2000 ರೂಪಾಯಿ ನಕಲಿ ನೋಟನ್ನು ಕಂಡುಹಿಡಿಯುವುದು ಹೇಗೆ ಗೊತ್ತಾ? ಇಲ್ಲಿದೆ ನೋಡಿ ಸುಲಭ ವಿಧಾನ.

Indian Currency ನಕಲಿ ನೋಟು ಎನ್ನುವುದು ದೇಶದ ಆರ್ಥಿಕತೆ ಹಾಗೂ ಹಣ ದುಬ್ಬರ ಮತ್ತು ಕರೆನ್ಸಿ ನೋಟುಗಳ ಅಪಮೌಲ್ಯಕ್ಕೆ ಕಾರಣವಾಗುತ್ತದೆ ಎನ್ನುವುದನ್ನು ನೀವು ತಿಳಿದುಕೊಳ್ಳಬೇಕಾಗುತ್ತದೆ. ನಮ್ಮ ದೇಶದ ಅತ್ಯಂತ ಮೌಲ್ಯಯುತ ಕರೆನ್ಸಿ ನೋಟು(Currency note) ಎಂದರೆ ಅದು ರೂ.2000 ಮುಖಬೆಲೆಯ ಕರೆನ್ಸಿ ನೋಟ್. ಹೀಗಾಗಿ ಅದರ ನಕಲಿ ನೋಟುಗಳು ಹೆಚ್ಚಾಗಬಹುದಾದ ಸಾಧ್ಯತೆ ಕೂಡ ಇರುತ್ತದೆ. ಇದನ್ನು ಕಂಡುಹಿಡಿಯುವುದು ಹೇಗೆ ಎನ್ನುವ ಗೊಂದಲವೂ ಕೂಡ ಸಾಕಷ್ಟು ಜನರಲ್ಲಿ ಇರುತ್ತದೆ.

ಆರ್ ಬಿ ಐ ಕೂಡ ನಿಖರವಾಗಿ 2000 ಮುಖಬೆಲೆಯ ನೋಟುಗಳ ಮುದ್ರಣವನ್ನು ಮಾಡಿರುವ ಕಾರಣದಿಂದಾಗಿ ಕೆಲವೊಂದು ಫೀಚರ್ ಗಳು ನಕಲಿ ನೋಟುಗಳಲ್ಲಿ ಇರುವುದಿಲ್ಲ. ಹೀಗಾಗಿ ನಕಲಿ ನೋಟುಗಳನ್ನು ಹೇಗೆ ಕಂಡುಹಿಡಿಯುವುದು ಎಂಬುದನ್ನು ತಿಳಿಯೋಣ ಬನ್ನಿ. 2000 ಸೀ ತ್ರೂ ರಿಜಿಸ್ಟರ್ ಹೂವಿನ ಆಕೃತಿಯಂತೆ ಕಾಣಿಸಿಕೊಳ್ಳುತ್ತದೆ. ದೇವ ನಾಗರಿ(Dev Nagari Lipi) ಲಿಪಿಯಲ್ಲಿ 2000 ಎಂದು ಬರೆದಿರಲಾಗುತ್ತದೆ. ಮಧ್ಯದಲ್ಲಿ ಮಹಾತ್ಮ ಗಾಂಧಿ ಫೋಟೋ ಇರುತ್ತದೆ ಹಾಗೂ ಚಿಕ್ಕದಾಗಿ ದೇವನಾಗರಿ ಲಿಪಿಯಲ್ಲಿ ಭಾರತ ಹಾಗೂ ಇಂಡಿಯಾ ಎಂದು ಬರೆದಿರಲಾಗುತ್ತದೆ.

2000 note Fake checking

ಭಾರತ್ ಆರ್ ಬಿ ಐ ಹಾಗೂ 2000 ಎಂದು ಬರೆದಿರುವ ಅಕ್ಷರಗಳು ತಿರುಗಿಸಿದಾಗಲೆಲ್ಲಾ ಥ್ರೆಡ್ ನ ಬಣ್ಣಗಳು ನೀಲಿ ಹಾಗೂ ಹಸಿರು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತವೆ. ಗಾಂಧೀಜಿಯ ಚಿತ್ರದ ಬಲಗಡೆ ಖಾತ್ರಿ ಹೇಳಿಕೆ ಆರ್ ಬಿ ಐ ಹೇಳಿಕೆ ಮತ್ತು ಆರ್‌ಬಿಐನ ಗವರ್ನರ್ ಸಿಗ್ನೇಚರ್ ಕೂಡ ಇದರಲ್ಲಿ ಉಲ್ಲೇಖಿತವಾಗಿರುತ್ತದೆ. ಮಹಾತ್ಮ ಗಾಂಧಿ(Mahathma Gandhi) ಮತ್ತು ಎಲೆಕ್ಟ್ರೋಟೈಪ್ ಚಿಹ್ನೆಗಳಿರುತ್ತವೆ. ಬಲಭಾಗದಲ್ಲಿ ಅಶೋಕ ಸ್ತಂಭದ ಚಿಹ್ನೆ ಇರುತ್ತದೆ. ಬಲ ಹಾಗೂ ಎಡ ಎರಡು ಬದಿಗಳಲ್ಲಿ ಕೂಡ ಏಳು ಬ್ಲೀ’ಡ್ ಲೈನ್ ಗಳಿರುತ್ತವೆ.

ನೋಟಿನ ಎರಡು ಬದಿಗಳಲ್ಲಿ ಕೂಡ ನೀವು ಅದನ್ನು ಪ್ರಿಂಟ್ ಮಾಡಲಾಗಿರುವ ವರ್ಷವನ್ನು ಕಾಣಬಹುದಾಗಿದೆ. ಮಂಗಳಯಾನ(Mangalayana) ಘೋಷವಾಕ್ಯ ಹಾಗೂ ಭಾಷಾ ಫಲಕವನ್ನು ಹೊಂದಿರುತ್ತದೆ. ಸ್ವಚ್ಛ ಭಾರತ ಚಿಹ್ನೆ ಹಾಗೂ ಘೋಷವಾಕ್ಯ ಕೂಡ ಇರುತ್ತದೆ. ಎಲ್ಲಕ್ಕಿಂತ ಪ್ರಮುಖವಾಗಿ ಆರ್‌ಬಿಐ ಮುದ್ರಿಸಲಾಗುವ ನೋಟಿನ ಗುಣಮಟ್ಟವೇ ನಮಗೆ ಸ್ಪರ್ಶಿಸಿದಾಗ ಅನುಭವವಾಗುತ್ತದೆ. ಇವುಗಳೆಲ್ಲ ನಿಮಗೆ ನಕಲಿ ನೋಟನ್ನು ಕಂಡುಹಿಡಿಯಲು ಸಹಾಯಕಾರಿಯಾಗುತ್ತವೆ.

Leave a Comment

error: Content is protected !!