ಕುಟುಂಬ ಸರೊಂದಿಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಪಾರು ಸೀರಿಯಲ್ ನಟಿ ಮೋಕ್ಷಿತ ಪೈ

ಸ್ನೇಹಿತರೆ ಮೈಸೂರಿನ ಪ್ರಸಿದ್ದಿ ದೇವಾಲಯಗಳಲ್ಲಿ ಒಂದಾಗಿರುವಂತಹ ಶ್ರೀ ಕ್ಷೇತ್ರ ಚಾಮುಂಡಿ ಬೆಟ್ಟಕ್ಕೆ ಕನ್ನಡ ಸಿನಿಮಾ ರಂಗದ ಸಾಕಷ್ಟು ಸ್ಟಾರ್ ಸೆಲೆಬ್ರಿಟಿಗಳು ಆಗಾಗ ಭೇಟಿ ನೀಡುತ್ತ ತಾಯಿ ಚಾಮುಂಡೇಶ್ವರಿ ದೇವಿಯ ಆಶೀರ್ವಾದ ಪಡೆದುಕೊಳ್ಳುತ್ತಾರೆ ಅದರಂತೆ ಕಳೆದ ಮಂಗಳವಾರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವಂತಹ ಪಾರು ಧಾರವಾಹಿಯ ನಟಿ ಮೋಕ್ಷಿತ ಪೈ(Mokhshitha Pai) ಯವರು ತಮ್ಮ ಕುಟುಂಬ ಸಮೇತರಾಗಿ ತಾಯಿಯ ಆಶೀರ್ವಾದ ಪಡೆಯಲು ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ್ದು ದೇವಸ್ಥಾನದ ಮುಂದೆ ನಿಂತು ಫೋಟೋಗಳನ್ನು ತೆಗೆಸಿಕೊಂಡು ಅದನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡು ವೈರಲ್ ಆಗಿದ್ದಾರೆ.

ಅಪಾರ ಧೈವ ಭಕ್ತಿಯನ್ನು ಹೊಂದಿರುವಂತಹ ಮೋಕ್ಷಿತ ಅವರು ತಮ್ಮ ಶೂಟಿಂಗ್ ಬಿಡುವಿನ ಸಮಯದಲ್ಲೆಲ್ಲ ಇಂತಹ ಶಕ್ತಿಶಾಲಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾ ಧಾರ್ಮಿಕ ಕ್ಷಣಗಳನ್ನು ಕಳೆಯುವುದು ಹೊಸದೇನಲ್ಲ ಅದರಂತೆ ಈ ಬಾರಿ ತಮ್ಮ ನಿಜವಾದ ತಾಯಿ ಗೋದಾವರಿ ಪೈ(Godavari Pai) ಮತ್ತು ಆನ್ ಸ್ಕ್ರೀನ್ ಸಹೋದರನೊಂದಿಗೆ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ (Chamundeshwari Temple) ಭೇಟಿ ನೀಡಿ ತಾಯಿಯ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ.

ಪೂಜೆ ಮುಗಿಸಿಕೊಂಡು ದೇವಸ್ಥಾನದಿಂದ ಹೊರಬಂದ ನಂತರ ನಟಿ ಮೋಕ್ಷಿತ ಪೈಯವರು ಅಲ್ಲಿದ್ದಂತಹ ಅಭಿಮಾನಿಗಳ ಜೊತೆಗೆ ಫೋಟೋ ತೆಗೆಸಿಕೊಳ್ಳುವುದರ ಜೊತೆಗೆ ಬಹಳ ಪ್ರೀತಿಯಿಂದ ಮಾತನಾಡಿಸಿದ್ದಾರೆ. ಈ ಕೆಲ ಸುಂದರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲಾಗುತ್ತಿದ್ದು, ಇವರ ಸರಳತೆಗೆ ತುಂಬು ಹೃದಯದ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಮೂಲತಃ ಮಂಗಳೂರಿನವರಾದ ಮೋಕ್ಷಿತ ಪೈ ಅವರ ಸಂಪೂರ್ಣ ಕುಟುಂಬ ಮಕ್ಕಳ ವಿದ್ಯಾಭ್ಯಾಸದ ಕಾರಣದಿಂದ ಬೆಂಗಳೂರಿಗೆ ವಲಸೆ ಬರುತ್ತಾರೆ,

ಶಾಲಾ ಶಿಕ್ಷಣವನ್ನು ಮುಗಿಸಿದ ಮೇಲೆ ಮೋಕ್ಷಿತ ಪೈ ಯವರು ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ತಮ್ಮ ಪದವಿ ಶಿಕ್ಷಣವನ್ನು ಪಡೆದು ಮನೆಯಲ್ಲಿ ಮಕ್ಕಳಿಗೆ ಟ್ಯೂಷನ್ ಹೇಳುವಂತಹ ಕೆಲಸ ನಿರ್ವಹಿಸುತ್ತಿದ್ದರು. ಫೇಸ್ಬುಕ್ ನಲ್ಲಿ ಇವರ ಮುದ್ದಾದ ಫೋಟೋ ನೋಡಿ ಪಾರು ಧಾರಾವಾಹಿ(Paru serial) ಗೆ ನಟಿಯಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ, ಅಲ್ಲಿಂದ ಇವರ ನಟನಾ ಬದುಕು ಪ್ರಾರಂಭವಾಯಿತು. ಇಂದು ಪಾರು ಅಪಾರ ಕನ್ನಡಿಗರ ಮನಸ್ಸನ್ನು ಗೆದ್ದು, ಅವರ ಮನೆ ಮಗಳಾಗಿಯೇ ಹೋಗಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!