ಅಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಡುತ್ತಿದ್ದ ಕಷ್ಟದ ಬಗ್ಗೆ ವಿನೋದ್ ರಾಜ್ ಮೌನ ಮುರಿದು ಹೇಳಿದ್ದೇನು?

Vinod Raj talk about D boss Darshan: ಈ ಒಬ್ಬ ನಟ ನಿಜಕ್ಕೂ ಕನ್ನಡ ಚಿತ್ರರಂಗದಲ್ಲಿ ಬೆಳೆಯಬೇಕಾಗಿತ್ತು ಎಂಬುದಾಗಿ ಇಂದಿಗೂ ಕೂಡ ಪ್ರತಿಯೊಬ್ಬರೂ ಭಾವಿಸುತ್ತಾರೆ. ಹೌದು ನಾವು ಮಾತನಾಡಲು ಹೊರಟಿರುವುದು ಕನ್ನಡ ಚಿತ್ರರಂಗದ ಮೈಕಲ್ ಜಾಕ್ಸನ್ ಡ್ಯಾನ್ಸಿಂಗ್ ಕಿಂಗ್(Dancing King) ಎನ್ನುವುದಾಗಿ ಒಂದು ಕಾಲದಲ್ಲಿ ಕರೆಸಿಕೊಳ್ಳುತ್ತಿದ್ದ ವಿನೋದ್ ರಾಜ್ ಅವರ ಬಗ್ಗೆ. ಚಿತ್ರರಂಗದ ಆರಂಭದಲ್ಲಿ ಅವರು ಬೆಳೆಯುತ್ತಿದ್ದ ರೀತಿ ನೋಡಿ ಪ್ರತಿಯೊಬ್ಬರೂ ಕೂಡ ಅವರ ಪ್ರತಿಭೆಯನ್ನು ಕನ್ನಡ ಚಿತ್ರರಂಗ ಕುಣಿಸಿ ಮೆರೆದಾಡುತ್ತೆ ಎಂಬುದಾಗಿ ಭಾವಿಸಿದ್ದರು ಆದರೆ ಗಾಂಧಿನಗರದ ಕೆಲವೊಂದು ಕಾಣದ ಕೈಗಳು ಅವರನ್ನು ಕನ್ನಡ ಚಿತ್ರರಂಗವನ್ನೇ ಬಿಟ್ಟು ಹೋಗುವಂತೆ ಮಾಡುತ್ತವೆ.

ಇನ್ನು ಆಗೊಮ್ಮೆ ಈಗೊಮ್ಮೆ ವಿನೋದ್ ರಾಜ್ (Vinod Raj) ಅವರು ಕೆಲವೊಂದು ಸಂದರ್ಶನಗಳಲ್ಲಿ(Interview) ಕಾಣಿಸಿಕೊಳ್ಳುತ್ತಾರೆ. ಇದೇ ಸಂದರ್ಭದಲ್ಲಿ ವಿನೋದ್ ರಾಜ್ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕುರಿತಂತೆ ಮಾತನಾಡಿದ್ದು ದರ್ಶನ್ ಅವರ ಆರಂಭಿಕ ದಿನಗಳ ಕುರಿತಂತೆ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

2000 ಇಸವಿಯ ಆಸು ಪಾಸಿನಲ್ಲಿ ಮಹಾಭಾರತ ಸಿನೆಮಾದಲ್ಲಿ(Cinema) ದರ್ಶನ್ ಹಾಗೂ ವಿನೋದ್ ರಾಜ್ ಅವರು ಒಂದೇ ಸಿನಿಮಾದಲ್ಲಿ ನಡೆಸಿದ್ದರಂತೆ. ಆ ಸಂದರ್ಭದಲ್ಲಿ ಲೀಲಾವತಿ ಅಮ್ಮ ದರ್ಶನ್ ಅವರ ಪ್ರತಿಭೆಯನ್ನು ನೋಡಿ ಮುಂದೊಂದು ದಿನ ಈತ ಚಿತ್ರರಂಗದಲ್ಲಿ ದೊಡ್ಡ ಕಲಾವಿದನಾಗುತ್ತಾನೆ ಎಂಬುದಾಗಿ ಭವಿಷ್ಯ ನುಡಿದಿದ್ದರು ಎಂಬುದನ್ನು ವಿನೋದ್ ರಾಜ್ ಅವರು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತಾರೆ.

Vinod Raj
Vinod Raj

ಕ್ರಾಂತಿ ಸಿನಿಮಾದ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗದಲ್ಲಿ ಕ್ರಾಂತಿಯನ್ನು ಮಾಡಲು ಹೊರಟಿದ್ದಾರೆ. ಇತ್ತೀಚಿಗಷ್ಟ ದರ್ಶನ್ ಅವರ ಬಗ್ಗೆ ನಡೆದಿರುವಂತಹ ಒಂದು ಅಹಿತಕರ ಘಟನೆಯ ಕುರಿತಂತೆ ನೆನಪಿಸುತ್ತ ಈ ತರಹ ಯಾಕೆ ಮಾಡಬೇಕು ಕಲಾವಿದರಿಗೆ(Artists) ಈ ತರಹ ತೊಂದರೆ ಮಾಡಿದರೆ ಅವರಿಗೆ ಒಳ್ಳೆಯದಾಗುವುದಿಲ್ಲ ಎಂಬುದಾಗಿ ವಿನೋದ್ ರಾಜ್ ಹೇಳಿದ್ದಾರೆ.

ಯಾರು ಎಷ್ಟೇ ಕುತಂತ್ರ ಮಾಡಿದರು ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಇರುವಂತಹ ಲಕ್ಷಾಂತರ ಅಭಿಮಾನಿಗಳು ಅವರ ಸಿನಿಮಾವನ್ನು ಗೆಲ್ಲುವಂತೆ ಮಾಡೇ ಮಾಡುತ್ತಾರೆ. ಕ್ರಾಂತಿ ಸಿನಿಮಾವನ್ನು ಪ್ರತಿಯೊಬ್ಬರು ನೋಡಿ ಸಿನಿಮಾವನ್ನು ಗೆಲ್ಲಿಸಬೇಕು

ಇದನ್ನೂ ಓದಿ..ಚಪ್ಪಲಿಯಲ್ಲಿ ಹೊಡಿಸಿಕೊಂಡ ಬಗ್ಗೆ ಡಿ ಬಾಸ್ ಕೊನೆಗೂ ಮೌನ ಮುರಿದು ಖಡಕ್ ಆಗಿ ಹೇಳಿದ್ದೇನು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕ್ರಾಂತಿ ಸಿನಿಮಾದ ಮೂಲಕ ಗೆದ್ದು ಕನ್ನಡ ಚಿತ್ರರಂಗದಲ್ಲಿ ದಾಖಲೆಯನ್ನು ನಿರ್ಮಿಸಲಿ ಎಂಬುದಾಗಿ ವಿನೋದ್ ರಾಜ್ ಅವರು ದರ್ಶನ್ ಅವರಿಗೆ ಶುಭ ಹಾರೈಸಿದ್ದಾರೆ. ವಿನೋದ್ ರಾಜ್ ಅವರು ದರ್ಶನ್ ಅವರ ಕುರಿತಂತೆ ನೀಡಿರುವ ಈ ಹೇಳಿಕೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್(Comment) ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!