Kantara 2: ಚಿತ್ರೀಕರಣಕ್ಕೂ ಮುನ್ನವೇ ಕಾಂತಾರ 2 ಹೀರೋಯಿನ್ ಬಗ್ಗೆ ಬಿಟ್ಕೊಟ್ರಾ ರಿಷಬ್ ಶೆಟ್ಟಿ?

Rishab Shetty ಕಾಂತಾರ ಸಿನಿಮಾ ಈಗಾಗಲೇ ನಿಮಗೆ ಗೊತ್ತಿರುವ ಹಾಗೆ ಭಾರತೀಯ ಚಿತ್ರರಂಗದಲ್ಲಿ ಮಾಡಿರುವಂತಹ ಸಾಧನೆ ಅಪರಿಮಿತವಾದದ್ದು. ಇದಕ್ಕೆಲ್ಲ ಮೂಲ ಕಾರಣ ಡಿವೈನ್ ಸ್ಟಾರ್ ನಟ ಹಾಗೂ ನಿರ್ದೇಶಕ ಮತ್ತು ನಿರ್ಮಾಪಕ ಆಗಿರುವ ರಿಷಬ್ ಶೆಟ್ಟಿ(Rishab Shetty). ಕಾಂತಾರ ಸಿನಿಮಾದಲ್ಲಿ ಕೇವಲ ನಿರ್ದೇಶಕನಾಗಿ ಮಾತ್ರವಲ್ಲದೆ ನಟನಾಗಿಯೂ ಕೂಡ ಕ್ಲೈಮ್ಯಾಕ್ಸ್ನಲ್ಲಿ ತಮ್ಮ ನಟನ ವಿಶ್ವರೂಪವನ್ನು ಪರಿಶೀಲಿಸಿದ್ದಾರೆ.

ಕನ್ನಡದಲ್ಲಿ ಪ್ರಾರಂಭವಾದ ಕಾಂತಾರ ಸಿನಿಮಾದ ವಿಜಯ ಗಾಥೆ ಇಂದು ಭಾಷೆಯ ಎಲ್ಲೆಯನ್ನು ಮೀರಿ ತಮಿಳು ತೆಲುಗು ಹಿಂದಿ ಮಲಯಾಳಂನಲ್ಲಿ ಕೂಡ ಮೊಳಗುತ್ತಿದೆ. ನಿಜಕ್ಕೂ ಪ್ರತಿಯೊಬ್ಬರೂ ಅದರಲ್ಲಿಯೂ ವಿಶೇಷವಾಗಿ ನಮ್ಮ ಕನ್ನಡಿಗರು ಹೆಮ್ಮೆ ಪಡಬೇಕಾದಂತಹ ಕೆಲಸವನ್ನು ಶೆಟ್ಟರು ಮಾಡಿದ್ದಾರೆ. ಇನ್ನು ಈಗ ಸದ್ಯಕ್ಕೆ ಕಾಂತಾರ(Kantara) ಸಿನಿಮಾದ ಎರಡನೇ ಭಾಗದ ಕುರಿತಂತೆ ಚರ್ಚೆಗಳು ಆರಂಭವಾಗಿವೆ.

ಇತ್ತೀಚೆಗಷ್ಟೇ ಕಾಂತಾರ ಸಿನಿಮಾದ ಶತದಿನೋತ್ಸವದ ಸಂಭ್ರಮವನ್ನು ಹೊಂಬಾಳೆ ಫಿಲಂಸ್(Hombale Films) ಸಂಸ್ಥೆ ಆಯೋಜಿಸಿತ್ತು. ಈ ಸಮಯದಲ್ಲಿ ರಿಷಬ್ ಶೆಟ್ಟಿ ಕಾಂತಾರ ಸಿನಿಮಾದ ಎರಡನೇ ಭಾಗದಲ್ಲಿ ಬರುತ್ತಿರುವುದು ಸೀಕ್ವೆಲ್ ಅಲ್ಲ ಬದಲಾಗಿ ಪ್ರೀಕ್ವೆಲ್ ಎಂಬುದಾಗಿ ಅಧಿಕೃತವಾಗಿ ಹೇಳಿದ್ದಾರೆ. ಅದರ ಬೆನ್ನಲ್ಲೇ ಕಾಂತರಾ 2 ಸಿನಿಮಾದ ಹೀರೋಯಿನ್ ಬಗ್ಗೆ ಕೂಡ ಶೆಟ್ರು ಬಿಟ್ಕೊಟ್ರು ಎನ್ನುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಮಾತುಗಳು ಕೇಳಿ ಬರುತ್ತಿವೆ.

ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ಆಗಿರುವ ಊರ್ವಶಿ ರೌಟೆಲ(Urvashi Rautela) ರಿಷಬ್ ಶೆಟ್ಟಿ ಅವರ ಜೊತೆಗಿರುವಂತಹ ಫೋಟೋವನ್ನು ತಮ್ಮ instagram ಖಾತೆಯಲ್ಲಿ ಪೋಸ್ಟ್ ಮಾಡಿ ಅತಿ ಶೀಘ್ರದಲ್ಲೇ ಕಾಂತಾರ 2 ಎಂದು ಬರೆದುಕೊಳ್ಳುವ ಮೂಲಕ ನೆಟ್ಟಿಗೆ ಕನ್ಫ್ಯೂಸ್ ಮಾಡಿದ್ದಾರೆ. ಎಲ್ಲಾ ಕಡೆ ಇವರೇ ಸಿನಿಮಾದ ಹೀರೋಯಿನ್ ಎನ್ನುವ ಮಾತುಗಳು ಕೂಡ ಹುಟ್ಟಿಕೊಳ್ಳಲು ಪ್ರಾರಂಭವಾಗಿದೆ. ಇದು ಎಷ್ಟರಮಟ್ಟಿಗೆ ಸತ್ಯ ಅಥವಾ ಸುಳ್ಳು ಎನ್ನುವುದನ್ನು ಮುಂದಿನ ದಿನಗಳಲ್ಲಿಯೇ ನಾವು ಕಾದು ನೋಡಬೇಕಾಗಿದೆ.

Leave a Comment

error: Content is protected !!