Sanjay Dutt: ಕೆಜಿಎಫ್ ಅಧೀರ ಸಂಜಯ್ ದತ್ ಅವರ ಮಗಳು ಹೇಗಿದ್ದಾಳೆ ಗೊತ್ತಾ?

Sanjay Dutt ಬಾಲಿವುಡ್ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ನಟ ಆಗಿರುವ ಸುನಿಲ್ ದತ್ ಮತ್ತು ನಟಿ ನರ್ಗಿಸ್ ಅವರ ಮಗನಾಗಿರುವ ಸಂಜಯ್ ದತ್ ಅವರ ಬಗ್ಗೆ ಪ್ರತಿಯೊಬ್ಬ ಸಿನಿಮಾ ಪ್ರೇಮಿಗೂ ಕೂಡ ತಿಳಿದಿದೆ. ಸಂಜಯ್ ದತ್(Sanjay Dutt) ತಮ್ಮದೇ ಆದಂತಹ ಮಾನ್ಯರಿಸಂ ಮೂಲಕ ಅಭಿಮಾನಿಗಳಲ್ಲಿ ವಿಶೇಷವಾದ ಹಿಡಿತವನ್ನು ಹೊಂದಿದ್ದಾರೆ. ಬಾಲಿವುಡ್ ನಲ್ಲಿ ಎಲ್ಲರೂ ಅವರನ್ನು ಸಂಜುಬಾಬಾ(Sanju Baba) ಎಂಬುದಾಗಿಯೇ ಪ್ರೀತಿಯಿಂದ ಕರೆಯುತ್ತಾರೆ.

ಸಂಜಯ್ ದತ್ ರವರು ಇತ್ತೀಚಿಗಷ್ಟೇ ದಕ್ಷಿಣ ಭಾರತ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಮೊದಲ ಸಿನಿಮಾದಲ್ಲಿಯೇ ಕನ್ನಡದ ಹೆಮ್ಮೆಯ ಕೆ ಜಿ ಎಫ್ ಚಾಪ್ಟರ್ 2 ಸಿನಿಮಾದಲ್ಲಿ ಖಳನಾಯಕ ಅಧೀರನ ಪಾತ್ರದಲ್ಲಿ ಮಿಂಚಿದ್ದಾರೆ. ಅವರ ಪಾತ್ರದ ಆಕರ್ಷಣೆ ಯಾವ ರೀತಿಯಲ್ಲಿ ಹಬ್ಬಿದೆ ಎಂದರೆ ಬಹುತೇಕ ಎಲ್ಲಾ ಆಟೋಗಳ ಮೇಲೆ ಆಧೀರನ ಸ್ಟಿಕರ್ ಎಲ್ಲಾ ಕಡೆ ರಾರಾಜಿಸುತ್ತಿದ್ದವು. ಇನ್ನು ಸಿನಿಮಾ ಜೀವನವನ್ನು ಹೊರತುಪಡಿಸಿ ಸಂಜಯ್ ದತ್ ಅವರ ವೈಯಕ್ತಿಕ ಜೀವನದ ಕುರಿತಂತೆ ಮಾತನಾಡಲು ಹೊರಟಿದ್ದೇವೆ.

Sanjay dutt daughter trishala dutt

ನಟ ಸಂಜಯ್ ದತ್ ಅವರ ಹಿರಿಯ ಪುತ್ರಿ ಆಗಿರುವ ತ್ರಿಶಲಾ ದತ್ ಅವರ ಬಗ್ಗೆ ಮಾತನಾಡಲು ಹೊರಟಿದ್ದೇವೆ. ಬಾಲಿವುಡ್ ನ ಸೆಲೆಬ್ರಿಟಿಗಳು ಎಂದ ಮೇಲೆ ಅವರ ಮಕ್ಕಳ ಜೀವನವೂ ಕೂಡ ಪಬ್ಲಿಕ್ ಆಗಿರುತ್ತದೆ ಆದರೆ ತ್ರಿಶಲಾ ದತ್(Trishala Dutt) ಬೇರೆ ಸೆಲೆಬ್ರಿಟಿಗಳ ಮಕ್ಕಳ ಹಾಗೆ ಲೈಮ್ ಲೈಟ್ ನಲ್ಲಿ ಅಷ್ಟೊಂದು ಕಾಣಿಸಿಕೊಳ್ಳುವುದಿಲ್ಲ. ಹಾಗಂತ ಕಡಿಮೆ ಜನಪ್ರಿಯತೆ ಇವರಿಗೂ ಕೂಡ ಇಲ್ಲ. ತ್ರಿಶಲಾ ದತ್ ಅವರು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಪೋಲವರ್ಸ್ ಗಳನ್ನು ಹೊಂದಿದ್ದಾರೆ.

ತಂದೆ ಸಂಜಯ್ ದತ್ ಅವರ ಜೊತೆಗೂ ಕೂಡ ಉತ್ತಮ ಬಾಂಧವ್ಯವನ್ನು ಹಾಗೂ ಪ್ರೀತಿಯನ್ನು ಹೊಂದಿರುವ ತ್ರಿಶಲ ದತ್(Trishala Dutt) ಆಗಾಗ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡುತ್ತಲೇ ಇರುತ್ತಾರೆ. ನೋಡಲು ಯಾವುದೇ ಬಾಲಿವುಡ್ ನಟಿಗೂ ಕೂಡ ಕಡಿಮೆ ಇಲ್ಲದಂತೆ ಇರುವಂತಹ ಇವರು ಮುಂದೊಮ್ಮೆ ನಟಿ ಆಗಿ ಕಾಣಿಸಿಕೊಂಡರೆ ಕೂಡ ಆಶ್ಚರ್ಯ ಪಡಬೇಕಾಗಿಲ್ಲ.

Leave a Comment

error: Content is protected !!