Weekend With Ramesh: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ರಮೇಶ್ ಅರವಿಂದ್ ಪಡೆಯುತ್ತಿರುವ ಸಂಭವನೆ ಎಷ್ಟು ಗೊತ್ತಾ?

Ramesh Aravind ರಮೇಶ್ ಅರವಿಂದ್ ಕನ್ನಡ ಚಿತ್ರರಂಗದ ಯಂಗ್ ಅಂಡ್ ಎವರ್ ಗ್ರೀನ್ ನಟ ಎಂದರೆ ಅತಿ ಶಯೋಕ್ತಿ ಎನಿಸಲಾರದು. ವಯಸ್ಸು 50 ಅನ್ನು ದಾಟಿದ್ದರೂ ಕೂಡ ಇಂದಿಗೂ 30ರ ಹರೆಯದ ಯಂಗ್ ಹುಡುಗನಂತೆ ಕಾಣಿಸಿಕೊಳ್ಳುತ್ತಾರೆ ನಟ ರಮೇಶ್ ಅರವಿಂದ್. ಕನ್ನಡ ಚಿತ್ರರಂಗದ(Kannada film Industry) ಅಜಾತಶತ್ರು ಎಂದು ಕೂಡ ಅವರನ್ನು ಹೇಳಬಹುದಾಗಿದೆ. ಇಂದಿಗೂ ಸಿನಿಮಾದಲ್ಲಿ ನಟ ನಿರ್ದೇಶಕ ನಿರ್ಮಾಪಕನಾಗಿ ರಮೇಶ್ ಅರವಿಂದ್ ಅವರು ಕಾಣಿಸಿಕೊಳ್ಳುತ್ತಾರೆ.

ಇನ್ನು ಅವರು ನಡೆಸಿಕೊಡುವಂತಹ ಜೀ ಕನ್ನಡ ವಾಹಿನಿಯ ವೀಕೆಂಡ್ ವಿತ್ ರಮೇಶ್(Weekend With Ramesh) ಕಾರ್ಯಕ್ರಮ ಬಂತು ನಿಜಕ್ಕೂ ಕೂಡ ಪ್ರತಿಯೊಬ್ಬ ಕಿರುತೆರೆಯ ಪ್ರೇಕ್ಷಕನು ಕೂಡ ಮೆಚ್ಚುವಂತಹ ಕಾರ್ಯಕ್ರಮ. ಸಾಧಕರ ಸಾಧನೆಗಳನ್ನು ರಮೇಶ್ ಅರವಿಂದ್ ಅವರ ಬಾಯಿಯಲ್ಲಿ ಕೇಳುವುದೇ ಭಾಗ್ಯ ಎಂದರು ಕೂಡ ತಪ್ಪಾಗಲಾರದು.

ಈ ಕಾರ್ಯಕ್ರಮ ಸಾಕಷ್ಟು ಜನರ ಜೀವನವನ್ನು ಬದಲು ಮಾಡುವಲ್ಲಿ ಪರಿಣಾಮಕಾರಿಯಾಗಿದೆ ಎನ್ನಬಹುದಾಗಿದೆ ಅಷ್ಟರಮಟ್ಟಿಗೆ ಈ ಕಾರ್ಯಕ್ರಮ ಸಾಮಾನ್ಯ ಜನರ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರಿದೆ. ಈಗ ಇದರ ಹೊಸ ಸೀಸನ್ ಪ್ರಾರಂಭ ಆಗುತ್ತಿದ್ದು ಎಲ್ಲರೂ ಕೂಡ ಈ ಸಾಧಕರ ಸೀಟಿನಲ್ಲಿ ಯಾರೆಲ್ಲ ಬಂದು ಕೂರಬಹುದು ಎಂಬುದಾಗಿ ತಲೆ ಕೆಡಿಸಿಕೊಂಡಿದ್ದಾರೆ. ಇದರ ನಡುವೆ ಒಂದು ಎಪಿಸೋಡಿಗೆ ರಮೇಶ್ ಅರವಿಂದ್(Ramesh Aravind) ರವರು ಪಡೆದುಕೊಳ್ಳುವ ಸಂಭಾವನೆ ಬಗ್ಗೆ ಕೂಡ ಈಗ ತಿಳಿದು ಬಂದಿದೆ.

ಹೌದು ಗೆಳೆಯರೇ ಜೀ ಕನ್ನಡ(Zee Kannada) ವಾಹಿನಿಯಲ್ಲಿ ಪ್ರಸಾರವಾಗುವಂತಹ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಈ ಬಾರಿಯ ಸೀಸನ್ ನಲ್ಲಿ ರಮೇಶ್ ಅರವಿಂದ್ ರವರು ಪ್ರತಿ ಎಪಿಸೋಡಿಗೆ 35 ರಿಂದ 40 ಲಕ್ಷ ರೂಪಾಯಿ ಹಣವನ್ನು ಸಂಭಾವನೆಯ ರೂಪದಲ್ಲಿ ಪಡೆಯಲಿದ್ದಾರೆ ಎಂಬುದಾಗಿ ಕೆಲವೊಂದು ಮೂಲಗಳಿಂದ ತಿಳಿದುಬಂದಿದೆ. ಹಣದ ಕುರಿತಂತೆ ಏನೇ ಇರಲಿ ಆದರೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಕಿರುತೆರೆಯ ಅತ್ಯಂತ ವಿಶೇಷ ಕಾರ್ಯಕ್ರಮ ಎಂಬ ಮಾತಂತೂ ಸುಳ್ಳಲ್ಲ.

Leave a Comment

error: Content is protected !!