KL Rahul: ಯಾರಿಗೂ ಗೊತ್ತಿಲ್ಲದ ಕ್ರಿಕೆಟಿಗ ಕೆ ಎಲ್ ರಾಹುಲ್ ಕಥೆ ಇಲ್ಲಿದೆ ನೋಡಿ. ನೀವು ಕೂಡ ಆಶ್ಚರ್ಯ ಪಡ್ತೀರಾ.

KL Rahul ಕರಾವಳಿ ಮೂಲದ ಕೆ ಎಲ್ ರಾಹುಲ್ ಅವರು ಎಂದು ಭಾರತೀಯ ಕ್ರಿಕೆಟ್ ಕ್ಷೇತ್ರದಲ್ಲಿ ಮಾತ್ರವಲ್ಲದೆ ಇಡೀ ವಿಶ್ವ ಕ್ರಿಕೆಟ್ ನಲ್ಲಿ ದೊಡ್ಡಮಟ್ಟದ ಹೆಸರನ್ನು ಹೊಂದಿದ್ದಾರೆ. ಅವರ ನಿಜ ಜೀವನದ ಕುರಿತಂತೆ ಹಲವಾರು ಜನರಿಗೆ ತಿಳಿದಿರುವುದಿಲ್ಲ ಹೀಗಾಗಿ ಇಂದಿನ ಲೇಖನಿಯಲ್ಲಿ ಅವರ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ. ಕೆ ಎಲ್ ರಾಹುಲ್ ಅವರ ತಂದೆ ತಾಯಿ ಇಬ್ಬರು ಕೂಡ ಪ್ರೊಫೆಸರ್ ಆಗಿದ್ದು ಅವರ ತಂದೆ ಸುನಿಲ್ ಗಾವಸ್ಕರ್(Sunil Gavaskar) ಅವರ ಅಭಿಮಾನಿ ಆಗಿದ್ದರು. ಅವರ ಮಗನಿಗೂ ಕೂಡ ರಾಹುಲ್ ಎನ್ನುವ ಹೆಸರನ್ನು ಇಟ್ಟಿದ್ದರು ಈ ಹಿನ್ನೆಲೆಯಲ್ಲಿ ತಮ್ಮ ಮಗನಿಗೂ ಕೂಡ ಅದೇ ಹೆಸರನ್ನು ಇಡುತ್ತಾರೆ.

ಆದರೆ ಗವಾಸ್ಕರ್ ಅವರ ಮಗನ ಹೆಸರು ನಿಜವಾಗಿ ರೋಹನ್ ಆಗಿರುತ್ತದೆ. ಹೀಗಾಗಿ ಚಿಕ್ಕವಯಸ್ಸಿನಿಂದಲೇ ತಮ್ಮ ಮಗನಿಗೆ ಕ್ರಿಕೆಟ್ ಪ್ರಾಕ್ಟೀಸ್ ಮಾಡಿಸುತ್ತಾರೆ. ಶಾಲಾ ವಿದ್ಯಾಭ್ಯಾಸವನ್ನು ಮಂಗಳೂರಿನಲ್ಲಿ ಪಡೆಯುವ ಕೆ ಎಲ್ ರಾಹುಲ್(KL Rahul) ಉನ್ನತ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿ ಪೂರೈಸುತ್ತಾರೆ. ಮನೆಯಿಂದ ಕ್ರಿಕೆಟ್ ಕೋಚಿಂಗ್ ಸೆಂಟರ್ 18km ದೂರ ಇದ್ದರು ಕೂಡ ವಿದ್ಯಾಭ್ಯಾಸವನ್ನು ಮುಗಿಸಿಕೊಂಡು ಬಸ್ ನಲ್ಲಿಯೇ ಕೋಚಿಂಗ್ ಸೆಂಟರ್ ಗೆ ರಾಹುಲ್ ಅವರು ಕಷ್ಟದಲ್ಲಿ ಪ್ರಯಾಣ ಮಾಡುತ್ತಿದ್ದರು. ರಾಹುಲ್ ಅವರ ಪ್ರತಿಭೆಯನ್ನು ಮೊದಲು ಗುರಿತಿಸಿದ್ದು ಜಯರಾಜ್ ಮ್ಯಾಥ್ಯೂ. ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪಿಂಗ್ ಅನ್ನು ಕೂಡ ಅವರು ಕಲಿಯುವಂತೆ ಹೇಳುತ್ತಾರೆ.

