Sonu Srinivas Gowda: ಮತ್ತೊಮ್ಮೆ ಬೋಲ್ಡ್ ಅವತಾರದಲ್ಲಿ ನೆಟ್ಟಿಗರ ನಿದ್ದೆ ಕದ್ದ ಸೋನು ಶ್ರೀನಿವಾಸ್ ಗೌಡ, ಕ್ರಾಪ್ ಟಾಪ್ ಧರಿಸಿ ಭರ್ಜರಿ ಫೋಟೋ ಶೂಟ್..

Sonu Srinivas Gowda: ಸ್ನೇಹಿತರೆ ಸೋಶಿಯಲ್ ಮೀಡಿಯಾದಿಂದಾಗಿ ಇಂದು ಅದೆಷ್ಟೋ ಜನರ ಕಲೆಗೆ ಪ್ರೋತ್ಸಾಹ ದೊರಕಿ ಸಿನಿಮಾ ಹಾಗೂ ಸೀರಿಯಲ್ಗಳಲ್ಲಿ ಅವಕಾಶ ಪಡೆದುಕೊಂಡು ತಮ್ಮ ಕನಸನ್ನು ನೆರವೇರಿಸಿಕೊಳ್ಳುತ್ತಿದ್ದಾರೆ. ಹೀಗೆ ಸಾಮಾಜಿಕ ಜಾಲತಾಣದ ಪ್ಲಾಟ್ ಫಾರ್ಮ್ ಮೂಲಕವೇ ಜನರಿಗೆ ತಮ್ಮ ಲಿಪ್ ಸಿಂಕ್ ವಿಡಿಯೋಗಳಿಂದ ಚಿರಪರಿಚಿತಗೊಂಡಂತಹ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಫೇಮಸ್ ಆದದ್ದು ಟ್ರಾಲ್ ವಿಡಿಯೋಗಳಿಂದಾಗಿ ಎಂದರೆ ತಪ್ಪಾಗಲಾರದು.

ಈ ಮೂಲಕ ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ (Bigg boss) ಕಾರ್ಯಕ್ರಮಕ್ಕೆ ತೆರಳಿ ಸ್ಟಾರ್ ಪಟ್ಟವನ್ನು ಗಿಟ್ಟಿಸಿಕೊಂಡಂತಹ ಸೋನು ಶ್ರೀನಿವಾಸ ಗೌಡ ಸದಾ ಟ್ರೋಲಿಗರ ಕಣ್ಣು ಕೆಂಪಾಗುವಂತೆ ನಡೆದುಕೊಳ್ಳುತ್ತಾ ಡೋಂಟ್ ಕೇರ್ ಎನ್ನುವಂತೆ ವರ್ತಿಸುತ್ತಿರುತ್ತಾರೆ. ಅದರಂತೆ ಕಳೆದ ಕೆಲವು ದಿನಗಳ ಹಿಂದೆ ಆಂಕರ್ ಸಬ್ರೀನ್ (Anchor Sabrin) ಅವರೊಂದಿಗೆ ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿ ಬಿಕಿನಿ ಹಾಕಿಕೊಂಡು ತಮ್ಮ ಅಭಿಮಾನಿಗಳಿಗೆ ಟ್ರೀಟ್ ನೀಡಿದ್ದ

ಸೋನು ಇದೀಗ ಮತ್ತೊಮ್ಮೆ ಮಾದಕವಾಗಿ ಕಾಣುವ ಕ್ರಾಪ್ ಟಾಪ್ ಹಾಗೂ ಶಾರ್ಟ್ ಧರಿಸಿರುವ ಫೋಟೋಗಳನ್ನು ತಮ್ಮ instagram ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಹೌದು ಸ್ನೇಹಿತರೆ, ನೀಲಿ ಬಣ್ಣದ ಆಕಾಶ ಮತ್ತು ಸಾಗರದ ಮಧ್ಯೆ ನಿಂತು ಕೈ ಚಾಚುತ್ತ ಫೋಟೋಗೆ ಬಹಳ ಕ್ಯೂಟ್ ಆಗಿ ಫೋಸ್ ನೀಡಿರುವ ಸೋನು ಶ್ರೀನಿವಾಸ್ ಗೌಡ ತಮ್ಮ ಮುಖ ತುಂಬಾ ನಗುವನ್ನು ಚಿಮ್ಮುತ್ತಾ ಫೋಟೋದಲ್ಲಿ ಬಹಳ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.

ಮತ್ತಷ್ಟು ಫೋಟೋಗಳಲ್ಲಿ ಇನ್ನು ಬೋಲ್ಡ್ ಆಗಿ ಪೋಸ್ ನೀಡಿರುವಂತಹ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅವರ ಈ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಕೆಲವರು ಇವರ ಬ್ಯೂಟಿಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರೆ, ಇನ್ನೂ ಹಲವರು ಯಥಾಪ್ರಕಾರ ನೆಗೆಟಿವ್ ಕಾಮೆಂಟ್ಗಳ ಮೂಲಕ ಕಾಲೆಳೆದಿದ್ದಾರೆ.

Actor Ramya: ಆತ್ಮೀಯ ಗೆಳೆಯನೊಂದಿಗೆ ಇಂಡಿಯಾ ಪಾಕಿಸ್ತಾನ ಪಂದ್ಯವನ್ನು ವೀಕ್ಷಿಸಿದ ರಮ್ಯ, ಇಂಡಿಯಾ ಗೆದ್ದರು ರಮ್ಯಾ ಬೇಸರ ವ್ಯಕ್ತಪಡಿಸಲು ಕಾರಣವೇನು..

Leave a Comment

error: Content is protected !!