The Kerala Story: ಏಳು ದಿನಕ್ಕೆ ಕೇರಳ ಸ್ಟೋರಿ ಸಿನಿಮಾ ಕಲೆಕ್ಷನ್ ಮಾಡಿರೋದೆಷ್ಟು ಗೊತ್ತಾ? ಬಾಕ್ಸ್ ಆಫೀಸ್ ರೆಕಾರ್ಡ್.

The Kerala Story ಇತ್ತೀಚಿನ ದಿನಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ ಕೆಲವೊಂದು ಸೂಕ್ಷ್ಮ ವಿಚಾರವನ್ನು ಜನರಿಗೆ ಅದರ ಸತ್ಯಾಂಶವನ್ನು ತಿಳಿಸುವಂತಹ ಸಿನಿಮಾಗಳು ಸತತವಾಗಿ ಬಿಡುಗಡೆಯಾಗುತ್ತಿವೆ. ಈ ಹಿಂದೆ ಕಾಶ್ಮೀರಿ ಫೈಲ್ಸ್(Kashmiri Files) ಸಿನಿಮಾ ಬಿಡುಗಡೆಯಾಗಿ ಕೂಡ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದನ್ನು ಮಾಡಿತ್ತು‌ ಸಾಕಷ್ಟು ಚರ್ಚೆಗಳಿಗೂ ಕೂಡ ಎಡೆ ಮಾಡಿ ಕೊಟ್ಟಿತ್ತು.

ಈಗ ಇತ್ತೀಚೆಗಷ್ಟೇ ಬಿಡುಗಡೆ ಆಗಿರುವಂತಹ ಕೇರಳ ಸ್ಟೋರಿ(Kerala Story) ಸಿನಿಮಾ ಸಾಕಷ್ಟು ದೊಡ್ಡ ಮಟ್ಟದ ಸದ್ದನ್ನು ಮಾಡುತ್ತಿದ್ದು ಇಡೀ ಭಾರತ ಚಿತ್ರರಂಗದಲ್ಲಿ ಸಂಚಲನವನ್ನು ಮೂಡಿಸುವಂತಹ ಕೆಲಸವನ್ನು ಮಾಡುತ್ತಿದೆ. ಈ ಸಿನಿಮಾದ ಬಗ್ಗೆ ಪರ ವಿರೋಧ ಚರ್ಚೆಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ನಡೆಯುತ್ತಿದೆ. ಈ ಸಿನಿಮಾದಲ್ಲಿ ಅಪ್ಪು ಅವರ ಜೊತೆಗೆ ನಟಿಸಿರುವಂತಹ ನಟಿಯಾಗಿರುವ ಅದಾ ಶರ್ಮ(Adah Sharma) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸಿನಿಮಾ ಕೇರಳದಲ್ಲಿ ನಡೆಯುತ್ತಿರುವಂತಹ ಘಟನೆಗಳ ಕುರಿತಂತೆ ಸತ್ಯವನ್ನು ತೋರಿಸುವಂತಹ ಕೆಲಸವನ್ನು ಮಾಡುತ್ತಿದ್ದು ಇದರ ಕುರಿತಂತೆ ಕೇರಳ ರಾಜ್ಯದಲ್ಲಿ ಸಾಕಷ್ಟು ಅಡೆತಡೆ ಗಳಿಕೊಂಡು ಬಂದಿದ್ದು ಬಂಗಾಳದಲ್ಲಿ ಕೂಡ ಇದನ್ನು ನಿಷೇಧ ಗೊಳಿಸಲಾಗಿದೆ. ಹೇಗಿದ್ದರೂ ಕೂಡ ಭಾರತದ ಹಲವಾರು ರಾಜ್ಯಗಳಲ್ಲಿ ಇದು ಪ್ರದರ್ಶನ ಕಾಣುತ್ತಿದ್ದು ಏಳು ದಿನಗಳಲ್ಲಿ ಒಟ್ಟಾರೆಯಾಗಿ ಇದು ಗಳಿಸಿರುವ ಕಲೆಕ್ಷನ್ ಎಷ್ಟು ಎಂಬುದನ್ನು ತಿಳಿಯೋಣ ಬನ್ನಿ.

ಸಿನಿಮಾ ಮೂಲಗಳ ಪ್ರಕಾರ ಕೇರಳ ಸ್ಟೋರಿ ಸಿನಿಮಾ ಏಳು ದಿನಗಳಲ್ಲಿ ಭರ್ಜರಿ 80 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು ದಿನದಿಂದ ದಿನಕ್ಕೆ ಸಿನಿಮಾದ ಜನಪ್ರಿಯತೆ ಜನರಲ್ಲಿ ಹೆಚ್ಚಾಗುತ್ತಿದೆ ಎಂಬುದಾಗಿ ತಿಳಿದು ಬಂದಿದೆ. ಕೇರಳ ಸ್ಟೋರಿ(Kerala Story) ಸಿನಿಮಾದ ಬಗ್ಗೆ ನಿಮಗಿರುವ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!