Sandalwood:ಅತ್ಯಂತ ಹೆಚ್ಚು ಮಹಿಳಾ ಅಭಿಮಾನಿಗಳನ್ನು ಹೊಂದಿರುವ ಕನ್ನಡದ ಟಾಪ್ 3 ಸ್ಟಾರ್ ನಟರು ಯಾರೆಲ್ಲಾ ಗೊತ್ತಾ?

Top 3 Stars ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲರೂ ಕೂಡ ಸೂಪರ್ ಸ್ಟಾರ್ ಯಶಸ್ಸನ್ನು ಪಡೆದುಕೊಳ್ಳುತ್ತಿದ್ದಾರೆ ಯಾಕೆಂದರೆ ಸ್ಟಾರ್ ಹಾಗೂ ಅಭಿಮಾನಿ ಬಳಗಕ್ಕಿಂತ ಹೆಚ್ಚಾಗಿ ಅವರು ಮಾಡುವಂತಹ ಚಿತ್ರ ಒಳ್ಳೆಯ ಕಂಟೆಂಟ್ ಅನ್ನು ಹೊಂದಿದ್ದರೆ ಖಂಡಿತವಾಗಿ ಅವರನ್ನು ಜನರೇ ಯಾವುದೇ ಹಿನ್ನೆಲೆ ನೋಡದೆ ದೊಡ್ಡ ಮಟ್ಟದ ಸೂಪರ್ ಸ್ಟಾರ್ ಮಾಡಿ ಬಿಡುತ್ತಾರೆ. ಕನ್ನಡ ಚಿತ್ರರಂಗದ(Kannada Film Industry) ಹೆಣ್ಣು ಮಕ್ಕಳ ನೆಚ್ಚಿನ ಸ್ಟಾರ್ ಗಳು ಯಾರೆಲ್ಲ ಎಂಬುದನ್ನು ತಿಳಿಯೋಣ ಬನ್ನಿ.

ಮೊದಲಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ರವರು ಈ ಲಿಸ್ಟಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಮೊದಲಿನಿಂದಲೂ ಕೂಡ ತಮ್ಮ ಸ್ಟೈಲ್ ಹಾಗೂ ಮ್ಯಾನರಿಸಂ ಗೆ ಹೆಸರುವಾಸಿಯಾಗಿರುವಂತಹ ಕಿಚ್ಚ(Kiccha) ಹೆಂಗಳೆಯರ ನೆಚ್ಚಿನ ನಟರಲ್ಲಿ ಮೊದಲ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ವಯಸ್ಸು 50 ಆಗುತ್ತಿದ್ದರೂ ಕೂಡ ಇಂದಿಗೂ 25ರ ಹರೆಯದ ಯುವಕನಂತೆ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಾರೆ. ಮಾತ್ರವಲ್ಲದೇ ಅವರು ಹೆಣ್ಣು ಮಕ್ಕಳ ಕುರಿತಂತೆ ತೋರುವಂತಹ ಗೌರವ ಕೂಡ ಇದಕ್ಕೆ ಕಾರಣವಾಗಿದೆ.

ಎರಡನೇದಾಗಿ ಈ ಲಿಸ್ಟಿನಲ್ಲಿ ರಾಕಿಂಗ್ ಸ್ಟಾರ್ ಯಶ್(Rocking Star Yash) ರವರು ಕಾಣಿಸಿಕೊಳ್ಳುತ್ತಾರೆ. ಅತ್ಯಂತ ಕಡಿಮೆ ಸಮಯದಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ ಭಾರತೀಯ ಚಿತ್ರರಂಗದಲ್ಲಿ ಜನಪ್ರಿಯತೆಯನ್ನು ಸಾಧಿಸಿರುವ ಅಂತಹ ಕನ್ನಡದ ಖದರ್ ಆಗಿರೋ ಪ್ರತಿಭೆ ಇದು. ಅದರಲ್ಲೂ ಕೆಜಿಎಫ್ ಸಿನಿಮಾಗಳ ಮೂಲಕ ಎಲ್ಲರ ಹಾಟ್ ಫೇವರೆಟ್ ಆಗಿಬಿಟ್ಟಿದ್ದಾರೆ ನಮ್ಮೆಲ್ಲರ ಯಶ್.

ಇನ್ನು ಕೊನೆಯದಾಗಿ ಇತ್ತೀಚಿನ ದಿನಗಳಲ್ಲಿ ತಮ್ಮ ವಿಭಿನ್ನವಾದ ಸಿನಿಮಾಗಳ ಮೂಲಕ ಪ್ರತಿಯೊಂದು ವಿಭಾಗದ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಿರುವ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ(Rakshit Shetty) ಅವರು ಕೂಡ ಹೆಣ್ಣು ಮಕ್ಕಳ ನೆಚ್ಚಿನ ಕನ್ನಡದ ಸ್ಟಾರ್ ಆಗಿದ್ದಾರೆ. ಅದರಲ್ಲೂ ಅವರ ಕಿರಿಕ್ ಪಾರ್ಟಿ ಹಾಗೂ 777 ಚಾರ್ಲಿ(777 Charile) ಸಿನಿಮಾ ಸಾಕಷ್ಟು ದೊಡ್ಡ ಮಟ್ಟದಲ್ಲಿ ಅವರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿದೆ.

Leave a Comment

error: Content is protected !!