Daali Dhananjay: ಡಾಲಿ ಅವರ ಹೆಸರನ್ನು ಮೊಬೈಲ್ ನಲ್ಲಿ ಸಪ್ತಮಿ ಗೌಡ ಯಾವ ಹೆಸರಿನಲ್ಲಿ ಸೇವ್ ಮಾಡಿದ್ದಾರೆ ಗೊತ್ತಾ?

Sapthami Gowda ಸಪ್ತಮಿ ಗೌಡ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಾಂತಾರ(Kantara) ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗಕ್ಕೆ ಲೀಲಾ ಪಾತ್ರದ ಮೂಲಕ ಪರಿಚಯವಾಗಿರುವಂತಹ ಹೆಣ್ಣುಮಗಳು. ಆದರೆ ಈ ಸಿನಿಮಾನೇ ಅವರ ಮೊದಲ ಸಿನಿಮಾ ಎಂದು ಭಾವಿಸಿರುವುದು ನಿಮ್ಮ ತಪ್ಪು ಕಲ್ಪನೆಯಾಗಿದೆ ಎಂದು ಹೇಳಬಹುದಾಗಿದೆ.

ನಟಿ ಸಪ್ತಮಿ ಗೌಡ(Sapthami Gowda) ಅವರು ಮೊದಲ ಬಾರಿಗೆ ಕಾಣಿಸಿಕೊಂಡಿದ್ದು ಸುಕ್ಕ ಸೂರಿ ಹಾಗೂ ಡಾಲಿ ಧನಂಜಯ್(Daali Dhananjay) ಕಾಂಬಿನೇಷನ್ನಲ್ಲಿ ಮೂಡಿಬಂದಿರುವಂತಹ ಪಾಪ್ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿ. ಸಿನಿಮಾ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆಯನ್ನು ತಂದು ಕೊಡದಿದ್ದರೂ ಕೂಡ ಚಿತ್ರರಂಗದ ಪರಿಚಯವನ್ನು ಮಾಡಿಸುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

Sapthami Gowda

ಇನ್ನು ವೀಕೆಂಡ್ ವಿತ್ ರಮೇಶ್(Weekend With Ramesh) ಕಾರ್ಯಕ್ರಮದ ವೇದಿಕೆ ಮೇಲೆ ಡಾಲಿ ಧನಂಜಯ್ ಬಂದಿದ್ದಾಗ ಸಪ್ತಮಿ ಗೌಡ ಕೂಡ ಈ ಕಾರ್ಯಕ್ರಮಕ್ಕೆ ಬಂದು ಡಾಲಿ ಧನಂಜಯ್ ಅವರನ್ನು ಪೋಲಿ ಎಂಬುದಾಗಿ ಕರೆಯುವ ಮೂಲಕ ಎಲ್ಲರ ಮುಖದಲ್ಲಿ ಆಶ್ಚರ್ಯ ಮೂಡುವಂತೆ ಮಾಡಿದ್ದಾರೆ. ಕೇವಲ ಇಷ್ಟು ಮಾತ್ರವಲ್ಲದೆ ಅವರ ಹೆಸರನ್ನು ಕೂಡ ತನ್ನ ಮೊಬೈಲ್ ನಲ್ಲಿ ವಿಭಿನ್ನ ಹೆಸರಿನಲ್ಲಿ ಸೇವ್ ಮಾಡಿಕೊಂಡಿದ್ದೇನೆ ಎಂಬುದಾಗಿ ಹೇಳಿದ್ದಾರೆ.

ಹೌದು ಮಿತ್ರರೇ, ಡಾಲಿ ಧನಂಜಯ್(Daali Dhananjay) ಅವರ ಹೆಸರನ್ನು ತಮ್ಮ ಮೊಬೈಲ್ ನಲ್ಲಿ ಸಪ್ತಮಿ ಗೌಡ ದಕ್ಷಿಣಾ ಪತೇಶ್ವರ ಅಂದರೆ ದಕ್ಷಿಣದ ಮಹಾರಾಜ ಎನ್ನುವ ರೀತಿಯಲ್ಲಿ ಸೇವ್ ಮಾಡಿಕೊಂಡಿದ್ದಾರೆ ಎಂಬುದಾಗಿ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ. ಇದು ಕೂಡ ಪ್ರತಿಯೊಬ್ಬರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದ ಹೇಳಿಕೆ ಆಗಿದೆ ಎಂದರೆ ತಪ್ಪಾಗಲಾರದು.

Leave a Comment

error: Content is protected !!