ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ನೀಡಿದ ವಜ್ರಮುನಿ ಮೊಮ್ಮಗ. ಯಾವ ಸಿನಿಮಾ ಗೊತ್ತಾ?

Vajramuni ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಅತ್ಯಂತ ಬಹು ಬೇಡಿಕೆಯ ಖಳನಾಯಕನಾಗಿ ವಜ್ರಮುನಿ(Vajramuni) ಅವರು ಯಾವ ರೀತಿಯಲ್ಲಿ ಆರ್ಭಟಿಸಿದ್ದರು ಎನ್ನುವುದು ಅಂದಿನಿಂದ ಕನ್ನಡ ಚಿತ್ರರಂಗವನ್ನು ಹಿಂಬಾಲಿಸಿಕೊಂಡು ಬರುತ್ತಿರುವ ಪ್ರತಿಯೊಬ್ಬ ಕನ್ನಡ ಪ್ರೇಮಿಗಳಿಗೂ ಕೂಡ ತಿಳಿದಿರುತ್ತದೆ. ನಿಜಕ್ಕೂ ಕೂಡ ಅವರೊಬ್ಬ ಅಪರಿಮಿತ ಪ್ರತಿಭೆಯನ್ನು ಹೊಂದಿರುವಂತಹ ಅಸಮಾನ್ಯ ಕಲಾವಿದ ಆಗಿದ್ದರು.

ಇನ್ನು ಈಗ ಅವರ ಮೊಮ್ಮಗ ಆಗಿರುವಂತಹ ಆಕರ್ಷ್(Akarsh) ಕೂಡ ತನ್ನ ತಾತನ ಹಾದಿಯಲ್ಲಿಯೇ ಮುಂದುವರೆಯಲು ನಿಶ್ಚಯಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಹಾಗಿದ್ದರೆ ಅವರು ಬಾಲ ನಟನಾಗಿ ಕಾಲಿಡುತ್ತಿರುವ ಕನ್ನಡದ ಆ ಚಿತ್ರ ಯಾವುದು ಎನ್ನುವುದರ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ.

ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಹಾಗೂ ನಾಯಕ ನಟರಲ್ಲಿ ಒಬ್ಬರಾಗಿರುವಂತಹ ಕೋಮಲ್(Komal) ನಾಯಕನಟನಾಗಿ ಕಾಣಿಸಿಕೊಂಡಿರುವಂತಹ ಎಲ್ಲಾ ಕುನ್ನಿ ಮೈ ನೇಮ್ ಇಸ್ ವಜ್ರಮುನಿ(Yala Kunni My Name Is Vajramuni) ಅನ್ನುವ ಸಿನಿಮಾದಲ್ಲಿ ಆಕರ್ಷ್ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಮುಹೂರ್ತ ಕಾರ್ಯಕ್ರಮದಲ್ಲಿ ವಜ್ರಮುನಿ(Vajramuni) ಅವರ ಕುಟುಂಬಸ್ಥರು ಕೂಡ ಉಪಸ್ಥಿತರಿದ್ದರು.

ಈ ಸಿನಿಮಾದಲ್ಲಿ ಕೋಮಲ್(Komal) ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದೆ ಎನ್ನುವದಾಗಿ ತಿಳಿದು ಬಂದಿದೆ. ವಜ್ರಮುನಿ ಅವರ ಮೊಮ್ಮಗ ಆಕರ್ಷ ಕೂಡ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿರುವ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!