Yuva Film: ದೊಡ್ಮನೆಯ ಸಿಂಹದಮರಿ ಯುವರಾಜ್ ಕುಮಾರ್ ಸಿನಿಮಾದಲ್ಲಿ ನಟಿಸಲು ಸಪ್ತಮಿ ಗೌಡ ಪಡೆಯುತ್ತಿರುವ ಸಂಭಾವನೆ ಈ ಬಾರಿ ದುಬಾರಿ!

Sapthami Gowda ದೊಡ್ಮನೆಯ ಸಿಂಹದ ಮರಿ ಮೂರನೇ ಜನರೇಶನ್ ಕುಡಿ ಆಗಿರುವ ರಾಘವೇಂದ್ರ ರಾಜಕುಮಾರ್ ರವರ ಪುತ್ರ ಆಗಿರುವ ಯುವರಾಜ್ ಕುಮಾರ್(Yuarajkumar ) ರವರು ಯುವ ಸಿನೆಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಎಂಟ್ರಿ ನೀಡಲು ಸಿದ್ದರಾಗಿ ನಿಂತಿದ್ದಾರೆ. ಈ ಸಿನಿಮಾವನ್ನು ಸಂತೋಷ ಆನಂದ್ ರಾಮ್(Santosh Anandram) ರವರು ನಿರ್ದೇಶಿಸುತ್ತಿದ್ದಾರೆ.

ಇನ್ನು ಈ ಕಥೆ ಅಪ್ಪು ಅವರಿಗಾಗಿ ನಿರ್ಮಿಸಬೇಕಾಗಿತ್ತು ಆದರೆ ಅವರು ಇಲ್ಲದ ಕಾರಣ ಅವರ ಮಗನಂತಿರುವ ಯುವರಾಜ್ ಕುಮಾರ್(Yuva) ಅವರಿಗೆ ಸಂತೋಷ್ ಆನಂದ್ ರಾಮ್ ಹಾಗೂ ಹೊಂಬಾಳೆ ಫಿಲಂಸ್(Hombale Films) ನಿರ್ಮಿಸುತ್ತಿದ್ದಾರೆ. ಈಗಾಗಲೇ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು ಎಲ್ಲರಲ್ಲಿ ಕೂಡ ಈ ಸಿನಿಮಾದ ಕುರಿತಂತೆ ಭರವಸೆ ಹೆಚ್ಚಾಗಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಈ ಸಿನಿಮಾದಲ್ಲಿ ನಟಿಸುತ್ತಿರುವ ನಾಯಕಿ ಕೂಡ ಸಾಕಷ್ಟು ಖ್ಯಾತ ನಾಮರಾಗಿದ್ದಾರೆ.

ಹೌದು ನಾವ್ ಮಾತನಾಡುತ್ತಿರುವುದು ನಟಿ ಸಪ್ತಮಿ ಗೌಡ(Sapthami Gowda) ಅವರ ಕುರಿತಂತೆ. ಕಾಂತಾರ(Kantara) ಸಿನಿಮಾದಲ್ಲಿ ಲೀಲ ಪಾತ್ರದಾರಿ ಆಗಿ ಕಾಣಿಸಿಕೊಳ್ಳುವ ಮೂಲಕ ದೊಡ್ಡ ಮಟ್ಟದ ಜನಪ್ರಿಯ ಜನ ಪಡೆದುಕೊಂಡಿರುವ ಯುವ ನಟಿ ಸಪ್ತಮಿ ಗೌಡ ಈಗ ಯುವ ಸಿನಿಮಾಗೆ ಕೂಡ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇನ್ನು ಈ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಲು ಅವರು ಚಾರ್ಜ್ ಮಾಡುತ್ತಿರುವ ಸಂಭಾವನೆ ಎಷ್ಟು ಅನ್ನೋದನ್ನು ತಿಳಿಯೋಣ ಬನ್ನಿ.

ಹೌದು ಮಿತ್ರರೇ ಈ ಸಿನಿಮಾದಲ್ಲಿ ನಟಿಸಲು ನಟಿ ಸಪ್ತಮಿ ಗೌಡ(Sapthami Gowda) ಅವರು ಭರ್ಜರಿ 40 ಲಕ್ಷ ಸಂಭಾವನೆಯನ್ನು ಚಾರ್ಜ್ ಮಾಡುತ್ತಿದ್ದಾರೆ. ಇವರಿಬ್ಬರ ಕಾಂಬಿನೇಷನ್ ನಲ್ಲಿ ಈ ಸಿನಿಮಾ ಯಾವ ರೀತಿಯಲ್ಲಿ ಮೂಡಿ ಬರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಈ ಸಿನಿಮಾದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!