Shivanna: ರಜನಿಕಾಂತ್ ಜೈಲರ್ ಸಿನಿಮಾದಲ್ಲಿ ನಟಿಸಲು ಶಿವಣ್ಣ ನಟಿಸಲು ಪಡೆದಿರುವ ಸಂಭಾವನೆ ಎಷ್ಟು?

Shivanna ಕನ್ನಡ ಚಿತ್ರರಂಗದ ಅತ್ಯಂತ ಬ್ಯುಸಿ ನಟರಲ್ಲಿ ಶಿವಣ್ಣ(Shivanna) ಅವರು ಪ್ರಥಮ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ ಯಾಕೆಂದರೆ ಬೇರೆಲ್ಲ ನಾಯಕ ನಟರಿಗಿಂತ ಹೆಚ್ಚಿನ ಸಿನಿಮಾಗಳನ್ನು ಅವರು ಹೊಂದಿದ್ದು ಒಂದಾದ ಮೇಲೊಂದರಂತೆ ಚಿತ್ರೀಕರಣದಲ್ಲಿ ಕೂಡ ತೊಡಗುತ್ತಿದ್ದಾರೆ. ಈ ವಯಸ್ಸಿನಲ್ಲಿ ಕೂಡ ಅವರು ಅಷ್ಟೊಂದು ಬ್ಯುಸಿ ಆಗಿರೋದು ನಿಜಕ್ಕೂ ಕೂಡ ಅಭಿಮಾನಿಗಳು ಕೂಡ ಹೆಮ್ಮೆ ಪಡಬೇಕಾಗಿರುವ ವಿಚಾರ.

ಅದರಲ್ಲೂ ವಿಶೇಷವಾಗಿ ಶಿವಣ್ಣ ಈಗ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಪರಭಾಷೆಗಳಲ್ಲಿ ಕೂಡ ಸಿನಿಮಾಗಳನ್ನು ಒಪ್ಪಿಕೊಳ್ಳುವುದಕ್ಕೆ ಪ್ರಾರಂಭಿಸಿದ್ದು ಈ ಬಾರಿ ಮೊದಲ ಬಾರಿಗೆ ಸೂಪರ್ ಸ್ಟಾರ್ ರಜನಿಕಾಂತ್(Superstar Rajinikanth) ಅವರ ಜೈಲರ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈಗಾಗಲೇ ಬಿಡುಗಡೆಯಾಗಿರುವಂತಹ ಟೀಸರ್ ಮುಖಾಂತರ ಶಿವಣ್ಣ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನುವುದು ಅಧಿಕೃತವಾಗಿ ಖಾತರಿಯಾಗಿದ್ದು ಶಿವಣ್ಣ(Shivanna) ಅವರ ಪಾತ್ರವನ್ನು ಈ ಸಿನಿಮಾದಲ್ಲಿ ನೋಡಲು ಅವರ ಅಭಿಮಾನಿಗಳು ಪ್ರತಿಯೊಬ್ಬರೂ ಕೂಡ ಕಾತರರಾಗಿದ್ದಾರೆ. ಈ ಸಿನಿಮಾದಲ್ಲಿ ಅವರು ಪಡೆದುಕೊಂಡಂತಹ ಸಂಭಾವನೆ ಎಷ್ಟು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಹೌದು ಜೈಲರ್ ಸಿನೆಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವುದಕ್ಕೆ ಶಿವಣ್ಣ ಭರ್ಜರಿ 2.5 ಕೋಟಿ ಯಿಂದ 3 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಶಿವಣ್ಣ ಅವರ ಪಾತ್ರ ರಜನಿಕಾಂತ್(Rajinikanth) ರವರ ಜೊತೆಗೆ ಹೇಗಿರುತ್ತದೆ ಎಂಬುದನ್ನು ಮುಂದಿನ ದಿನಗಳಲ್ಲಿ ಸಿನಿಮಾ ಬಿಡುಗಡೆಯಾದ ನಂತರವಷ್ಟೇ ಕಾದು ನೋಡಬೇಕಾಗುತ್ತದೆ.

Leave a Comment

error: Content is protected !!