Bollywood: ನಿಮ್ಮ ಬಳಿ ಇಷ್ಟು ಹಣವಿದ್ದರೆ ನಿಮ್ಮ ಮನೆಯ ಕಾರ್ಯಕ್ರಮಕ್ಕೆ ಕೂಡ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಬಂದು ಡ್ಯಾನ್ಸ್ ಮಾಡ್ತಾರೆ! ದುಡ್ಡೇ ದೊಡ್ಡಪ್ಪ.

Salman Khan ನಮ್ಮ ಭಾರತ ದೇಶದ ಅತ್ಯಂತ ದೊಡ್ಡ ಸ್ಟಾರ್ ನಟ ಯಾರು ಎಂದು ಕೇಳಿದಾಗ ಆ ಹೆಸರಿನಲ್ಲಿ ಕೇಳಿ ಬರುವಂತಹ ಪ್ರಮುಖ ಹೆಸರುಗಳಲ್ಲಿ ಸಲ್ಮಾನ್ ಖಾನ್ ಹಾಗೂ ಅಕ್ಷಯ್ ಕುಮಾರ್(Akshay Kumar) ಅವರ ಹೆಸರು ಕೂಡ ಬಂದೇ ಬರುತ್ತದೆ. ಹಲವಾರು ವರ್ಷಗಳಿಂದ ಬಾಲಿವುಡ್ ಚಿತ್ರರಂಗದಲ್ಲಿ ಇಬ್ಬರು ನಟರು ಕೂಡ ನಟನೆಯಲ್ಲಿ ಮಹತ್ತರವಾದ ಸಾಧನೆಯನ್ನು ಮಾಡಿಕೊಂಡು ಬಂದಿದ್ದಾರೆ.

ಅದರಲ್ಲೂ ವಿಶೇಷವಾಗಿ ಮೆಗಾಸ್ಟಾರ್ ಸಲ್ಮಾನ್ ಖಾನ್(Megastar Salman Khan) ಅವರ ಜನಪ್ರಿಯತೆ ಹಾಗೂ ಬಾಕ್ಸ್ ಆಫೀಸ್ ರೆಕಾರ್ಡ್ಗಳು ಇಂದಿಗೂ ಕೂಡ ಒಂದಾದ ಮೇಲೊಂದರಂತೆ ಬರುತ್ತಿವೆ. ಇನ್ನು ಅಕ್ಷಯ್ ಕುಮಾರ್ ಕೂಡ ಮಾರ್ಷಲ್ ಆರ್ಟ್ಸ್ ನಲ್ಲಿ ಪರಿಣಿತಿಯನ್ನು ಹೊಂದಿರುವಂತಹ ನಟನಾಗಿದ್ದು ನಿರ್ಮಾಣದಲ್ಲಿ ಕೂಡ ಈಗಾಗಲೇ ಸಾಕಷ್ಟು ಸಿನಿಮಾಗಳನ್ನು ಯಶಸ್ವಿಯಾಗಿ ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ನಲ್ಲಿ ಹೆಸರು ಮಾಡುವಂತೆ ಮಾಡಿದ್ದಾರೆ.

ಇನ್ನು ನಿಮ್ಮ ಬಳಿ ಹಣವಿದ್ದರೆ ಇವರನ್ನು ಕೂಡ ನಿಮ್ಮ ಮನೆಯ ಕಾರ್ಯಕ್ರಮಗಳಿಗೆ ಡ್ಯಾನ್ಸ್ ಮಾಡಲು ಕರೆಸಬಹುದಾಗಿದೆ. ಕೇಳಲು ವಿಚಿತ್ರ ಎಂದೆನಿಸಿದರು ಕೂಡ ಇದು ನಿಜವಾದ ಮಾತಾಗಿದೆ. ಆದರೆ ಕರೆಸೋದು ಅಷ್ಟೊಂದು ಸುಲಭವಲ್ಲ ಇವರು ಕೋಟಿ ಕೋಟಿ ಹಣವನ್ನು ಸಂಭಾವನೆಯ ರೂಪದಲ್ಲಿ ಚಾರ್ಜ್ ಮಾಡುತ್ತಾರೆ. ಹಾಗಿದ್ದರೆ ಎಷ್ಟು ಕೋಟಿ ಹಣವನ್ನು ಸಂಭಾವನೆಯ ರೂಪದಲ್ಲಿ ಕಾರ್ಯಕ್ರಮಗಳಿಗೆ ಬರಲು ಚಾರ್ಜ್ ಮಾಡುತ್ತಾರೆ ಎಂಬುದನ್ನು ತಿಳಿಯೋಣ.

ಇತ್ತೀಚಿಗಷ್ಟೇ ಸಲ್ಮಾನ್ ಖಾನ್ ಹಾಗೂ ಅಕ್ಷಯ್ ಕುಮಾರ್(Akshay Kumar) ಇಬ್ಬರೂ ಕೂಡ ದೆಹಲಿಯ ಮದುವೆ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡಿದ್ದರು. ಇದಕ್ಕಾಗಿ ಸಲ್ಮಾನ್ ಖಾನ್ 2.5 ಕೋಟಿ ರೂಪಾಯಿ ಹಾಗೂ ಅಕ್ಷಯ್ ಕುಮಾರ್ 2 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ. ಕೇವಲ ಅಂಬಾನಿ ಮನೆತನದವರು ಮಾತ್ರವಲ್ಲ ಹಣ ಇದ್ದರೆ ನೀವು ಕೂಡ ಇಂತಹ ಸೆಲೆಬ್ರಿಟಿಗಳನ್ನು ನಿಮ್ಮ ಮನೆಗೆ ಕರೆಸಿಕೊಳ್ಳಬಹುದಾಗಿದೆ.

Leave a Comment

error: Content is protected !!