ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅವರೊಂದಿಗೆ ಕಾಣಿಸಿಕೊಂಡ ವಸಿಷ್ಟ ಸಿಂಹ ದಂಪತಿಗಳು

ಸ್ನೇಹಿತರೆ ಟಾಲಿವುಡ್ ಸಿನಿಮಾ ರಂಗದ ಮಿಲ್ಕಿ ಬ್ಯೂಟಿ ಎಂದೇ ಪ್ರಖ್ಯಾತಿ ಪಡೆದಿರುವಂತಹ ತಮನ್ನಾ ಭಾಟಿಯಾ(Tamanna Bhatia) ಅವರನ್ನು ಕೆಲವು ದಿನಗಳ ಹಿಂದೆ ನಟ ವಸಿಷ್ಠ ಸಿಂಹ ಅವರು ಭೇಟಿ ಮಾಡಿದ್ದು, ಇದರ ಕೆಲ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗುತ್ತಾ ನಾನಾ ರೀತಿಯ ಚರ್ಚೆಗೆ ದಾರಿ ಮಾಡಿ ಕೊಟ್ಟಿದೆ. ಹೌದು ಗೆಳೆಯರೇ ವಾರಣಾಸಿಯ ಪ್ರತಿಷ್ಠಿತ ದೇವಸ್ಥಾನದಲ್ಲಿ ಈ ಫೋಟೋ ತೆಗೆಯಲಾಗಿದೆ.

ಇದನ್ನು ಕಂಡಂತಹ ಅಭಿಮಾನಿಗಳಿಗೆ ತಮ್ಮನ್ನ ವಸಿಷ್ಠ ಸಿಂಹ ಅವರ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರಾ? ಅಥವಾ ವಸಿಷ್ಟ ಸಿಂಹ ದಂಪತಿಗಳಿಗೆ ಟಾಲಿವುಡ್ ನಿಂದ ಅವಕಾಶಗಳು ಅರಸಿ ಬರಲಿದ್ಯಾ? ಎಂಬ ನಾನಾ ರೀತಿಯ ಚರ್ಚೆಗೆ ಗ್ರಾಸವಾಗಿದೆ. ಅಂದ ಹಾಗೆ ಕನ್ನಡದ ನಟ ನಟಿಯರು ಪರ ಭಾಷೆಯಲ್ಲಿ ಮಿಂಚುವುದು ಹೊಸದೇನಲ್ಲ ಕನ್ನಡ ಚಿತ್ರರಂಗದ ಮೂಲಕ ಬಹುದೊಡ್ಡ ಮಟ್ಟದಲ್ಲಿ ಖ್ಯಾತಿ ಕೀರ್ತಿಯನ್ನು ಗಳಿಸಿದ ಅನೇಕ ಸೆಲೆಬ್ರಿಟಿಗಳು ಇಂದು ಟಾಲಿವುಡ್ ಹಾಗೂ ಕಾಲಿವುಡ್ ನಂತಹ ಇತರ ಭಾಷೆಯ ಚಿತ್ರಮಂದಿರದಲ್ಲಿ ತಮ್ಮ ಉಜ್ವಲವಾದ ಕರಿಯರನ್ನು ಕಟ್ಟಿಕೊಳ್ಳುತ್ತಿದ್ದಾರೆ.

ಹೀಗಿರುವಾಗ ಕನ್ನಡ ಸಿನಿಮಾರಂಗದ ಪ್ರತಿಭಾನ್ವಿತ ನಟರಲ್ಲಿ ಒಬ್ಬರಾಗಿರುವ ವಸಿಷ್ಠ ಸಿಂಹ ಅವರು ನಟಿ ತಮನ್ನಾ ಭಾಟಿಯಾ(Tamanna Bhatia) ಅವರೊಂದಿಗೆ ಕಾಣಿಸಿಕೊಂಡ ಕಾರಣ ಅವರು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರಾ ಎಂಬ ಊಹಾ ಪೂಹ ಎಲ್ಲೆ ಬಾರಿ ಹರಿದಾಡುತ್ತಿದೆ. ಇದರ ಅಸಲಿಯತ್ತೇನೆಂದರೆ ಈ ಮೊದಲು ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ನಾಯಕನಟನಾಗಿ ಒದೆಲ ರೈಲ್ವೆ ಸ್ಟೇಷನ್ ಎಂಬ ಸಿನಿಮಾದಲ್ಲಿ ನಟಿಸಿ ಸೈನಿಸಿಕೊಂಡಿದ್ದರು.

ಮೊದಲ ಚಿತ್ರಕ್ಕೆ ತೆಲುಗು ಚಿತ್ರ ಪ್ರೇಕ್ಷಕರಿಂದ ವ್ಯಾಪಕ ಮೆಚ್ಚುಗೆ ಕೂಡ ದೊರಕಿತು. ಇದರಲ್ಲಿ ಮಿಲ್ಕಿ ಬ್ಯೂಟಿ ತಮನ್ನ ಭಾಟಿಯಾ ಬಹು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದ ಮುಹೂರ್ತದ ಕಾರ್ಯಕ್ರಮ ವಾರಣಾಸಿಯಲ್ಲಿ ನೆರವೇರಿದ್ದು ಆ ಸಮಯದಲ್ಲಿ ತೆಗೆಯಲದಂತಹ ಕೆಲ ಸುಂದರ ಫೋಟೋಗಳನ್ನು ವಶಿಷ್ಠ ಸಿಂಹಾ(Vasishta Simha) ತಮ್ಮ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಖುಷಿ ವ್ಯಕ್ತಪಡಿಸಿದ್ದಾರೆ. ಈ ಚಿತ್ರದಲ್ಲಿ ನಟಿ ತಮನ್ನಾ ಭಾಟಿಯಾ ಅವರು ತನಿಕಾ ಅಧಿಕಾರಿಯ ಪಾತ್ರದಲ್ಲಿ(investigation officer role) ಬಣ್ಣ ಹಚ್ಚಲು ಒಪ್ಪಿಗೆ ಸೂಚಿಸಿದ್ದು ಕ್ರೈಂ ಸಸ್ಪೆನ್ಸ್ ಆಧಾರಿತ ಸಿನಿಮಾದ ಮೂಲಕ ಮತ್ತೆ ತೆಲುಗು ಪ್ರೇಕ್ಷಕರನ್ನು ಸೆಳೆಯಲು ವಶಿಷ್ಟ ಸಜ್ಜಾಗುತ್ತಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!