KL Rahul rare pics

14 ವರ್ಷದೊಳಗಿನವರ ಟೂರ್ನಮೆಂಟ್ ನಲ್ಲಿ ಎರಡು ಬಾರಿ ಡಬಲ್ ಸೆಂಚುರಿಯನ್ನು ರಾಹುಲ್ ಬಾರಿಸುತ್ತಾರೆ. ಆದರೆ ಅದು ಅವರಿಗೆಯೇ ತಿಳಿದಿರುವುದಿಲ್ಲ ಯಾಕೆಂದರೆ ಅಲ್ಲಿ ಅವರ ನೆಚ್ಚಿನ ಆಟಗಾರ ರಾಹುಲ್ ದ್ರಾವಿಡ್(Rahul Dravid) ಅವರು ಬಂದಿರುತ್ತಾರೆ. ಅವರನ್ನು ನೋಡುತ್ತಾ ಬ್ಯಾಟಿಂಗ್ ಮಾಡುತ್ತಿದ್ದ ಕೆ ಎಲ್ ರಾಹುಲ್ ಅವರಿಗೆ ಎಷ್ಟು ಸ್ಕೋರ್ ಮಾಡಿದ್ದೆ ಎಂಬುದು ನೆನಪು ಹೋಗಿರುತ್ತದೆ. ಬೆಂಗಳೂರಿಗೆ ಬಂದ ತಕ್ಷಣವೇ ಕ್ಲಬ್ ಹಾಗೂ ಡಿವಿಷನ್ ತಂಡಗಳಲ್ಲಿ ಆಡುತ್ತಾ, ರಣಜಿ ಹಾಕಿದಾರರ ಗಮನ ಸೆಳೆದು ಕರ್ನಾಟಕ ರಣಜಿತಣ್ಣದ ಪರವಾಗಿ ಆಡುತ್ತಾರೆ ಆದರೆ ಮೊದಲಿಗೆ ಅವರಿಗೆ ತಂಡದಲ್ಲಿ ಸ್ಥಾನ ಸಿಗುವುದಿಲ್ಲ ಹಾಗೂ ಕಳಪೆ ಪ್ರದರ್ಶನವು ಕೂಡ ಕಂಡುಬರುತ್ತದೆ.

ಇದನ್ನೇ ಸವಾಲಾಗಿ ಸ್ವೀಕರಿಸಿದ ರಾಹುಲ್ ಮತ್ತೆ ಮರುಪಾಧಾರ್ಪಣೆ ಮಾಡಿ ಒಂದೇ ಒಂದು ರಣಜಿ ಸೀಸನ್ ನಲ್ಲಿ 1300 ರನ್ಗಳಿಗೂ ಅಧಿಕಾರವನ್ನು ಬಾರಿಸುವ ಮೂಲಕ ತಮ್ಮ ಸಾಮರ್ಥ್ಯದ ಪರಿಚಯವನ್ನು ಎಲ್ಲರಿಗೂ ಮಾಡಿಸುತ್ತಾರೆ. ಕೂಡಲೆ ಅವರಿಗೆ ಭಾರತೀಯ ಕ್ರಿಕೆಟ್ ತಂಡದಿಂದ ಬುಲಾವ್ ಬಂದು ನಂತರ ಐಪಿಎಲ್ ನಲ್ಲಿ ಕೂಡ ಸಾಕಷ್ಟು ತಂಡಗಳ ಪರವಾಗಿ ಮಿಂಚಿದ್ದಾರೆ ನಮ್ಮೆಲ್ಲರ ನೆಚ್ಚಿನ ಕನ್ನಡಿಗ ರಾಹುಲ್. ಇತ್ತೀಚಿಗಷ್ಟೇ ತಾವು ಪ್ರೀತಿಸಿದ್ದ ಅಥಿಯಾ ಶೆಟ್ಟಿ(Athiya Shetty) ಅವರನ್ನು ಕೂಡ ಮದುವೆಯಾಗಿದ್ದಾರೆ. ಸ್ಟಾರ್ ಕ್ರಿಕೆಟರ್ ಆಗಿ ಮಿಂಚುವ ಕೆ ಎಲ್ ರಾಹುಲ್(KL Rahul) ಅವರ ಜೀವನ ನೋಡಿದಷ್ಟು ಸುಲಭ ಇಲ್ಲ ಎಂಬುದನ್ನು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ.

Leave a Comment

error: Content is protected !!