ಅಪ್ಪು ಮಗಳು ವಂದಿತಾ ಮಾತನಾಡಿದ ಬಗೆ ನೋಡಿ ಸುಧಾ ಮೂರ್ತಿ ಅಮ್ಮ ಖುಷಿ ಯಾಗಿ ಮುದ್ದು ಮಾಡಿದ ವಿಡಿಯೋ ವೈರಲ್

ಅಪ್ಪುವಿನ ಡ್ರೀಮ್ ಪ್ರಾಜೆಕ್ಟ್ ಗಂಧದ ಗುಡಿ ಅಕ್ಟೋಬರ್ 28 ರಂದು ಬಿಡುಗಡೆ aagide. ಹೌದು, ಈ ಅಕ್ಟೋಬರ್ 29ಕ್ಕೆ ಸರಿಯಾಗಿ ಎರಡು ವರ್ಷಗಳ ಹಿಂದೆ ಅಂದರೆ ಹಿಂದಿನ ವರ್ಷ 2020ರ ಅಕ್ಟೋಬರ್ 29ರಂದು ಶುರುವಾಗಿದ್ದ ಗಂಧದಗುಡಿ ಸಿನೆಮಾ ಬೆಳ್ಳಿತೆರೆ ಮೇಲೆ ನೋಡಿದ ಅಪ್ಪು ಫ್ಯಾನ್ಸ್ ಭಾವುಕರಾಗಿದ್ದಾರೆ. ದಕ್ಷಿಣದಿಂದ ಉತ್ತರ ಕರ್ನಾಟಕದವರೆಗಿನ ಪ್ರಮುಖ ವನ್ಯ ಸಂಪತ್ತು ಹಾಗೂ ಯಾರೂ ಕಂಡಿರದ ರೀತಿಯ ಅದ್ಭುತ ಹಾಗೂ ಅವುಗಳ ವಿಶೇಷತೆಗಳನ್ನು ಪುನೀತ್ ಹಾಗೂ ಅಮೋಘವರ್ಷ ಜೋಡಿಯೂ ತೆರೆ ಮೇಲೆ ತಂದಿದೆ. ಕರ್ನಾಟಕ ವನ್ಯಸಂಪತ್ತಿನ ದರ್ಶನ ಮಾತ್ರವಲ್ಲದೆ ಚಿತ್ರಮಂದಿರಕ್ಕೆ ಬರುವ ಜನರಿಗೆ ಈ ಚಿತ್ರದಲ್ಲಿಯೂ ಸಹ ಪುನೀತ್ ರಾಜ್ ಕುಮಾರ್ ಒಂದೊಳ್ಳೆ ಸಂದೇಶವನ್ನು ನೀಡುವ ಮೂಲಕ ಅಪ್ಪುವಿನ ಕೊನೆಯ ಸಿನಿಮಾ ಗಂಧದ ಗುಡಿ ಅಭಿಮಾನಿಗಳ ಮನಸ್ಸಿನಲ್ಲಿ ಮನೆ ಮಾಡಿದೆ.

ಅಪ್ಪು ಅವರ ಈ ಕೊನೆ ಸಿನೆಮಾ ನೋಡಲು ಅಕ್ಟೋಬರ್ 27 ರಂದು ಸೆಲೆಬ್ರಿಟಿ ಹಾಗೂ ಅಪ್ಪು ಅವರ ಆಪ್ತ ಸ್ನೇಹಿತರಿಗೆ ಗಂಧದ ಗುಡಿ ಸ್ಪೆಷಲ್ ಶೋ ಆಯೋಜನೆ ಮಾಡಲಾಗಿತ್ತು. ಕನ್ನಡದ ಬಹು ಮುಖ್ಯ ನಟ, ನಟಿಯರು ಹಾಗೂ ತಂತ್ರಜ್ಞರು ಸೇರಿದಂತೆ ಹಲವಾರು ಜನ ಸಿನಿಮಾ ವೀಕ್ಷಿಸಿದ್ದಾರೆ. ಅಪ್ಪುವಿನ ಗಂಧದ ಗುಡಿ ಸಿನಿಮಾ ವೀಕ್ಷಿಸಲು ಸುಧಾ ಮೂರ್ತಿಯವರು ಕೂಡ ಅದೇ ದಿನ ರಾತ್ರಿ ಶೋಗೆ ಬಂದಿದ್ದರು. ಈ ವೇಳೆ ಅಪ್ಪುವಿನ ಎರಡನೇ ಪುತ್ರಿ ವಂದಿತಾ ಸುಧಾ ಮೂರ್ತಿಯವರನ್ನು ಮಾತನಾಡಿಸಿದ್ದ ಬಗೆ ನೋಡಿ ಪ್ರತಿಯೊಬ್ಬರು ಆಶ್ಚರ್ಯ ಪಟ್ಟರು.ಸುಧಾ ಮೂರ್ತಿ ಅಮ್ಮನಿಗೆ ಕೈ ಮುಗಿದು ನಮಸ್ಕರಿಸುವುದು ಅಭಿನಂದನೆಗಳನ್ನು ತಿಳಿಸಿದರು.

