ಅಪ್ಪು ನಿಧನದ ವರದಿ ಎಷ್ಟು ಅವಧಿಯವರೆಗೆ ಗೌಪ್ಯವಾಗಿತ್ತು?? ವಿಷಯವನ್ನು ಸ್ವಲ್ಪ ಸಮಯ ಮುಚ್ಚಿಡೋಣ ಎಂದವರು ಯಾರು?? ಘಟನೆಯ ಅಸಲಿ ಕಥೆ ಇಲ್ಲಿದೆ ಓದಿ…

ಕಳೆದ ವರ್ಷ ಅಕ್ಟೋಬರ್ 29ರಂದು ಎಲ್ಲರೂ ಅವರವರ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವಾಗ ಅಹಿತಕರ ಸುದ್ದಿಯೊಂದು ಕಿವಿಗೆ ಬಂದಪ್ಪಳಿಸಿದೆ ಎಂಬ ಊಹೆಯನ್ನು ಸಹ ಯಾರು ಮಾಡಿರಲಿಲ್ಲ. ಪುನೀತ್ ರಾಜಕುಮಾರ್ ಅವರು ತೀರಿಕೊಂಡರು ಎಂಬ ಸುದ್ದಿಯು ಹರಡುತ್ತಿದ್ದಂತೆ ಯಾರಿಗೂ ನಂಬಲು ಸಾಧ್ಯವಾಗಲಿಲ್ಲ. ‘ವಯಸ್ಸಿನಲ್ಲಿ ಚಿಕ್ಕವರು, ಆರೋಗ್ಯವಂತರು ಆದ ಅಪ್ಪು ಅವರ ಬಗ್ಗೆ ಈ ರೀತಿಯಾಗಿ ತಮಾಷೆಯನ್ನು ಮಾಡಬೇಡಿ’ ಎಂದವರೇ ಹೆಚ್ಚಿನವರು. ವಿಚಾರ ನಿಜವೆಂದು ತಿಳಿಯುತ್ತಿದ್ದಂತೆಯೇ ಅಭಿಮಾನಿಗಳಿಗೆ ತಮ್ಮ ದೇಹವೇ ಶಕ್ತಿ ಕಳೆದುಕೊಂಡಂತೆ ಭಾಸವಾಗಿತ್ತಂತೆ.

ಎಂದಿನಂತೆ ಮುಂಜಾನೆ ಎದ್ದು ದಿನದ ವ್ಯಾಯಾಮಗಳನ್ನು ಮುಗಿಸಿ ಮುಂದಿನ ಕಾರ್ಯಕ್ಕಾಗಿ ಸಜ್ಜಾಗುತ್ತಿದ್ದ ಪುನೀತ್ ಅವರಿಗೆ ಇದ್ದಕ್ಕಿದ್ದಂತೆ ಎದೆಯಲ್ಲಿ ನೋವು ಕಾಣಿಸಿಕೊಂಡಿತು. ಪುನೀತ್ ಅವರು ನಿರ್ಲಕ್ಷ್ಯಿಸದೆ, ರಮಣ್ ರಾವ್ ವೈದ್ಯರನ್ನು ಭೇಟಿಯಾದಾಗ ಇಸಿಜಿ ನಡೆಸಿದ ವೈದ್ಯರು ಶೀಘ್ರವೇ ಪುನೀತ್ ಅವರನ್ನು ವಿಕ್ರಂ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಹೇಳಿದರು. ಸಲಹೆಯಂತೆ ಕರೆದೊಯುತ್ತಿರುವಾಗ ಕಾವೇರಿ ಚಿತ್ರಮಂದಿರ ಸಮೀಪಿಸುತ್ತಿದ್ದಂತೆಯೆ, ತಮ್ಮ ಪತ್ನಿ ಅಶ್ವಿನಿ ಅವರ ತೊಡೆಯ ಮೇಲೆ ಮಲಗಿದ ಪುನೀತ್ ಅವರು ಎಚ್ಚರವಾಗದ ನಿದ್ದೆಗೆ ಜಾರಿದ್ದರು.

