಾರವನ್ನು ಅವರು ರಾಜಕೀಯಕ್ಕೆ ಸೇರುತ್ತಾರೆ ಎನ್ನುವ ರೀತಿಯಲ್ಲಿ ಎಲ್ಲಾ ಕಡೆ ಹರಿದಾಡುವಂತೆ ಮಾಡಲಾಗುತ್ತಿದ್ದು ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಏಪ್ರಿಲ್ ಫೂಲ್ ಎನ್ನುವ ರೀತಿಯಲ್ಲಿ ಕೂಡ ಪ್ರತಿಬಿಂಬಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ವೃಷಭ ಶೆಟ್ಟಿ ಕೂಡ ಈಗಾಗಲೇ ನನ್ನನ್ನು ಒಂದು ಪಕ್ಷಕ್ಕೆ ಸೇರಿದವಂತೆ ಪ್ರತಿಬಿಂಬಿಸುತ್ತಾ ಇದ್ದಾರೆ ಯುಗಾದಿ ಯಾರೂ ಕೂಡ ತಪ್ಪಾಗಿ ಭಾವಿಸಿಕೊಳ್ಳಬೇಡಿ ನಾನು ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಸೇರುವುದಿಲ್ಲ ಎಂಬುದಾಗಿ ಹೇಳಿದ್ದಾರೆ.

ನಿಜವಾಗಿ ಹೇಳಬೇಕೆಂದರೆ ಇತ್ತೀಚಿನ ದಿನಗಳಲ್ಲಿ ರಿಷಭ್ ಶೆಟ್ಟಿ ಅವರು ಸಂದರ್ಶನದ ಸಂದರ್ಭದಲ್ಲಿ ನೀಡಿದ ಹೇಳಿಕೆ, ಇತ್ತೀಚಿಗೆ ನರೇಂದ್ರ ಮೋದಿ ಅವರ ಜೊತೆಗೆ ನಿಷಬ್ ಶೆಟ್ಟಿ ಅವರು ಕಾಣಿಸಿಕೊಂಡಿದ್ದು ಮತ್ತು ತಮ್ಮ ಸಿನಿಮಾ ಹಾಗೂ ಮಾತುಗಳ ಮೂಲಕ ಬಲಪಂಥೀಯ ವಿಚಾರಧಾರೆಗಳನ್ನು ರಿಷಭ್ ಶೆಟ್ಟಿ(Rishab Shetty) ಹಂಚಿಕೊಂಡಿರುವುದು ಅವರನ್ನು ಬಿಜೆಪಿ ಪಕ್ಷಕ್ಕೆ ಸೀಮಿತವಾಗುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಬಿಂಬಿಸಲಾಗುತ್ತಿದೆ.

ಇದೇ ಕಾರಣಕ್ಕಾಗಿ ರಿಷಬ್ ಶೆಟ್ಟಿ ಈ ಹಾರಿದಾಡುತ್ತಿರುವಂತಹ ಗಾಳಿ ಸುದ್ದಿಗಳ ವಿರುದ್ಧವಾಗಿ ಎಲ್ಲರಿಗೂ ಗೊಂದಲ ಪರಿಹಾರ ಆಗುವಂತೆ ತಾನು ಯಾವುದೇ ಪಕ್ಷದ ಪರವಾಗಿ ಅಥವಾ ವಿರುದ್ಧವಾಗಿ ಕಾಣಿಸಿಕೊಳ್ಳುತ್ತಿಲ್ಲ ಎಂಬುದಾಗಿ ಸ್ಪಷ್ಟಿಕರಿಸಿದ್ದಾರೆ. ರಿಷಬ್ ಶೆಟ್ಟಿ(Rishab Shetty) ಅವರ ಕುರಿತು ನಿಮಗಿರುವಂತಹ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!