Weekend With Ramesh: ಹಾಸ್ಯ ಕಲಾವಿದ ಹಾಗೂ ಪಾಕ ಪ್ರವೀಣ ಸಿಹಿಕಹಿ ಚಂದ್ರು ವೀಕೆಂಡ್ ವಿತ್ ರಮೇಶ್ ಎಪಿಸೋಡ್ ನಲ್ಲಿ ಕಾಣಿಸಿಕೊಳ್ಳಲು ಪಡೆದ ಹಣ ಎಷ್ಟು ಗೊತ್ತಾ?

Sihikahi Chandru ಕನ್ನಡ ಚಿತ್ರರಂಗದ ಎವರ್ ಗ್ರೀನ್ ನಟ ನಿರ್ದೇಶಕ ಆಗಿರುವಂತಹ ರಮೇಶ್ ಅರವಿಂದ್(Ramesh Aravind) ರವರ ನಡೆಸಿಕೊಡುವಂತಹ ವೀಕೆಂಡ್ ವಿತ್ ರಮೇಶ್(Weekend With Ramesh) ಕಾರ್ಯಕ್ರಮದ ಸೀಸನ್ ಈಗ ಮತ್ತೊಂದು ಹೊಸ ಎಪಿಸೋಡ್ ನತ್ತ ತನ್ನ ಮುಖವನ್ನು ತಿರುಗಿಸಿದೆ. ಈ ಬಾರಿ ಪಾಕ ಪ್ರವೀಣ ಹಾಗೂ ಹಾಸ್ಯ ಕಲಾವಿದ ಆಗಿರುವಂತಹ ಸಿಹಿಕಹಿ ಚಂದ್ರು ರವರು ಅತಿಥಿಯಾಗಿ ಬರುತ್ತಿದ್ದಾರೆ.

ಕಿರುತೆರೆಯಲ್ಲಿ ಸಾಕಷ್ಟು ಅಡುಗೆ ಕಾರ್ಯಕ್ರಮಗಳಲ್ಲಿ ಮತ್ತು ಧಾರವಾಹಿಗಳಲ್ಲಿ ಮಾತ್ರವಲ್ಲದೆ ಸಿನಿಮಾಗಳಲ್ಲಿ ಕೂಡ ಹಾಸ್ಯ ಕಲಾವಿದನಾಗಿ ಹಾಗೂ ಪೋಷಕ ನಟನಾಗಿ ಕಾಣಿಸಿಕೊಂಡಿರುವ ಸಿಹಿ ಕಹಿ ಚಂದ್ರು(Sihikahi Chandru) ಅವರು ಈ ವಾರದ ವೀಕೆಂಡ್ ವೇದಿಕೆಯ ಮೇಲೆ ಸಾಧಕರ ಶ್ರೇಣಿಯಲ್ಲಿ ಕುಳಿತುಕೊಂಡು ತಮ್ಮ ಜೀವನದ ಕಹಾನಿಯನ್ನು ಕನ್ನಡಿಗರ ಮುಂದೆ ಬಿಚ್ಚಿಡಲಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಬಹುತೇಕ ಎಲ್ಲಾ ದಿಗ್ಗಜ ಕಲಾವಿದರೊಂದಿಗೆ ನಟಿಸಿರುವಂತಹ ಅವರು ಖಂಡಿತವಾಗಿ ಚಿತ್ರರಂಗದ ಸ್ಪೆಷಲ್ ಕಲಾವಿದರಲ್ಲಿ ಒಬ್ಬರಾಗಿ ಗುರುತಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದು. ಕರ್ನಾಟಕದ ಮನೆಮನೆಯು ಕೂಡ ಸಿಹಿ ಕಹಿ ಚಂದ್ರು ಅವರನ್ನು ಗುರುತಿಸುತ್ತದೆ. ಹಾಗಿದ್ದರೆ ಒಂದು ಎಪಿಸೋಡ್ ಗಾಗಿ ಸಿಹಿ ಕಹಿ ಚಂದ್ರು(Sihikahi Chandru) ಎಷ್ಟು ಸಂಭಾವನೆಯನ್ನು ಪಡೆದುಕೊಂಡಿರಬಹುದು ಎಂಬುದನ್ನು ತಿಳಿದುಕೊಳ್ಳೋಣ.

ಸಿಹಿ ಕಹಿ ಚಂದ್ರು ಅವರ ಜೀ ಕನ್ನಡ ವಾಹಿನಿಯ ವೀಕೆಂಡ್ ವಿತ್ ರಮೇಶ್(Weekend With Ramesh) ಕಾರ್ಯಕ್ರಮದ ವೇದಿಕೆ ಮೇಲೆ ಒಂದು ಎಪಿಸೋಡಿನಲ್ಲಿ ಕಾಣಿಸಿಕೊಳ್ಳಲು ಭರ್ಜರಿ ಎರಡರಿಂದ ಮೂರು ಲಕ್ಷ ರೂಪಾಯಿ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಈ ಎಪಿಸೋಡ್ ಅನ್ನು ನೋಡಲು ಎಷ್ಟು ಕಾತರರಾಗಿದ್ದೀರಿ ಎಂಬುದನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!