ಆಸ್ಪತ್ರೆಯಲ್ಲಿ ಶತ ಪ್ರಯತ್ನ ಮಾಡಿದರು ಅಪ್ಪು ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ‘ಲಘು ಹೃದಯಘಾತದಿಂದ ಪುನೀತ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ’ ಎಂದಷ್ಟೇ ಸುದ್ದಿ ಆಗಿತ್ತು. ಮಾಧ್ಯಮಗಳಲ್ಲಿ ಅವರ ಸಾವಿನ ಸಂಗತಿಯನ್ನು 3 ಗಂಟೆಯವರೆಗೂ ಬಹಿರಂಗ ಪಡಿಸಲಿಲ್ಲ.ಅದಕ್ಕೆ ಕಾರಣವೇನೆಂಬುದು ಎಲ್ಲರಿಗೂ ಪ್ರಶ್ನೆಯಾಗಿಯೇ ಉಳಿದಿತ್ತು.

ಇತ್ತೀಚಿಗಷ್ಟೇ ನಡೆದ ಸಮಾರಂಭದಲ್ಲಿ ಆರ್ ಅಶೋಕ್ ಅವರು ಮಾತನಾಡಿ, ‘ಅಪ್ಪು ಅವರ ಸಾವಿನ ಸುದ್ದಿಯನ್ನು ಮೂರು ಗಂಟೆಗಳ ಕಾಲ ಮುಚ್ಚಿಟ್ಟಿದ್ದೆವು’ ಎಂದಿದ್ದಾರೆ. ಇದಕ್ಕೆ ಕಾರಣವೇನೆಂಬುದನ್ನು ಸಹ ಆರ್ ಅಶೋಕ್ ಅವರೇ ತಿಳಿಸಿದ್ದಾರೆ. “ಡಾಕ್ಟರ್ ರಾಜಕುಮಾರ್ ಅವರ ಸಾವಿನ ಸುದ್ದಿ ತಿಳಿಸಿದಾಗ, ಅಪಾರ ಸಂಖ್ಯೆಯಲ್ಲಿ ಜನರು ಅಂತಿಮ ದರ್ಶನಕ್ಕೆಂದು ಬಂದಿದ್ದರು. ಪರಿಸ್ಥಿತಿಯು ನಿಯಂತ್ರಣಕ್ಕೆ ಸಿಗದೆ, ಅಹಿತಕರ ಘಟನೆಗಳು ನಡೆದು ಹೋಗಿದ್ದವು. ಅದೇ ರೀತಿ ಪೂರ್ವ ತಯಾರಿಯಿಲ್ಲದೆ ಅಪ್ಪು ಅವರ ನಿಧನದ ಸುದ್ದಿಯನ್ನು ತಿಳಿಸಿದ್ದರೆ, ಘಟನೆಗಳು ನಮ್ಮ ಕೈಮೀರಿ ನಡೆಯುತ್ತಿದ್ದವು. ಅದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ನಡೆಸಿಕೊಂಡೇ ವಿಚಾರವನ್ನು ಹೊರಹಾಕಿದೆವು” ಎಂದಿದ್ದಾರೆ.

“ಮುಖ್ಯಮಂತ್ರಿ ಕಚೇರಿಯಲ್ಲಿ ಅದ್ಯಾವುದೋ ಕೆಲಸದಲ್ಲಿ ಕುಳಿತಿದ್ದ ನಮಗೆ ಈ ವಿಚಾರವು ತಿಳಿದಾಗ ಬೆಳ್ಳಂಬೆಳಿಗ್ಗೆ ಯಾರೋ ತಮಾಷೆ ಮಾಡುತ್ತಿದ್ದಾರೆ ಎನಿಸಿತು. ಆದರೆ ಮುಖ್ಯಮಂತ್ರಿಗಳು ಪದೇಪದೇ ವಿಷಯವು ನಿಜವಂತೆ ಎಂದಾಗ,  ‘ಸಿದ್ಧತೆಗಳು ಪೂರ್ಣಗೊಳ್ಳುವವರೆಗೂ ಪುನೀತ್ ಅವರ ಸಾವಿನ ಸುದ್ದಿ ಗೌಪ್ಯವಾಗಿರಲಿ’ ಎಂದು ವೈದ್ಯರಿಗೆ ಸಲಹೆ ನೀಡಿದೆ” ಎಂದು ಆರ್ ಅಶೋಕ್ ಅವರು ಹೇಳಿಕೊಂಡರು.

Leave a Comment

error: Content is protected !!