ಅಪ್ಪು ಅವರ ಹಾಗೆ ಮಗಳು ವಂದಿತಾ ಕೂಡ ಹಿರಿಯರಿಗೆ ಗೌರವ ಕೊಡುವುದನ್ನು ಕಂಡು ಸುಧಾ ಮೂರ್ತಿ ಅವರಿಗೆ ಖುಷಿ ಆಯ್ತು. ಅಪ್ಪುವಿನ ಮಗಳನ್ನು ನೋಡಿ ಪುಟ್ಟಿ ಹೇಗಿದಿಯಾ ನೀನೇನಾ ಅಪ್ಪುವಿನ ಎರಡನೇ ಮಗಳು ಎನ್ನುತ್ತಾ ಮುದ್ದು ಮಾಡಿದರು. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗಿದೆ. ಸುಧಾ ಮೂರ್ತಿಯವರಿಗೆ ಈ ಸಿನಿಮಾ ಅವರಿಗೆ ಬಹಳ ಸಂತಸ ತಂದಿದೆ. ಪುನೀತ್​ ರಾಜ್​ಕಮಾರ್​ ಅವರ ಈ ಪ್ರಯತ್ನಕ್ಕೆ ಸುಧಾ ಮೂರ್ತಿ ಫೀದಾ ಆಗಿದ್ದಾರೆ. . ಯುವಕರು ಈ ಸಿನೆಮಾ ನೋಡಿ ತಿಳಿಯಬೇಕಾದ ಅನೇಕ ಅಂಶಗಳು ಇದರಲ್ಲಿ ಇವೆ ಎಂದು ಅವರು ಹೇಳಿದ್ದಾರೆ. ‘ಕನ್ನಡದಲ್ಲಿ ಇಂಥ ಚಿತ್ರವನ್ನು ನೋಡಿ ಗರ್ವ ಎನಿಸಿತು’ ಎಂದು ಅವರು ಹೇಳಿದ್ದಾರೆ. ಇನ್ನು ಗಂಧದ ಗುಡಿ ಪ್ರೀಮಿಯರ್ ಶೋನಲ್ಲಿ ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ, ಪುನೀತ್ ಕಿರಿಯ ಪುತ್ರಿ ವಂದಿತಾ, ಯುವರಾಜ್‌ಕುಮಾರ್, ರಮ್ಯಾ, ನೆನಪಿರಲಿ ಪ್ರೇಮ್, ದೇವರಾಜ್, ನಿಶ್ವಿಕಾ ನಾಯ್ಡು, ಸುಧಾ ಬೆಳವಾಡಿ, ಗುರುಕಿರಣ್..

ಅಷ್ಟೇ ಅಲ್ಲ ಅಜಯ್ ರಾವ್, ವಿನಯ್ ರಾಜ್‌ಕುಮಾರ್, ‘ಬಹದ್ದೂರ್’ ಚೇತನ್, ಅಭಿಷೇಕ್ ಅಂಬರೀಶ್, ಪ್ರಜ್ವಲ್ ದೇವರಾಜ್, ಸಂತೋಷ್ ಆನಂದ್ರಾಮ್, ವಿಜಯ್ ರಾಘವೇಂದ್ರ, ರಿಷಬ್ ಶೆಟ್ಟಿ, ಪ್ರಗತಿ ಶೆಟ್ಟಿ, ರಕ್ಷಿತ್ ಶೆಟ್ಟಿ ಮುಂತಾದವರು ಪ್ರೀಮಿಯರ್ ಶೋನಲ್ಲಿ ‘ಗಂಧದ ಗುಡಿ’ ಸಾಕ್ಷ್ಯಚಿತ್ರವನ್ನು ವೀಕ್ಷಿಸಿದ್ದಾರೆ. ಅದರ ಜೊತೆಗೆ ಈ ಸಿನಿಮಾದ ಬಗ್ಗೆ ಮೆಚ್ಚುಗೆ ಮಾತು ಗಳನ್ನು ಆಡಿದ್ದಾರೆ. ಸದ್ಯಕ್ಕೆ ಗಂಧದ ಗುಡಿ ಸಿನಿಮಾಕ್ಕೆ ಒಳ್ಳೆಯ ರೆಸ್ಪಾನ್ಸ್ ಬಂದಿದೆ. ಅಭಿಮಾನಿ ಗಳು ಥಿಯೆಟರ್ ನಲ್ಲಿಯೆ ಅಪ್ಪುವಿನ ಲಾಸ್ಟ್ ಸಿನಿಮಾ ನೋಡಲು ಮುಗಿ ಬೀಳುತ್ತಿದ್ದಾರೆ. ಗಂಧದ ಗುಡಿ ಬಿಡುಗಡೆಯಾದ ಮೊದಲ ದಿನವೇ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದ್ದು, ಬಾಕ್ಸ್ ಆಫೀಸಿನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ.

Leave a Comment

error: Content is protected !!